C.G.K. Rashtriya Rangothsava – 2018 Short Films

Published on

339 Views

ಚಿತ್ರಕೂಟ ಚಿಕ್ಕಸುರೇಶ ನೆನಪಿನ ಕಿರುಚಿತ್ರ ಪ್ರದರ್ಶನ

ದಾಳಿ

ದಾಳಿ, ಶ್ರೀಮತಿ ವೈದೇಹಿಯವರ ಸಣ್ಣಕಥೆಯನ್ನಾಧರಿಸಿದ ಕಿರುಚಿತ್ರ. ಹಳ್ಳಿಯೊಂದರ ತುಂಬಿದ ಬಸ್ಸಿನಲ್ಲಿ ಹತ್ತಿಕೊಳ್ಳುವ ಒಬ್ಬ ಮಹಿಳೆ ಈ ಚಿತ್ರದ ಕಥಾವಸ್ತು. ಕೂರಲು ಸೀಟು ಕೇಳಿದ ಒಂದೇ ಕಾರಣಕ್ಕೆ ಸಿಡಿದು ಬೀಳುವ ಕಂಡಕ್ಟರ್ ಚಿತ್ರದ ಇನ್ನೊಂದು ಪಾತ್ರ. ಕಂಡಕ್ಟರ್‍ನ ಬಯ್ಗುಳಕ್ಕೆ ಮಹಿಳೆಯ ಅಪರೂಪದ ಪ್ರತಿಕ್ರಿಯೆ ಈ ಕಥಾನಕವನ್ನು ರೂಪಿಸುತ್ತದೆ.
ಇಲ್ಲಿ ಎರಡು ಭಿನ್ನ ಆಯಾಮದ ದಾಳಿಗಳಿವೆ. ಒಂದು ಕಂಡಕ್ಟರ್‍ನ ಆವೇಶದ ದಾಳಿಯಾದರೆ, ಇನ್ನೊಂದು ಈಕೆಯ ಮೌನದ, ಸ್ಥಿರವಾದ ನಗುವಿನ ದಾಳಿ. ಕಂಡಕ್ಟರ್‍ನ ಆವೇಶದ ಮಾತುಗಳೆಲ್ಲದಕ್ಕೂ ನಗುವುನಿಂದಲೇ ಉತ್ತರಿಸುವ ಮಹಿಳೆ ಕೊನೆಯಲ್ಲಿ ಅನಿರೀಕ್ಷಿತ ತಿರುವಿಗೆ ಕಾರಣಳಾಗುತ್ತಾಳೆ. ಆ ನಗುವಿನಲ್ಲಿ ಸಂಘರ್ಷವಿದೆ, ಹೋರಾಟವಿದೆ, ಸತ್ಯಾಗ್ರಹವಿದೆ. ಎದುರಿನ ವ್ಯಕ್ತಿಯ ಅಬ್ಬರದ, ಬಯ್ಗುಳ, ಅವಮರ್ಯಾದೆಗಳಿಗೆ ನಗುವಿನಿಂದಲೇ ಉತ್ತರಿಸುವ ಮಹಿಳೆ ‘ದಾಳಿ’ಗೆ ಹೊಸ ಅರ್ಥವನ್ನು ನೀಡುತ್ತಾಳೆ.

ಕಿರುಚಿತ್ರದ ನಿರ್ದೇಶನ: ಮೇದಿನಿ ಕೆಳಮನೆ

————————————————————–

ಮೂರು ಬಣ್ಣಗಳು

ಸಾಲದ ಹೊರೆಯಿಂದ ಕಂಗಾಲಾಗಿರುವ ಯುವಕನೊಬ್ಬ ಹಳ್ಳಿಯಲ್ಲಿರುವ ಜಮೀನು ಮಾರಲು ತಂದೆಯನ್ನು ಒಪ್ಪಿಸುವ ಉದ್ದೇಶದಿಂದ ತನ್ನ ಹಳ್ಳಿಗೆ ಹೋಗುತ್ತಾನೆ. ಅಲ್ಲಿ ದೊರೆಯುವ ಪ್ರೀತಿ, ವಾತ್ಸಲ್ಯ ಅವನ ಮನಸ್ಸನ್ನು ಪರಿವರ್ತನೆ ಮಾಡುತ್ತದೆ. ಈ ಭೇಟಿ ಆ ಯುವಕ ತನ್ನ ತಂದೆಯೊಡನೆ ಮತ್ತೆ ವಾತ್ಸಲ್ಯ ಸಂಬಂಧ ಬೆಸೆದುಕೊಳ್ಳುವಂತೆ ಮಾಡುತ್ತದೆ.
ಕಿರುಚಿತ್ರದ ನಿರ್ದೇಶನ : ಬಾಲಾಜಿ ಮನೋಹರ್

————————————–

ವೈಟಿಂಗ್

ವ್ಯವಹಾರಿಕ ಪ್ರಪಂಚದಲ್ಲಿ ಕಳೆದುಹೋಗಿರುವ ಎರಡು ಆತ್ಮಗಳ ಕಥೆ.
ಕಿರುಚಿತ್ರದ ನಿರ್ದೇಶನ : ಬಿ.ಎಂ.ಗಿರಿರಾಜ್

——————————————

ಅನಲ..
ಮದುವೆ ಎಂಬ ವ್ಯವಸ್ಥೆ ಹುಟ್ಟುಹಾಕಿರುವ ಲಿಂಗಾಧಾರಿತ ಪಾತ್ರಗಳು ಸಮಾಜದಲ್ಲಿ ಎಷ್ಟು ಆಳವಾಗಿ ಬೇರೂರಿವೆ ಎಂದರೆ ಇಂದಿನ ದಿನಮಾನದ ಆಧುನಿಕರೆನಿಸಿದ ಕುಟುಂಬಗಳಲ್ಲಿ ಸಹ, ಈ ಸಿದ್ಧ ಮಾದರಿಯಲ್ಲಾಗುವ ಸಣ್ಣ ವ್ಯತ್ಯಾಸಗಳು ಕೂಡ ಅನೂಹ್ಯ ಪರಿಣಾಮಗಳನ್ನುಂಟು ಮಾಡಬಲ್ಲವು.

ಅನಲ-ಜಗದೀಶ್ ದಂಪತಿಗಳ ನಡುವೆಒಂದು ಬೆಳಿಗ್ಗೆ ನಡೆಯುವ ಕಥಾನಕ ಅನಲದ ವಸ್ತು. ಅನಲ ಕೇವಲ ಒಂದು ದಿನದ ಮಟ್ಟಿಗೆ ತನ್ನ ತಥಾಕಥಿತ ‘ಹೆಂಡತಿ” ಪಾತ್ರದಿಂದ ಕೊಂಚ ಭಿನ್ನವಾಗಿ ಇರಲು ಯತ್ನಿಸುವುದು ಆಕೆಯ ಊಹೆಗೂ ನಿಲುಕದ ಪರಿಣಾಮಗಳಿಗೆ ಎಡೆಮಾಡಿಕೊಡುತ್ತದೆ. ಜಗದೀಶನಿಗೆ ಹೆಂಡತಿ ತಾನು ಕಲ್ಪಿಸಿದ ಪಾತ್ರವನ್ನು ಹೊರತುಪಡಿಸಿ ಸ್ವಲ್ಪ ಭಿನ್ನ ಅಭಿವ್ಯಕ್ತಿ ತೋರುವುದೂ ವಿಚಿತ್ರ ತಲ್ಲಣಗಳನ್ನು ಉಂಟುಮಾಡುತ್ತದೆ.
ಹೆಣ್ಣನ್ನು ಸದಾ ತನ್ನ ಅಂಕೆಯಲ್ಲಿಟ್ಟುಕೊಳ್ಳ ಬಯಸುವ, ಆದರೆ ಯಾವುದೇ ಕ್ಷಣದಲ್ಲಿ ಈ ನಿಯಂತ್ರಣ ತಪ್ಪಿ ಹೋಗಬಹುದೆಂಬ ಗಂಡಿನ ನಿರಂತರ ಆತಂಕವನ್ನು ಈ ತಲ್ಲಣಗಳು ಬಿಂಬಿಸುತ್ತವೆ. ಒಬ್ಬ ಮೃದು ಸ್ವಭಾವದ ಸದ್ಗøಹಸ್ತನಾಗಿ ತೋರುವಜಗದೀಶನ ಮನಸ್ಥಿತಿ ಸಹ ಸಮಾಜದಲ್ಲಿನ ಈ ‘ಗಂಡು’ ಆಲೋಚನೆಯ ಪ್ರತೀಕವೇ ಆಗಿದೆ.
ಕಿರುಚಿತ್ರದ ನಿರ್ದೇಶನ : ಸಂಜ್ಯೋತಿ ವಿ.ಕೆ.

——————————————————-

ಕಪ್ಪು ಕಲ್ಲಿನ ಶೈತಾನ
ಕುನ್ನಿಪಟ್ಟು ಬ್ಯಾರಿ ಮುಸ್ಲಿಂ ವಿಧವೆ. ಮಗಳು ಸಕೀನಾ, ಸೊಸೆ ಸಾರ ಮತ್ತು ಮೊಮ್ಮಗ ಅದ್ರಾಮನೊಡನೆ ವಾಸಿಸುವ ಈಕೆ ಬದುಕು ಸಾಗಿಸಲು ಬೀಡಿ ಕಟ್ಟುತ್ತಿರುತ್ತಾಳೆ. ಹೀಗಿರುವಾಗ ಮೊಮ್ಮಗ ಅದ್ರಾಮ ಒಂದು ಸುದ್ದಿ ತರುತ್ತಾನೆ, ಎಲೆಕ್ಷನ್ ಘೋಷಣೆ ಆಗಿರುವುದರಿಂದ ಬಡವರಿಗೆ ಎರಡು ರೂಗೆ ಒಂದು ಕೇಜಿಯಂತೆ ಅಕ್ಕಿ ಸಿಗುತ್ತದೆ ಎನ್ನುವ ಆ ಸುದ್ದಿ ಅವರ ಬದುಕಿನ ಆಶಾಕಿರಣದಂತೆ ಕಾಣಿಸುತ್ತದೆ. ಕುನ್ನಿಪಟ್ಟು ಪಟ್ಟಣದಲ್ಲಿನ ಬೀಡಿ ಕೇಂದ್ರಕ್ಕೆ ಹೋದಾಗ, ವಿಲೇಜ್ ಪಂಚಾಯತಿಯ ಸದಸ್ಯರು ಪ್ರತಿ ಮನೆಗೂ ಭೇಟಿ ಕೊಟ್ಟು ಫಲಾನುಭವಿಗಳನ್ನು ಗುರುತಿಸುತ್ತಾರೆ ಎನ್ನುವ ವಿಷಯ ಅವಳಿಗೆ ಗೊತ್ತಾಗುತ್ತದೆ. ಆ ಯೋಜನೆಯ ಗರಿಷ್ಠ ಲಾಭ ಪಡೆಯಲೆಂದು ಆಕೆ ಒಂದು ಉಪಾಯ ಮಾಡುತ್ತಾಳೆ, ತನ್ನ ಗುಡಿಸಲನ್ನು ಮೂರು ಭಾಗ ಮಾಡಿ, ಅಲ್ಲಿ ಮೂರು ಕುಟುಂಬ ವಾಸವಿದೆ ಎಂದು ಹೇಳುವ ಉಪಾಯ ಮಾಡುತ್ತಾಳೆ. ಆಮೇಲೆ ಪಂಚಾಯತಿಯ ಸದಸ್ಯರಿಗಾಗಿ ಕಾಯುವಿಕೆ ಶುರುವಾಗುತ್ತದೆ. ಅವರು ಬಂದರೆ? ಆ ಕುಟುಂಬಕ್ಕೆ ಯೊಜನೆಯ ಫಲ ಸಿಗುತ್ತದೆಯೆ?

ಕಿರುಚಿತ್ರದ ನಿರ್ದೇಶನ : ಅನನ್ಯ ಕಾಸರವಳ್ಳಿ

—————————————

ಅಮೂರ್ತ
ಸಂಜೀವ ರಾವ್ ನಿವೃತ್ತ ರೈಲ್ವೆ ಕೆಲಸಗಾರರು. ಈ ವಯಸ್ಸಿನಲ್ಲಿ ಅವರ ಬದುಕಿನ ಒಂದೇ ಬಯಕೆ ಮಗಳು ಶಾಲಿನಿಯ ಮದುವೆ. ಪ್ರತಿದಿನ ತಪ್ಪದೆ ಮ್ಯಾಟ್ರಿಮನಿ ವೆಬ್ ಸೈಟ್ ಗೆ ಭೇಟಿ, ತಮ್ಮ ಡೈರಿಯಲ್ಲಿ ಮದುವೆ ಗಂಡುಗಳ ವಿವರ ನೋಟ್ ಮಾಡಿಕೊಂಡು, ಅವರನ್ನು ಸಂಪರ್ಕಿಸುತ್ತಿರುತ್ತಾರೆ. ಇದು ಅವರ ದೈನಂದಿನ ದಿನಚರಿಯ ಒಂದು ಭಾಗವೇ ಆಗಿ ಹೋಗಿರುತ್ತದೆ. ಹೀಗೆ ಅವರು ಏಕಾಂತ್ ಎನ್ನುವ ವ್ಯಕ್ತಿಯ ವಿವರಗಳನ್ನು ನೋಟ್ ಮಾಡಿಕೊಂಡು ಅವನನ್ನು ಸಂಪರ್ಕಿಸುತ್ತಾರೆ. ಅವರ ಮಾತುಗಳನ್ನು ಕೇಳಿ ಏಕಾಂತ್ ಶಾಲಿನಿಯನ್ನು ಭೇಟಿ ಆಗಲು ಆಕೆಯ ಆಫೀಸಿಗೆ ಹೋಗುತ್ತಾನೆ. ಅಲ್ಲಿ ಅವನಿಗೆ ಶಾಲಿನಿಯ ಬದುಕಿನ ರಹಸ್ಯದ ಅರಿವಾಗುತ್ತದೆ.
ಕಿರುಚಿತ್ರದ ನಿರ್ದೇಶನ : ಅರವಿಂದ್ ಕುಪ್ಲಿಕರ್


—————————————————-

ಫೈರ್ ಎಂಜಿನ್
ಈ ಚಿತ್ರ ಬೆಂಗಳೂರಿನ ಸಮಕಾಲೀನ ನಗರ ಜೀವನದ ಬಗ್ಗೆ ಒಂದು ಓರೆ ನೋಟ ಬೀರುತ್ತದೆ. ನಗರದ ಬದುಕು ಸದಾ ಹೊಸ ಬದುಕಿನ ಬಗ್ಗೆ, ಒಬ್ಬರು ಇನ್ನೊಬ್ಬರ ಜೊತೆಗೆ ಸಂಪರ್ಕದಲ್ಲಿರಲು ದೊರಕುವ ಸಂವಹನದ ಹೊಸ ಹೊಸ ದಾರಿಗಳ ಬಗ್ಗೆ ಭರವಸೆಗಳನ್ನು ಕೊಡುತ್ತಲೇ ಇರುತ್ತದೆ. ಆದರೆ ಮನುಷ್ಯನ ಪ್ರತಿ ಭಾವನೆ ಒಂದಲ್ಲ ಒಂದು ತಂತ್ರಜ್ಞಾನದ ಮಧ್ಯಸ್ಥಿಕೆಯಿಂದಲೇ ಇನ್ನೊಬ್ಬರನ್ನು ತಾಕಬೇಕಾಗಿರುವ ಈ ಕಾಲಘಟ್ಟದಲ್ಲಿ, ಪ್ರೀತಿ, ಸಹಾನುಭೂತಿ, ಕ್ಷಮೆ ಎಲ್ಲವೂ ತಮ್ಮ ಮೂಲ ಅರ್ಥವನ್ನು ಕಳೆದುಕೊಂಡಂತೆ ಕಾಣುತ್ತಿದೆ. ಬಹುಮಹಡಿ ವಸತಿ ಪ್ರದೇಶದಲ್ಲಿ ವಾಸಿಸುವ ಇಬ್ಬರು ಮಹಿಳೆಯರ ಮೂಲಕ ಚಿತ್ರ ಇದನ್ನು ಹೇಳಲು ಪ್ರಯತ್ನಿಸುತ್ತದೆ.

ಕಿರುಚಿತ್ರದ ನಿರ್ದೇಶನ : ಉತ್ಥಾನ ಭಾರಿಘಾಟ್

————————————————–

ನಿರ್ವಾಣ

ಅನಿರೀಕ್ಷಿತವಾಗಿ, ಅಂದುಕೊಳ್ಳದ ಪರಿಸ್ಥಿತಿಯಲ್ಲಿ ಕಥೆಯ ಎರಡು ಪಾತ್ರಗಳು ಭೇಟಿಯಾಗುತ್ತವೆ. ಅವರಿಬ್ಬರೂ ಬಾಲ್ಯಕಾಲದ ಗೆಳೆಯರು ಎಂದು ಗೊತ್ತಾದಾಗ, ಒಟ್ಟಿಗೆ ಹೋಗಿ ಕೆಲವು ಡ್ರಿಂಕ್‍ಗಳ ಜೊತೆಯಲ್ಲಿ ಹಳೆಯ ನೆನಪುಗಳನ್ನು ಮೆಲುಕುಹಾಕೋಣ ಎಂದುಕೊಂಡು ಹೊರಡುತ್ತಾರೆ. ಅವರ ನಿನ್ನೆಗಳು, ಅವರ ವ್ಯಕ್ತಿತ್ವ ರೂಪುಗೊಂಡ ಬಗೆ, ಬದುಕಿನ ಹಾದಿ ಎಲ್ಲದರ ಬಗ್ಗೆಯೂ ಮಾತನಾಡುತ್ತಾರೆ. ಅವರ ಈ ಸಂಭಾಷಣೆ ಮತ್ತು ಅವರಿಬ್ಬರ ವ್ಯಕ್ತಿತ್ವಗಳೊಳಗಿನ ಬಿಕ್ಕಟ್ಟುಗಳು ಕತೆಯ ವಸ್ತು.

ಕಿರುಚಿತ್ರದ ನಿರ್ದೇಶನ : ಮೌನೇಶ್ ಬಡಿಗೇರ

—————————————————-

ಮಹಾಸಂಪರ್ಕ
‘ಮಹಾಸಂಪರ್ಕ – ಎರಡು ಬೇರೆ ಬೇರೆ ಸ್ಥಳಗಳಲ್ಲಿ, ಎರಡು ಬೇರೆ ಬೇರೆ ಕಾಲಘಟ್ಟಗಳಲ್ಲಿ ಬದುಕುತ್ತಿರುವ ಇಬ್ಬರು ವ್ಯಕ್ತಿಗಳು ಒಂದು ವಿಚಿತ್ರ ಸಂಘಟನೆಯಿಂದ ಪರಸ್ಪರ ಸಂಪರ್ಕಕ್ಕೆ ಬರುವ ಕಥೆ ಇದು. ಚಿಂದಿ ಆಯುವ ರಮೇಶ ಯಾವುದೇ ಉದ್ದೇಶವಿಲ್ಲದ ಒಂಟಿ ಬದುಕು ಬದುಕುತ್ತಿರುತ್ತಾನೆ. ಒಂದು ದಿನ ಅವನಿಗೊಂದು ಹಳೆಯ ಟಿವಿ ಸಿಗುತ್ತದೆ. ಅದನ್ನು ಚಾಲು ಮಾಡಲು ಅನೇಕ ಸಲ ಪ್ರಯತ್ನಿಸಿ ಸಾಧ್ಯವಾಗದ್ದಾಗ ಇದೊಂದು ಕೆಟ್ಟು ಹೋಗಿರುವ ಡಬ್ಬಾ ಎನ್ನುವ ತೀರ್ಮಾನಕ್ಕೆ ಬರುತ್ತಾನೆ. ಕೆಲವೇ ಕ್ಷಣಗಳ ನಂತರ ಟಿವಿ ತನ್ನಿಂದ ತಾನೆ ಆನ್ ಆಗುತ್ತದೆ, ಅದರೊಳಗಿನಿಂದ ಲಕ್ಷ್ಮಿ ಎನ್ನುವ ಹುಡುಗಿ ಅವನೆಡೆಗೆ ನೋಡುತ್ತಿರುತ್ತಾಳೆ.
ಸ್ವಲ್ಪ ಸಮಯದ ನಂತರ ಈ ಟೀವಿ ಇಬ್ಬರಿಗೂ ಇನ್ನೊಬ್ಬರ ಪ್ರಪಂಚಕ್ಕೆ ಇರುವ ಕಿಟಕಿ ಎನ್ನುವುದು ಇಬ್ಬರಿಗೂ ಅರ್ಥವಾಗುತ್ತದೆ. ನಿಧಾನವಾಗಿ ಅವರಿಬ್ಬರೂ ಮಾತನಾಡಲು ಪ್ರಾರಂಭಿಸುತ್ತಾರೆ. ಇಬ್ಬರೂ ಒಂಟಿಯಾಗಿ ಬದುಕುತ್ತಿರುತ್ತಾರೆ, ಹಾಗಾಗಿ ಈ ಪರಿಚಯ ಹೊಸಬದುಕಿಗೆ ನಾಂದಿ ಎಂದು ಲಕ್ಷ್ಮಿ ಭಾವಿಸುತ್ತಾಳೆ. ಆಗರೆ ಕ್ರಮೇಣ ಇಬ್ಬರಿಗೂ ಅವರು ಬೇರೆ ಬೇರೆ ಕಾಲಘಟ್ಟದಲ್ಲಿದ್ದಾರೆ, ಲಕ್ಷ್ಮಿ 1984ರಲ್ಲಿ ಮತ್ತು ರಮೇಶ 2015ರಲ್ಲಿದ್ದಾರೆ ಎನ್ನುವುದು ಅರಿವಾಗುತ್ತದೆ. . . ನಂತರ ಏನಾಗುತ್ತದೆ ಎನ್ನುವುದು ಕಥೆ.

ಕಿರುಚಿತ್ರದ ನಿರ್ದೇಶನ : ಸಂತೋಷ್ ಜಿ.


——————————————

ಕುರ್ಲಿ
ಸಿದ್ಧಿ ಸುಬ್ಬ ತೋಟವೊಂದರಲ್ಲಿ ಬಾಳೆಗೊನೆ ಕದ್ದು ಬಚ್ಚಿಡುತ್ತಾನೆ.ಅದೇ ತೋಟಕ್ಕೆ ಅವನ ಮಕ್ಕಳು ಏಡಿ ಹಿಡಿಯಲು ಹೋಗುತ್ತಾರೆ.ತೋಟದ ಮಾಲೀಕರಿಗೆ ಕದ್ದ ಬಾಳೆಗೊನೆ ಸಿಗುತ್ತದೆ. ಕದ್ದ ಆರೋಪ ಸಿದ್ಧಿ ಸುಬ್ಬನ ಮಗನ ಮೇಲೆ ಬರುತ್ತದೆ ಆದರೆ ಮಗ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ ಯಾಕೆಂದರೆ ಅವನಿಗೆ ಪರಿಸ್ಥಿತಿಯ ಅರಿವೇ ಇಲ್ಲ.

ಕಿರುಚಿತ್ರದ ನಿರ್ದೇಶನ : ನಟೇಶ್ ಹೆಗಡೆ


————————————–

Rangosthava Invitetion English pdf

Sorry, no posts matched your criteria.

More Buzz

Trailers 5 months ago

Rudra Garuda Purana Official Teaser Starring Rishi, Priyanka

Trailers 5 months ago

Pepe Kannada Movie Trailer Starring Vinay Rajkumar

BuzzKollywood Buzz 5 months ago

The GOAT Movie: Trailer ಗೂ ಟ್ರೈಲರ್ ರಿಲೀಸ್ ಮಾಡಿದ ವಿಜಯ್ ನಟನೆಯ ಚಿತ್ರತಂಡ

Buzz 5 months ago

Daali Pictures: ವಿದ್ಯಾಪತಿ ಮೂಲಕ ಕರಾಟೆ ಕಿಂಗ್ ಆದ ನಾಗಭೂಷಣ, ಪ್ರೊಮೋ ಬಗ್ಗೆ ಸಿಕ್ತು ಬಿಗ್ ಅಪ್ ಡೇಟ್

BuzzTrailers 5 months ago

Laughing Buddha Trailer – ಪ್ರಮೋದ್ ಶೆಟ್ರ ಡೊಳ್ಳೊಟ್ಟೆ ಪೊಲೀಸ್ ಪಾತ್ರ ನೋಡಿದ್ರಾ? ಟ್ರೈಲರ್ ಇಲ್ಲಿದೆ ನೋಡಿ.

Buzz 5 months ago

Samarjith Lankesh: ಇಂದ್ರಜಿತ್ ಲಂಕೇಶ್ ಮಗನ ಜೊತೆ ಹುಚ್ಚೆದ್ದು ಕುಣಿದು ‘ಕಿಸ್’ ಕೊಟ್ಟ ಉಪೇಂದ್ರ – ವೈರಲ್ ವಿಡಿಯೋ ಇಲ್ಲಿದೆ!

Buzz 5 months ago

Abhishek Aishwarya Divorce – ನಾವು ಡಿವೋರ್ಸ್ ಪಡೆಯಲಿದ್ದೇವೆ ಎಂದ ಅಭಿಷೇಕ್‌ ಬಚ್ಚನ್ ವಿಡಿಯೋ ವೈರಲ್ – ಅಸಲಿಯತ್ತೇನು?

Buzz 5 months ago

Tharun Sonal Marriage: ಸಪ್ತಪದಿ ತುಳಿಯಲಿರುವ ತರುಣ್ – ಸೋನಲ್, ನಟಿ ನಿರ್ದೇಶಕ ಜೋಡಿಗೆ ಹಲವಾರು ಗಣ್ಯರ ಆಶೀರ್ವಾದ

Buzz 5 months ago

Bheema Movie Review: ಫುಲ್ ಆಕ್ಷನ್, ಸ್ಟಾರ್ಟ್ ಟು ಎಂಡ್ ಸಖತ್ ಮಾಸ್ – ದುನಿಯಾ ವಿಜಿ ಭೀಮ ಥಿಯೇಟರ್ ಕಿಂಗ್

BuzzTollywood Buzz 6 months ago

Naga Chaithanya – Shobhitha Dhulipala: ದೀರ್ಘಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಮಂತಾ ಮಾಜಿ ಪತಿ ನಾಗಚೈತನ್ಯ

BuzzTollywood Buzz 6 months ago

Mr.Bachchan ಆದ ರವಿತೇಜ – ಚಿತ್ರದ ಟ್ರೈಲರ್ ನಲ್ಲಿ ‘ಮಾಸ್ ಮಹಾರಾಜ’ನ ಕಮಾಲ್

BuzzShort Films 6 months ago

Kanjoos Kubera Short Film Official Video: ಕಂಜ್ಯೂಸ್ ಕುಬೇರ ಕನ್ನಡ ಕಿರುಚಿತ್ರ ನೋಡಿ.

Copyright ©2025 . All Rights Reserved. privacy | terms Whatsapp: 9538193653 Email: hello@flixoye.com