Laughing Buddha Trailer – ಪ್ರಮೋದ್ ಶೆಟ್ರ ಡೊಳ್ಳೊಟ್ಟೆ ಪೊಲೀಸ್ ಪಾತ್ರ ನೋಡಿದ್ರಾ? ಟ್ರೈಲರ್ ಇಲ್ಲಿದೆ ನೋಡಿ.

Published on

1051 Views
Advertisement

Laughing Buddha Trailer: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಏ ಭುಜಂಗ ಇಲ್ಲಿ ಬಾರಾ ಒಂದು ಉಗ್ರ ಹೋರಾಟ ಉಂಟು ಎನ್ನುವ ಡೈಲಾಗ್, ಕಾಂತಾರದಲ್ಲಿ ಪೋಷಕ ಪಾತ್ರದ ಮೂಲಕ ಫುಲ್ ಫೇಮಸ್ ಆದ ಉತ್ತಮ ಪೋಷಕ ನಟ ಪ್ರಮೋದ್ ಶೆಟ್ಟಿಯವರು ಇದೀಗ ಪೊಲೀಸ್ ಪಾತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಕಂಬ್ಯಾಕ್ ಮಾಡಿದ್ದಾರೆ.

ಹೌದು. ಇದುವರೆಗೆ ಪೋಷಕ ಪಾತ್ರಗಳಲ್ಲೇ ಮಿಂಚಿದ್ದ ಪ್ರಮೋದ್ ಶೆಟ್ರಿಗೆ ಆತ್ಮೀಯ ರಿಷಭ್ ಶೆಟ್ರು ಹೊಸ ಪಾತ್ರ ನೀಡಿ ಒಂದು ಚಾಲೆಂಜ್ ಕೊಟ್ಟಿದ್ದಾರೆ.

Advertisement

Pramod Shetty and Rishabh shetty

 

Advertisement

ಪ್ರಮೋದ್ ಶೆಟ್ಟಿಯವರು ನಟಿಸಿರುವ, ರಿಷಭ್ ಶೆಟ್ಟಿಯವರ ನಿರ್ಮಾಣದ, ಎಂ.ಭರತ್ ರಾಜ್ ನಿರ್ದೇಶನದ ‘ಲಾಫಿಂಗ್ ಬುದ್ಧ (Laughing Buddha) ಚಿತ್ರದ ಟ್ರೈಲರ್ ಇಂದು ಬೆಳಗ್ಗೆ ರಿಲೀಸ್ ಆಗಿದೆ.

 Trailer ಅನೌನ್ಸ್ ಮಾಡಿದ ರಿಷಭ್ ಶೆಟ್ಟಿ

ಚಿತ್ರದ ನಿರ್ಮಾಪಕರಾದ ಕಾಂತಾರ ರಿಷಭ್ ಶೆಟ್ಟಿಯವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಟ್ರೈಲರ್ ರಿಲೀಸ್ (Laughing Buddha Trailer) ಬಗ್ಗೆ ಅಪ್ ಡೇಟ್ ನೀಡಿದ್ದಾರೆ.

Advertisement

ಡೊಳ್ಳು ಹೊಟ್ಟೆಯ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಮೋದ್ ಶೆಟ್ಟಿಯವರು, ಟ್ರೈಲರ್ ನಲ್ಲೇ ಚಿತ್ರದ ಕಾಮಿಡಿ-ಥ್ರಿಲ್ಲರ್ ಪವರ್ ತೋರಿಸಿದ್ದಾರೆ.

ಡಿಟೆಕ್ಟಿವ್ ಹಾಗೂ ಕಾಮಿಡಿ ಟಚ್ ಇರುವ ಈ ಚಿತ್ರದಲ್ಲಿ ಸಸ್ಪೆನ್ಸ್ ಅಡಗಿದ್ದು, ಟ್ರೈಲರ್ ನಲ್ಲಿ ಅದನ್ನು ಮುಚ್ಚಿಟ್ಟು ಸಿನಿಪ್ರಿಯರ ಕುತೂಹಲಕ್ಕೆ ಕಿಚ್ಚು ಹಚ್ಚಿದೆ ಲಾಫಿಂಗ್ ಬುದ್ಧ ಚಿತ್ರತಂಡ.

ಲಾಫಿಂಗ್ ಬುದ್ಧ ಚಿತ್ರದ ಟ್ರೈಲರ್ (Laughing Buddha Trailer) ಇಲ್ಲಿದೆ ನೋಡಿ:

ಒಬ್ಬ ಡೊಳ್ಳು ಹೊಟ್ಟೆಯ ಪೊಲೀಸ್ ಎದುರಿಸುವ ಸವಾಲುಗಳು ಹಾಗೂ ಅವನ ಕರ್ತವ್ಯದಲ್ಲಿ ಎದುರಾಗುವ ಸಂಕಷ್ಟಗಳನ್ನು ಈ ಚಿತ್ರ ಬಿಚ್ಚಿಡಲಿದ್ದು, ಈಗಾಗಲೇ ಟ್ರೈಲರ್ ಯೂಟ್ಯೂಬ್ ನಲ್ಲಿ ಟಾಪ್ 5 ಟ್ರೆಂಡಿಂಗ್ ನಲ್ಲಿದೆ.

ಪ್ರಮೋದ್ ಶೆಟ್ಟಿಯವರ ಜೊತೆ ಚಿತ್ರದಲ್ಲಿ ದಿಗಂತ್, ತೇಜು ಬೆಳವಾಡಿ, ಸುಂದರ್ ರಾಜ್, ಪ್ರಕಾಶ್ ತೂಮಿನಾಡು ಮುಂತಾದ ತಾರಾಗಣವಿದ್ದು, ರಿಷಭ್ ಶೆಟ್ಟಿ ಫಿಲಂಸ್ ಬ್ಯಾನರ್ ನಡಿ ಸ್ವತಃ ರಿಷಭ್ ಶೆಟ್ಟಿಯವರೇ ಚಿತ್ರಕ್ಕೆ ಹಣ ಹಾಕಿದ್ದಾರೆ.

ವಿಷ್ಣು ವಿಜಯ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ರಿಲೀಸ್ ದಿನಾಂಕ ಕೂಡ ಫಿಕ್ಸ್ ಆಗಿದ್ದು, ಟ್ರೈಲರ್ ನಲ್ಲೇ ಸಿನಿಮಾ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ.

ಇದನ್ನೂ ಓದಿ: Samarjith Lankesh: ಇಂದ್ರಜಿತ್ ಲಂಕೇಶ್ ಮಗನ ಜೊತೆ ಹುಚ್ಚೆದ್ದು ಕುಣಿದು ‘ಕಿಸ್’ ಕೊಟ್ಟ ಉಪೇಂದ್ರ – ವೈರಲ್ ವಿಡಿಯೋ ಇಲ್ಲಿದೆ!

ಟ್ರೈಲರ್ ನೋಡಿ ಹಾಗೂ ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ನೋಡಿ ಪ್ರೋತ್ಸಾಹಿಸಿ.

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com