Bheema Movie Review: ಫುಲ್ ಆಕ್ಷನ್, ಸ್ಟಾರ್ಟ್ ಟು ಎಂಡ್ ಸಖತ್ ಮಾಸ್ – ದುನಿಯಾ ವಿಜಿ ಭೀಮ ಥಿಯೇಟರ್ ಕಿಂಗ್

Published on

1695 Views
Advertisement

Bheema Movie Review: ದುನಿಯಾ ವಿಜಯ್ ನಟನೆಯ ಬಹುನಿರೀಕ್ಷಿತ ಭೀಮ ಚಿತ್ರ ಶುಕ್ರವಾರ ತೆರೆಕಂಡಿದ್ದು, ರಿಲೀಸ್‌ಗೂ ಮುನ್ನವೇ ಸಾಕಷ್ಟು ಹವಾ‌ ಮೂಡಿಸಿತ್ತು. ಶುಕ್ರವಾರ ರಾಜ್ಯದ ಬಹುತೇಕ ಥಿಯೇಟರ್‌ಗಳಲ್ಲಿ ತೆರೆಕಂಡ ಈ ಚಿತ್ರ, ಜನಮೆಚ್ಚುಗೆ ಗಳಿಸಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ.

Bheema Movie Review

Advertisement

ಮಾದಕ ವಸ್ತು ಅಥವಾ ಡ್ರಗ್ಸ್‌ನ ಮಾರಾಟ ಮತ್ತು ಮತ್ತು ಅದರಿಂದ ಯುವಕರ ಮೇಲಾಗುವ ಪರಿಣಾಮದ ಬಗ್ಗೆ ಈ ಚಿತ್ರ ನಿರ್ಮಾಣ ಮಾಡಲಾಗಿದೆ. ಹಾಗಾಗಿ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವಲ್ಲಿ ಈ ಚಿತ್ರತಂಡ ಯಶಸ್ವಿಯಾಗಿದೆ.

ಸ್ವತಃ ದುನಿಯಾ ವಿಜಯ್ ಅವರೇ ನಟಿಸಿ ನಿರ್ದೇಶಿಸಿರುವ ಈ ಚಿತ್ರ, ಮೊದಲ ದಿನದ ಪ್ರದರ್ಶನದಲ್ಲೇ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

Advertisement

ಮೊದಲ ದಿನವೇ ₹3.95 ಕೋಟಿ ಗಳಿಸಿದ್ದ ಚಿತ್ರ ಎರಡನೇ ದಿನವಾದ ನಿನ್ನೆ ₹3.35 ಕೋಟಿ ಗಳಿಸಿತ್ತು ಎನ್ನಲಾಗಿದೆ.

Bheema Movie Review: ದುನಿಯಾ ವಿಜಯ್ ಡೈರೆಕ್ಷನ್‌ ಸಕ್ಸಸ್

ಇದುವರೆಗೂ ಕೇವಲ ಆಕ್ಷನ್ ಸೀಕ್ವೆಲ್‌ಗಳಿರುವ ಚಿತ್ರಗಳಲ್ಲಿ‌ ನಟಿಸುತ್ತಿದ್ದ ದುನಿಯಾ ವಿಜಯ್, ಈ ಬಾರಿ ಸಂದೇಶವುಳ್ಳ ಚಿತ್ರವೊಂದನ್ನು ಜನರಿಗೆ ತಲುಪಿಸಿ, ಅವರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು.

Advertisement

ಚಿತ್ರದಲ್ಲಿ ಬಹುತೇಕ ಆಕ್ಷನ್ ಸೀಕ್ವೆಲ್‌ಗಳಿದ್ದು, ಬೆಂಗಳೂರಿನ ಕೆಲವು ಮಾಫಿಯಾಗಳನ್ನು ಚಿತ್ರ ಬಿಚ್ಚಿಟ್ಟಿರುವುದರಿಂದ ಸ್ಟೋರಿಲೈನ್ ಮೂಲಕ ಚಿತ್ರವನ್ನು ಹಲವರು ನೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ಹೆಚ್ಚು ಆಕ್ಷನ್ ಹಾಗೂ ನೇರ ಭಾಷೆಗಳಿರುವುದರಿಂದ, ಕಂಪ್ಲೀಟ್ ಮಾಸ್ ಆಕ್ಷನ್ ಚಿತ್ರವಾಗಿದೆ.

ಮೊದಲ ಹಾಫ್‌ನಲ್ಲಿ ನೀವು ನೋಡುವ ಕಾಮಿಡಿ ಹಾಗೂ ಸಾಂಗ್ಸ್‌ಗಳು ಮತ್ತು ಎರಡನೇ ಹಾಫ್‌ನಲ್ಲಿ ನೀವು ನೋಡುವ ಸಖತ್ ಟ್ವಿಸ್ಟ್‌ಗಳು ಇಡೀ ಚಿತ್ರವನ್ನು ಗೆಲ್ಲಿಸಿವೆ.

ಇತ್ತೀಚೆಗೆ ಪರಭಾಷಾ ಚಿತ್ರಗಳ ಪ್ರಭಾವದ ನಡುವೆ, ಕನ್ನಡ ಚಿತ್ರಗಳಿಗೆ ಫ್ಯಾನ್ಸ್ ಥಿಯೇಟರ್‌ಗೆ ಬರಲ್ಲ ಎನ್ನುವ ಮಾತನ್ನು ವಿಜಯ್ ಅವರ ಭೀಮ ಅಕ್ಷರಶಃ ಸುಳ್ಳಾಗಿಸಿದ್ದಾನೆ. ಮೊದಲೆರಡು ದಿನದ ನಂತರ ವೀಕೆಂಡ್‌ ರಜೆ ಹಾಗೂ ಮುಂದಿನ ವಾರದ ಸ್ವಾತಂತ್ರ್ಯ ದಿನಾಚರಣೆಯ ದಿನದ ರಜೆಯ ಲಾಭವೂ ಕೂಡ ಚಿತ್ರಕ್ಕಿದೆ. ರಿವ್ಯೂ ಚೆನ್ನಾಗಿರೋದ್ರಿಂದ ಥಿಯೇಟರ್‌ಗೆ ಇನ್ನಷ್ಟು ಜನ ಬರಬಹುದು ಅನ್ನೋ ನಿರೀಕ್ಷೆ ತಂಡಕ್ಕಿದೆ.

ಇನ್ನು ಚಿತ್ರವನ್ನು ಸಂಪೂರ್ಣವಾಗಿ ದುನಿಯಾ ವಿಜಯ್ ಅವರೇ ನಟಿಸಿ ನಿರ್ದೇಶಿಸಿದ್ದು, ಅವರೊಂದಿಗೆ ನಾಯಕಿಯಾಗಿ ಅಶ್ವಿನಿ ಅಂಬರೀಶ್ ನಟಿಸಿದ್ದಾರೆ.

ಇತರ ಪ್ರಮುಖ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಕಾಕ್ರೋಚ್ ಸುಧಿ, ನಯನಾ ಸೂಡ, ರಾಘು ಶಿವಮೊಗ್ಗ, ಪ್ರಿಯಾ ಶಠಮರ್ಷಣ ಮುಂತಾದವರು ತಮ್ಮ ಪಾತ್ರಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚರಣ್ ರಾಜ್ ಅವರ ಸಂಗೀತ ನಿರ್ದೇಶನ ಅತ್ಯದ್ಭುತವಾಗಿದ್ದು, ಈಗಾಗಲೇ ಟ್ವಿಟ್ಟರ್‌ನಲ್ಲಿ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದೆ.

ಸರಿಸುಮಾರು 125 ದಿನ ಚಿತ್ರೀಕರಿಸಲಾದ ಈ ಭೀಮ ಚಿತ್ರವನ್ನು ಬಹುತೇಕ ಸೆಟ್‌ಗಳಿಲ್ಲದೇ ಚಿತ್ರಿಸಲಾಗಿದೆ.

ನೀವೂ ಥಿಯೇಟರ್‌ನಲ್ಲಿ ನೋಡಿ ಹಾಗೂ ಕನ್ನಡದ ಈ ಸಂದೇಶವುಳ್ಳ ಚಿತ್ರವನ್ನು ಪ್ರೋತ್ಸಾಹಿಸಿ.

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com