flixOye
Buzz

Daali Pictures: ವಿದ್ಯಾಪತಿ ಮೂಲಕ ಕರಾಟೆ ಕಿಂಗ್ ಆದ ನಾಗಭೂಷಣ, ಪ್ರೊಮೋ ಬಗ್ಗೆ ಸಿಕ್ತು ಬಿಗ್ ಅಪ್ ಡೇಟ್

ಡಾಲಿ ಧನಂಜಯ ತಮ್ಮ ಡಾಲಿ ಪಿಕ್ಚರ್ಸ್ (Daali Pictures) ಅಡಿಯಲ್ಲಿ ನಾಲ್ಕನೇ ಸಿನಿಮಾವನ್ನು ನಿರ್ಮಿಸುತ್ತಿದ್ದು, ಅದಕ್ಕೆ ನಟ ನಾಗಭೂಷಣ್ ಅವರನ್ನು ಕರಾಟೆ ಪಟುವಾಗಿ ಪರಿಚಯಿಸಿದ್ದಾರೆ!

Daali Pictures Vidyapathi Nagabhushana Daali Dhananjaya productions

ಹೌದು. ಡಾಲಿ ಧನಂಜಯ ನಿರ್ಮಾಣದ ‘ವಿದ್ಯಾಪತಿ’ ಚಿತ್ರದಲ್ಲಿ ನಟ ನಾಗಭೂಷಣ ಕರಾಟೆ ಪಟುವಿನ ಪಾತ್ರ ಮಾಡಲಿದ್ದಾರೆ.

ಚಿತ್ರದ ಪ್ರೋಮೋ ಬಗ್ಗೆ ಡಾಲಿ ಧನಂಜಯ (Daali Dhananjaya) ಅವರು ಬಿಗ್ ಅಪ್ ಡೇಟ್ ನೀಡಿದ್ದು, ಇಂದು ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿ, ಆಗಸ್ಟ್ 17, 2024 ರ ಬೆಳಿಗ್ಗೆ 10.15 ಕ್ಕೆ ‘ವಿದ್ಯಾಪತಿ’ ಚಿತ್ರದ ಪ್ರೋಮೋ ರಿಲೀಸ್ ಆಗಲಿದೆ ಎನ್ನುವಂತೆ ತಿಳಿಸಿದ್ದಾರೆ.

Daali Pictures ನಿರ್ಮಾಣದ ನಾಲ್ಕನೇ ಚಿತ್ರಕ್ಕೆ ಉಪಾಧ್ಯಕ್ಷ ಚೆಲುವೆ ನಾಯಕಿ

ಡಾಲಿ ಪಿಕ್ಚರ್ಸ್ (Daali Pictures) ಅಡಿಯಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕನೇ ಚಿತ್ರ ಇದಾಗಿದ್ದು, ಚಿತ್ರದಲ್ಲಿ ನಾಗಭೂಷಣ ಅವರಿಗೆ ನಾಯಕಿಯಾಗಿ ಹಿಟ್ಲರ್ ಕಲ್ಯಾಣ ಧಾರಾವಹಿಯ ಚೆಲುವೆ, ಉಪಾಧ್ಯಕ್ಷ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಮಲೈಕಾ ಟಿ ವಸುಪಾಲ್ ಅವರು ಬಣ್ಣ ಹಚ್ಚಿದ್ದಾರೆ.

Vidyapathi Movie Malaika Vasupal Heroine

Vidyapathi Movie Malaika Vasupal Heroine

Vidyapathi Movie Malaika Vasupal Heroine

Vidyapathi Movie Malaika Vasupal Heroine

ಟಗರು ಪಲ್ಯ ಚಿತ್ರದ ಯಶಸ್ಸಿನ ನಂತರ ಇದೀಗ ನಾಲ್ಕನೇ ಚಿತ್ರವನ್ನು ನಿರ್ಮಿಸುತ್ತಿರುವ ಡಾಲಿ ಧನಂಜಯ ಅವರ ನಿರ್ಮಾಣದ ಈ ಚಿತ್ರಕ್ಕೆ, ಇಕ್ಕಟ್ ಸಿನಿಮಾದ ಮೂಲಕ ಟ್ರೆಂಡ್ ಸೃಷ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ಅವರು ಸ್ವತಃ ತಾವೇ ಕಥೆ ಬರೆದು, ಸಂಕಲನ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

Daali Pictures make Vidyapathi movie promo date

ಈ ಆ್ಯಕ್ಷನ್ ಕಾಮಿಡಿ ಚಿತ್ರಕ್ಕೆ ಲವಿತ್ ಛಾಯಾಗ್ರಹಣವಿದ್ದು, ಡಾಸ್ಮೋಡ್ ಅವರ ಸಂಗೀತ ನಿರ್ದೇಶನ, ಮುರುಳಿ ಅವರ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಅವರ ಸಾಹಿತ್ಯ ಹಾಗೂ ಅರ್ಜುನ್ ಮಾಸ್ಟರ್ ಅವರ ಆ್ಯಕ್ಷನ್ ಮೂಲಕ ತೆರೆಕಾಣಲಿದೆ.

ಇದನ್ನೂ ಓದಿ: Laughing Buddha Trailer – ಪ್ರಮೋದ್ ಶೆಟ್ರ ಡೊಳ್ಳೊಟ್ಟೆ ಪೊಲೀಸ್ ಪಾತ್ರ ನೋಡಿದ್ರಾ? ಟ್ರೈಲರ್ ಇಲ್ಲಿದೆ ನೋಡಿ.

ಚಿತ್ರದ ಟ್ರೈಲರ್ ಹಾಗೂ ರಿಲೀಸ್ ಡೇಟ್ ಇನ್ನಷ್ಟೇ ಅನೌನ್ಸ್ ಆಗಬೇಕಿದ್ದು, ವಿದ್ಯಾಪತಿ ಚಿತ್ರದ ಪ್ರೋಮೋ ಬಗ್ಗೆ ಎಲ್ಲರಲ್ಲೂ ಕುತೂಹಲ ಹೆಚ್ಚಿರೋದಂತೂ ಖಂಡಿತಾ.

ಸಂಬಂಧಿತ · Related