ರಿಲೀಸ್ ಆದ ಭೈರತಿ ರಣಗಲ್ ಟೀಸರ್ – ಶಿವಣ್ಣನ ಡೈಲಾಗ್‌ಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ನಟನೆಯ ಬಹುನಿರೀಕ್ಷಿತ ಚಿತ್ರ ಭೈರತಿ ರಣಗಲ್ ಚಿತ್ರದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದ್ದು, ಶಿವಣ್ಣನ ಡೈಲಾಗ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ನಿನ್ನೆ ಶಿವರಾಜ್‌ಕುಮಾರ್ ಅವರ ಜನ್ಮದಿನ. ಜನ್ಮದಿನದಂದೇ ಬಿಡುಗಡೆಯಾದ ಟೀಸರ್, ಫ್ಯಾನ್ಸ್‌ಗಳಲ್ಲಿ ಹೊಸ ಕ್ರೇಜ಼್ ಹುಟ್ಟುಹಾಕಿದೆ.
ನಾನು ತಾಳ್ಮೆ ಕಳೆದುಕೊಂಡಾಗೆಲ್ಲಾ ತುಂಬಾ ಜನ ತಲೆ ಕಳೆದುಕೊಂಡಿದ್ದಾರೆ ಎನ್ನುವ ಶಿವಣ್ಣನ ಮಾಸ್ ಡೈಲಾಗ್, ಸಿನಿಪ್ರಿಯರಲ್ಲಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.
ಮಫ್ತಿ ಚಿತ್ರದಲ್ಲಿ ಜೊತೆಯಾಗಿದ್ದ ನರ್ತನ್ ಹಾಗೂ ಶಿವಣ್ಣ, ಈ ಚಿತ್ರದಲ್ಲೂ ಪ್ರೀಕ್ವೆಲ್‌ನಲ್ಲಿ ಮತ್ತೆ ಜೊತೆಯಾಗಿದ್ದಾರೆ. ಮಫ್ತಿ ಸಿನಿಮಾದಲ್ಲಿ ಶಿವಣ್ಣನವರ ಪಾತ್ರದ ಹೆಸರಾಗಿದ್ದ ಭೈರತಿ ರಣಗಲ್ ಹೆಸರನ್ನೇ ಚಿತ್ರವನ್ನಾಗಿ ಮಾಡಲಾಗಿದೆ.
ರೌಡಿಸಂ, ಮಾಸ್ ಆಕ್ಷನ್ ಇರುವ ಈ ಚಿತ್ರ ಆಗಸ್ಟ್ 15 ರಂದು ಬಿಡುಗಡೆಯಾಗುತ್ತದೆ ಎನ್ನಲಾಗಿತ್ತು. ಆದರೆ, ಚಿತ್ರತಂಡ ರಿಲೀಸ್ ಮಾಡೋ ಡೇಟ್‌ನ್ನು ಮುಂದಕ್ಕೆ ಹಾಕಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರ ತೆರೆಕಾಣಲಿದೆ ಎನ್ನಲಾಗಿದೆ.
ನರ್ತನ್ ನಿರ್ದೇಶನದ ಈ ಚಿತ್ರವನ್ನು ಗೀತಾ ಶಿವರಾಜ್‌ಕುಮಾರ್ ಅವರ ಗೀತಾ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಟೀಸರ್ ಮೂಲಕವೇ ಸಿನಿಪ್ರಿಯರಿಗೆ ಹುಚ್ಚು ಹಿಡಿಸಿರೋ ಈ ಚಿತ್ರವನ್ನು ಬಿಗ್ ಸ್ಕ್ರೀನ್‌ನಲ್ಲಿ ನೋಡಲು ದಿನಗಳನ್ನು ಎಣಿಸುತ್ತಿರೋದಂತೂ ಸತ್ಯ.
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ https://flixoye.com ನ್ನು ಫಾಲೋ ಮಾಡಿ.