ಕಸ್ತೂರಿ ನಿವಾಸ 500 ರ ಸಂಭ್ರಮ ಸೋಮವಾರದಿಂದ ಶನಿವಾರ ಸಂಜೆ ೭ಕ್ಕೆ
ಉದಯ ಟಿವಿ ವೈವಿಧ್ಯಮಯ ಧಾರಾವಾಹಿಗಳನ್ನ ನೀಡುತ್ತಾ ಜನಮಾನಸದಲ್ಲಿ ಮನೆ ಮಾಡಿದೆ. ಸಂಜೆ 6ರಿಂದ ಪ್ರಸಾರವಾಗುವ ಯಾರಿವಳು ಧಾರಾವಾಹಿಯಿಂದ ರಾತ್ರಿ 10ರ ಸೇವಂತಿ ವರೆಗೂ ಮನರಂಜನೆಯ ಮಹಾಪೂರವನ್ನೇ ಹರಿಸಿದೆ.
ಸಂಬಂಧಗಳ ಮೌಲ್ಯವನ್ನ , ಒಟ್ಟು ಕುಟುಂಬದ ಆನಂದವನ್ನ ಸಾರುವ ಧಾರಾವಾಹಿ ಕಸ್ತೂರಿ ನಿವಾಸ. ಸೋಮವಾರದಿಂದ ಶನಿವಾರದವರೆಗೂ ಸಂಜೆ 7ಕ್ಕೆ ಪ್ರಸಾರವಾಗೋ ಈ ಧಾರಾವಾಹಿಗೆ ಈಗ 500ರ ಮೈಲಿಗಲ್ಲು. ಪಾರ್ವತಿಯ ಹಾಗೆ ಅತ್ತೆ , ಕಸ್ತೂರಿಯಂತ ತಾಯಿಯ ಮಡಿಲು ರಾಘವನಂತ ಸಂಗಾತಿ , ಸತ್ಯಭಾಮ-ನಾಗವೇಣಿಯಂತ ಅತ್ತಿಗೆಯಂದಿರು ಹೀಗೆ ಪ್ರತಿ ಪಾತ್ರವೂ ತನ್ನದೇ ರೀತಿಯಲ್ಲಿ , ತನ್ನದೇ ಶೈಲಿಯಲ್ಲಿ ಪ್ರೇಕ್ಷಕರ ಹೃದಯವನ್ನ ಗೆದ್ದಿದೆ,
ಮೃದುಲಾ ಪಾತ್ರ ಈ ಕಾರ್ಯಕ್ರಮದ ಕೇಂದ್ರಬಿಂದು. ಆ ಪಾತ್ರದ ಅಂತ್ಯಕ್ಕೆ ತೆರೆ ಮೇಲಿನಷ್ಟೆ ಅಲ್ಲದೆ ತೆರೆ ಹಿಂದೆಯೂ ವೀಕ್ಷಕ ವರ್ಗ ಭಾವುಕರಾಗಿದ್ದಾರೆ. ಹಾಗೆ ಖುಷಿ ಅನ್ನೋ ಪಾತ್ರ ಹೆಸರಿನಂತೆಯೇ ಕಸ್ತೂರಿ ನಿವಾಸಕ್ಕೆ ಖುಷಿ ತಂದಿದೆ.
ಕಸ್ತೂರಿ ನಿವಾಸ ದೊಡ್ಡ ತಾರಾ ಬಳಗವನ್ನೇ ಹೊಂದಿದೆ. ಆಶಾರಾಣಿ , ಪದ್ಮಾವಾಸಂತಿ , ಜ್ಯೋತಿ ರೈ, ಸುಂದರಶ್ರಿ , ಋತು , ನರೇಶ , ದಿಲೀಪ್ ಶೆಟ್ಟಿ , ರಿಷಾ , ಸಿತಾರಾ , ಸುವೇದ್ , ವಿನಯ್ ರಾಮಪ್ರಸಾದ್ ಹೀಗೆ ದೊಡ್ಡ ಪಟ್ಟಿಯೇ ಇದೆ. ಜೊತೆಗೆ ಅತಿಥಿಯಾಗಿ ಕನ್ನಡದ ಮೇರು ನಟ ಶ್ರೀನಿವಾಸ ಮೂರ್ತಿ ಕೂಡಾ ಭಾಗಿಯಾಗಿದ್ದಾರೆ.
ದೇವಿ ಸ್ಟುಡಿಯೋಸ್ ನಿರ್ಮಾಣದಲ್ಲಿ ತಯಾರಾಗ್ತಿರೊ ಕಸ್ತೂರಿ ನಿವಾಸದ ನಿರ್ದೆಶಕರಾಗಿ ಮುಸ್ಸಂಜೆ ಮಹೇಶ ಕಾರ್ಯ ನಿರ್ವಹಿಸುತ್ತಿದ್ದಾರೆ. ಹತ್ತು ಹಲವಾರು ಧಾರಾವಾಹಿಗಳನ್ನ ಸೆರೆಹಿಡಿದ ಪದ್ಮನಾಭನ್ ಮಣೆ, ಅದ್ಬುತ ದೃಶ್ಯಗಳನ್ನು ಈ ಧಾರಾವಾಹಿಯಲ್ಲಿ ಚಿತ್ರಿಕರಿಸುತ್ತಿದ್ದಾರೆ , ಮಲ್ಲಿಕಾರ್ಜುನ ಸ್ವಾಮಿ ಸಂಕಲನ ಮಾಡುತ್ತಿದ್ದಾರೆ.
“ನಾನು ಈ ಧಾರಾವಾಹಿಗೆ ಪ್ರವೇಶಿಸೋ ಮುನ್ನವೇ ಕಸ್ತೂರಿ ನಿವಾಸ ಎಲ್ಲರಿಗೂ ಪರಿಚಿತವಾಗಿತ್ತು. ನನಗೆ ಜವಾಬ್ದಾರಿ ಹೆಚ್ಚಿತ್ತು, ತಂಡದ ಸಹಾಯದಿಂದ ಎಲ್ಲರಲ್ಲೂ ನಾನು ಕೂಡ ಒಬ್ಬಳಾದೆ , ಖುಷಿ ಹುಟ್ಟುಹಬ್ಬದ ಸಂಚಿಕೆಗಳು ನನ್ನ ಫೇವರೇಟ್’’ ಎಂದು ಸಂತಸ ಹಂಚಿಕೊಳ್ಳುತ್ತಾರೆ ಖುಷಿ ಪಾತ್ರದಾರಿ ರಿಷಾ.
“ಪಾರ್ವತಿ ತೆರೆ ಮೇಲೇ ಅಷ್ಟೇ ಅಲ್ಲ ತೆರೆ ಹಿಂದೆಯೂ ಅಮ್ಮನಂತೆಯೇ. ಹೀಗೆ ಎಲ್ಲರು ಕಂತುಗಳಲ್ಲಿ ಕಂಡಂತೆ ತೆರೆಯ ಹಿಂದೆಯೂ ಕುಟುಂಬದಂತೆ ಇರುತ್ತೇವೆ . ವೃತ್ತಿ ಬದುಕಲ್ಲಿ ಕಸ್ತೂರಿ ನಿವಾಸ ನನ್ನ ಸ್ಪೇಷಲ್ ಪ್ರಾಜೆಕ್ಟ್ ‘’ ಎಂದು ನಾಯಕ ದಿಲೀಪ್ ಶೆಟ್ಟಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ವೀಕ್ಷಕ ವರ್ಗದ ಎಲ್ಲಾ ಪ್ರಶ್ನೆಗಳಿಗೂ, ಅಪೇಕ್ಷೆಗಳಿಗೂ ಮುಂಬರುವ ಕಂತುಗಳು ಉತ್ತರಿಸಲಿದೆ ಎಂದು ಹೇಳಿ 500ರ ಸಂಭ್ರಮದ ಸಂತಸವನ್ನು ಹಂಚಿಕೊಳ್ಳುತ್ತಾರೆ ಕಸ್ತೂರಿ ನಿವಾಸ ತಂಡ.
ಕಸ್ತೂರಿ ನಿವಾಸ ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 7ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.