ರಾಷ್ಟ್ರೀಯ ಶಿಕ್ಷಣ ನೀತಿ 2020(New Education Policy 2020): ನೀವು ತಿಳಿದುಕೊಳ್ಳಬೇಕಾದದ್ದು
New Education Policy 2020 Highlights
ಇನ್ನು ಮುಂದೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಭಾರತದಲ್ಲಿ ಜಾರಿಯಾಗಲಿದೆ. ಈಗ ಇರುವ 10+2 ಶಿಕ್ಷಣ ವ್ಯವಸ್ಥೆ 5+3+3+4 ಮಾದರಿಯಾಗಿ ಬದಲಾವಣೆಯಾಗಲಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಕೇಂದ್ರ ಸರ್ಕಾರ ಈ ಹಿಂದೆ ಪ್ರಕಟಿಸಿತ್ತು. ಸಾರ್ವಜನಿಕರಿಂದ ಸಲಹೆಗಳನ್ನು ಪಡೆದು ಈಗ ಈ ಹೊಸ ಎನ್‌ಇಪಿಗೆ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗೋಷ್ಠಿ ನಡೆಸಿ ಹೊಸ ನೀತಿಯ ವಿವರಗಳನ್ನು ನೀಡಿದರು.
New Education Policy 2020 Highlights
2015ರಿಂದ ಎನ್‌ಇಪಿ ಜಾರಿ ಸಂಬಂಧ ಚರ್ಚೆ ನಡೆಯುತ್ತಿತ್ತು. ಈಗ ಹೊಸ ನೀತಿ ಜಾರಿಯಾಗಿದೆ. 34 ವರ್ಷದ ಹಿಂದೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಿತ್ತು. ಆದಾದ ಬಳಿಕ ಈಗ ಬದಲಾವಣೆ ಆಗುತ್ತಿದೆ.
– ಜಾರಿಯಾಗಲಿದೆ ಹೊಸ ರಾಷ್ಟ್ರೀಯ ರಾಷ್ಟ್ರೀಯ ಶಿಕ್ಷಣ ನೀತಿ
– 6ನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಕೋಡಿಂಗ್
– 34 ವರ್ಷದ ಬಳಿಕ ಮಹತ್ವದ ಬದಲಾವಣೆ
ಎನ್‌ಇಪಿಯಲ್ಲಿ ಏನಿದೆ?
– ಇನ್ನು ಮುಂದೆ 10+2 ಶಿಕ್ಷಣ ವ್ಯವಸ್ಥೆ ಇರುವುದಿಲ್ಲ. ಇದನ್ನು 5+3+3+4 ರಂತೆ ವಿಂಗಡನೆ ಮಾಡಲಾಗಿದೆ. ಇದರರ್ಥ ಶಾಲೆಯ ಮೊದಲ ಐದು ವರ್ಷಗಳು ಅಡಿಪಾಯ ಹಂತ, 3 ರಿಂದ 5 ನೇ ತರಗತಿಯವರೆಗಿನ ಮೂರು ವರ್ಷಗಳನ್ನು ಪೂರ್ವಸಿದ್ಧತಾ ಹಂತವಾಗಿ ವಿಂಗಡಿಸಲಾಗಿದೆ. ನಂತರ ಮೂರು ವರ್ಷಗಳು ಮಧ್ಯಮ ಹಂತವಾಗಿ ವಿಂಗಡಿಸಲಾಗಿದೆ. ನಂತರದ ನಾಲ್ಕು ವರ್ಷವನ್ನು ದ್ವಿತೀಯ ಹಂತವನ್ನಾಗಿ ವಿಂಗಡಿಸಲಾಗಿದೆ. ಶಾಲೆಗಳು ಶಾಲೆಗಳು ಕಲೆ, ವಾಣಿಜ್ಯ, ವಿಜ್ಞಾನದ ಹೊಳೆಗಳ ಯಾವುದೇ ಕಟ್ಟುನಿಟ್ಟಿನ ರಚನೆಯನ್ನು ಹೊಂದಿರುವುದಿಲ್ಲ, ವಿದ್ಯಾರ್ಥಿಗಳು ತಾವು ಬಯಸುವ ಯಾವುದೇ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು.
– 5ನೇ ತರಗತಿಯವರೆಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಬೇಕು
– 6ನೇ ತರಗತಿಯಿಂದಲೇ ಕೋಡಿಂಗ್ ಪಾಠವನ್ನು ಹೇಳಿಕೊಡಬೇಕು.
– ಸಂಶೋಧನೆ ಸಂಬಂಧ ಇನ್ನು ಮುಂದೆ ಯಾವುದೇ ಎಂಪಿಎಲ್ ಇರುವುದಿಲ್ಲ.
#Cabinet approved National Education Policy 2020; Major reforms in higher education include target of 50% gross enrollment ration by 2035 and provision for multiple entry/exit pic.twitter.com/EMvVJIiI0b
— K.S. Dhatwalia (@DG_PIB) July 29, 2020
– ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವನ್ನು ಶಿಕ್ಷಣ ಸಚಿವಾಲಯ ಎಂದು ಮರು ನಾಮಕರಣ
– ಬೋರ್ಡ್ ಪರೀಕ್ಷೆಗಳ ಮಹತ್ವ ಕಡಿಮೆ ಮಾಡುವುದು, ಪರೀಕ್ಷೆಗಳನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುವುದು
– ಮಾರ್ಕ್ಸ್ ಕಾರ್ಡ್‌ಗಳು ಕೇವಲ ಅಂಕಗಳು ಮತ್ತು ಹೇಳಿಕೆಗಳಿಗೆ ಬದಲಾಗಿ ಕೌಶಲ್ಯ ಮತ್ತು ಸಾಮರ್ಥ್ಯಗಳ ಕುರಿತು ಸಮಗ್ರ ವರದಿ ನೀಡುವುದು
– ಪ್ರತಿ ವಿದ್ಯಾರ್ಥಿ ಒಂದು ಕೌಶಲ್ಯವನ್ನು ಕಲಿಯಲೇಬೇಕು
e-courses will be developed in regional languages; virtual labs will be developed and a National Educational Technology Forum(NETF) is being created pic.twitter.com/k9gkBDD0W6
— K.S. Dhatwalia (@DG_PIB) July 29, 2020
– ವಯಸ್ಕರಿಗೆ ಆ್ಯಪ್ ,ಆನ್ ಲೈನ್, ಟಿವಿ , ಆನ್ ಲೈನ್ ಬುಕ್ ಗಳ ಮೂಲಕ ಕಲಿಕೆಗೆ ಅವಕಾಶ
– ಪ್ರಾದೇಶಿಕ ಭಾಷೆಗಳಲ್ಲಿ ಇ- ಕಂಟೆಂಟ್ ಪೂರೈಕೆ
– ಮಧ್ಯದಲ್ಲಿ ಕೋರ್ಸ್ ಬಿಡಲು ಬಯಸುವರಿಗೆ ಪ್ರವೇಶ ಮತ್ತು ನಿರ್ಗಮನ ಆಯ್ಕೆ
– ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಏಕರೂಪದ ಪರೀಕ್ಷೆ
Here are the broad outcomes expected from National Education Policy 2020 pic.twitter.com/v4swFCvtDQ
— K.S. Dhatwalia (@DG_PIB) July 29, 2020
– ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಸರ್ಕಾರದಿಂದಲೇ ಶುಲ್ಕ ನಿಗದಿ
– ಉನ್ನತ ಶಿಕ್ಷಣದ ನೀಡುವ ಕಾಲೇಜುಗಳಲ್ಲಿ ಸಾಹಿತ್ಯ, ಸಂಗೀತ, ತತ್ವಶಾಸ್ತ್ರ, ಕಲೆ, ನೃತ್ಯ, ರಂಗಭೂಮಿ, ಶಿಕ್ಷಣ, ಗಣಿತ, ಅಂಕಿಅಂಶ, ಶುದ್ಧ ಮತ್ತು ಅನ್ವಯಿಕ ವಿಜ್ಞಾನ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಕ್ರೀಡೆ, ಅನುವಾದ ಮತ್ತು ವ್ಯಾಖ್ಯಾನ ಇತ್ಯಾದಿ ವಿಭಾಗಗಳು ಇರಬೇಕು.
– ಉನ್ನತ ಶಿಕ್ಷಣದಲ್ಲೂ ಮೂರು ರೀತಿಯ ಭಾಷೆ ಕಲಿಕೆಗೆ ಅವಕಾಶ.
#NEP2020
Since most of the learning happens in the mother tongue, we ensured that wherever possible, the medium of instruction until at least Grade 5, but preferably till Grade 8 and beyond, will be the home language/mother-tongue/local language/regional language. pic.twitter.com/RLQdLrUoV2— Dr. Ramesh Pokhriyal Nishank (@DrRPNishank) July 29, 2020