THE BEST ACTOR – KANNADA MICRO MOVIE
Premiered 22 hours ago
“ದಿ ಬೆಸ್ಟ್ ಆ್ಯಕ್ಟರ್ ಸಿನಿಮಾ ಒಬ್ಬ ವ್ಯಕ್ತಿ ಸಾಧನೆಯ ಹಾದಿಯಲ್ಲಿ ಅನುಭವಿಸುವ ತವಕ ತಲ್ಲಣಗಳನ್ನು ಕೇಂದ್ರವಾಗಿಟ್ಟುಕೊಂಡು ಚಿತ್ರಿತವಾಗಿದೆ. ಸಂಚಾರಿ ಥಿಯೇಟರ್ ನಲ್ಲಿ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನಂತರ ತನ್ನದೇ ಸರ್ವಸ್ವ ಎನ್ನುವ ರಂಗ ತಂಡ ಕಟ್ಟಿದ ನಾಗರಾಜ್ ಸೋಮಯಾಜಿ ದಿ ಬೆಸ್ಟ್ ಆ್ಯಕ್ಟರ್ ಸಿನಿಮಾಕ್ಕೆ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕರಾವಳಿಯಲ್ಲಿ ನಾಟಕ ಹಾಗು ಸಿನೆಮಾಗಳಲ್ಲಿ ಸಕ್ರಿಯವಾಗಿರುವ ಮಾಧವ ಕಾರ್ಕಡ ಬಹುಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು ಶಿಶಿರ್ ಕುಮಾರ್, ಮಾಸ್ಟರ್ ಉಲ್ಲಾಸ್ ಸಾಲಿಗ್ರಾಮ, ಪ್ರತಿಮಾ ನಾಯಕ್ ಇನ್ನಿತರ ಪಾತ್ರಗಳನ್ನು ಅಭಿನಯಿಸಿದ್ದಾರೆ.
ಸರ್ವಸ್ವ ಪ್ರೊಡಕ್ಷನ್ಸ್ ಹಾಗೂ ಯುವ ಉದ್ಯಮಿ ದಿನೇಶ್ ವೈದ್ಯ ಅಂಪಾರು ಇವರ ನಿರ್ಮಾಣದಲ್ಲಿ ಮೂಡಿ ಬಂದಿರುವ ಸಿನೆಮಾದ ಮೂಲ ಕಥೆ ಶ್ರೀಧರ ಬನವಾಸಿ ಬರೆದದ್ದು. ಅವರ ಸಣ್ಣ ಕಥೆಯನ್ನು ನಿರ್ದೇಶಕರು ಚಿತ್ರಕತೆಯ ಅಗತ್ಯಕ್ಕೆ ತಕ್ಕಂತೆ ಒಗ್ಗಿಸಿಕೊಂಡಿದ್ದು ಭಾಸ್ಕರ ಬಂಗೇರ ಸಂಭಾಷಣೆ ಬರೆದಿದ್ದಾರೆ. ಎಸ್. ಕೆ. ರಾವ್ ಛಾಯಾಗ್ರಹಣ, ಅರ್ಜುನ್ ರಾಮ್ ಹಿನ್ನಲೇ ಸಂಗೀತ ಹಾಗು ಬಿ. ಎಸ್ ಸಂಕೇತ್ ಸಂಕಲನ ಈ ಸಿನೆಮಾಕ್ಕಿದೆ.
ಪ್ರತಿ ವ್ಯಕ್ತಿಯೂ ತನ್ನ ಬದುಕನ್ನು ಉನ್ನತಗೊಯ್ಯುವ ತುಡಿತ ಹಾಗು ಆ ನಿಟ್ಟಿನಲ್ಲಿ ಶ್ರಮಿಸಬೇಕಾಗಿರುವ ಧೀರ್ಘ ಪಯಣದ ನಡುವೆ ನಡೆಯುವ ಸಂಘರ್ಷಕ್ಕೆ ಸಾಕ್ಷಿಯಾಗಿರುತ್ತಾನೆ. ಕಂಡ ಕನಸು, ಅದನ್ನು ನನಸಾಗಿಸಿಕೊಳ್ಳಲು ಬೇಕಾದ ನಿಷ್ಠೆ, ಆ ನಿಷ್ಠೆಯನ್ನು ಪೋಷಿಸಬಲ್ಲ ಪ್ರತಿಭೆ ಹಾಗೂ ಆ ಪ್ರತಿಭೆಯನ್ನು ಕಾದು ಸಲಹಬಲ್ಲ ಶಕ್ತಿ ಇವುಗಳಲ್ಲಿ ಒಂದರ ಅನುಪಸ್ಥಿತಿ ಕಾಡಿದರು ಆಗಬಲ್ಲ ಅವಘಡಗಳ ಕುರಿತು “ದಿ ಬೆಸ್ಟ್ ಆ್ಯಕ್ಟರ್”ಬೆಳಕು ಚೆಲ್ಲುತ್ತದೆ.
ಕುಂದಾಪುರ ಹಾಗು ಸಾಲಿಗ್ರಾಮ ಪರಿಸರದಲ್ಲಿ ಸಿನೆಮಾದ ಚಿತ್ರೀಕರಣ ನಡೆದಿದ್ದು ಕುಂದಾಪುರ ಪರಿಸರದ ಭಾಷೆ ಹಾಗು ಅಲ್ಲಿನ ತೊಂಭತ್ತರ ದಶಕದ ಜನಜೀವನವನ್ನು ತೋರಿಸಲಾಗಿದೆ.
https://youtu.be/94XNjw6NF4w
“THE BEST ACTOR” movie is featured keeping in mind the struggles and the emotional turmoil faced by a to be actor during the course of success. Nagaraj Somayaji, an Active member of the Sanchari theatre in all its theatre activities who went ahead setting up his own production venture “SARVASVA PRODUCTIONS” has done the screenplay and the direction for THE BEST ACTOR.National Award Winner, Sanchari Vijay has played an important role in this movie. Madhava Karkada who is always very enthusiastic and active in the Theatre and Movies across the Coastal Karnataka has palyed a vital role through the course of the movie.Shishir Kumar, Master Ullas Saligrama, Prathima Nayak are among the cast of “THE BEST ACTOR” Sarvasva Productions and a young enterpreneur Dinesh Vaidya Amparu have joined hands in production while the Story Line has been penned down by Sridhar Banavasi. The original Story Line has been modified to suit the nativity and other lines of screenplay for which the dialogues have been written by Bhaskar Bangera. Cinematography by SK rao, Background Score By Arjun Ramu and edited by BS Sanketh.
A person always wants to excel in all aspects of his life. There is always a struggle, an urge to excel and the course of hardwork in this journey which he witnesses himself through innumerable forms.This journey of success consists of the dream, an urge to achieve his dream, a talent which would make this dream a reality and also an invisible force which holds all of these together. Even if one of these are dragged in the other direction, the entire dream would remain unknown without its existence, THE BEST ACTOR just justifies this.
The movie has been shot in Kundapura and Saligrama which takes us to a period of 90’s with its native language.
Cast:
Ravi: Sanchari Vijay
Mabla: Madhava Karkada
Ravi: Master Ullas Saligrama
Gulabi: Prathima nayak
Maani: Shishir Kumar
CREW:
Director : Nagaraja Somayaji
Story: Sridhar Banavasi.
Dialogues: Bhaskar Bangera.
Cinematography: SK Rao
Background Score: Arjun Ramu
Editor: BS Sanketh
Producers: Dinesh Vaidya Amparu and Sarvasva productions.