flixOye
Buzz

Mr.Bachchan ಆದ ರವಿತೇಜ – ಚಿತ್ರದ ಟ್ರೈಲರ್ ನಲ್ಲಿ ‘ಮಾಸ್ ಮಹಾರಾಜ’ನ ಕಮಾಲ್

ತೆಲುಗು ಚಿತ್ರರಂಗದಲ್ಲಿ ಕಾಮಿಡಿ ಆಕ್ಷನ್ ಚಿತ್ರಗಳ ಮೂಲಕ ಮಾಸ್ ಮಹಾರಾಜ (Mass Maharaja) ಎಂದೇ ಖ್ಯಾತಿ ಪಡೆದಿರುವ ರವಿತೇಜ ಅವರ ಹೊಸ ಚಿತ್ರ ಮಿ.ಬಚ್ಚನ್ (Mr.Bachchan) ಟ್ರೈಲರ್ ರಿಲೀಸ್ ಆಗಿದೆ.

ಈಗಲ್ (Eagle) ಚಿತ್ರದ ಯಶಸ್ಸಿನ ನಂತರ ಚಿತ್ರರಂಗದಲ್ಲಿ ಮತ್ತೆ ಆಕ್ಟಿವ್ ಆಗಿರುವ ಮಾಸ್ ಕಾಮಿಡಿ ಚಿತ್ರಗಳ ಸರದಾರ ರವಿತೇಜ, ಮಿ.ಬಚ್ಚನ್ ಮೂಲಕ ಇನ್ನೊಂದು ಬ್ರೇಕ್ ಪಡೆಯುವ ತವಕದಲ್ಲಿದ್ದಾರೆ.

ಮಿ.ಬಚ್ಚನ್ (Mr.Bachchan) ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ:

Advertisement

ಸರ್ದಾರ್ ಇಂದರ್ ಸಿಂಗ್ ಎನ್ನುವ ಕೈಗಾರಿಕೋದ್ಯಮಿಯೊಬ್ಬರ ಆದಾಯ ತೆರಿಗೆ ದಾಳಿಯ ನೈಜ ಕಥೆಯನ್ನಾಧರಿಸಿದ ಈ ಚಿತ್ರಕ್ಕೆ ಗಬ್ಬರ್ ಸಿಂಗ್ ಡೈರೆಕ್ಟರ್ ಹರೀಶ್ ಶಂಕರ್ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

Mr Bachchan Telugu movie

ಚಿತ್ರದಲ್ಲಿ ರವಿತೇಜ ಅವರೊಂದಿಗೆ, ಭಾಗ್ಯಶ್ರೀ ಬೋರ್ಸೆ, ಜಗಪತಿ ಬಾಬು, ಸಚಿನ್ ಖೇಡ್ಕರ್, ಶುಭಲೇಖ ಸುಧಾಕರ್ ಮುಂತಾದವರಿದ್ದು, ಟಿ,ಜಿ ವಿಶ್ವಪ್ರಸಾದ್ ನಿರ್ಮಾಣ ಹಾಗೂ ವಿವೇಕ್ ಕುಚಿಬೋಟ್ಲಾ ಸಹನಿರ್ಮಾಣವಿದೆ.

ಮಿಕ್ಕಿ ಜೆ ಮಿಯರ್ ಅವರ ಸಂಗೀತ ಹಾಗೂ ಆಯನಂಕ ಬೋಸ್ ಅವರ ಸಿನೇಮಾಟೋಗ್ರಾಫಿಯೊಂದಿಗೆ ಈ ಚಿತ್ರ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ರಿಲೀಸ್ ಆಗಲಿದೆ ಎನ್ನಲಾಗಿದ್ದು, ರವಿತೇಜ ಅವರ ಚಿತ್ರ ಸೂಪರ್ ಹಿಟ್ ಆಗುವ ನಿರೀಕ್ಷೆಯಿದೆ.

ಸಂಬಂಧಿತ · Related