ಬಿಡುಗಡೆಯಾಗಲಿದೆ ಯುವರತ್ನ ಚಿತ್ರದ ಮತ್ತೊಂದು ಗೀತೆ
ಹೊಂಬಾಳೆ ಫಿಲಂಸ್ ರವರ ಬಹುನಿರೀಕ್ಷಿತ ಚಿತ್ರ ಯುವರತ್ನ. ಚಿತ್ರ ಬಿಡುಗಡೆಗೆ ಮುಂಚೆಯೇ ಬಾರಿ ನಿರೀಕ್ಷೆ ಮೂಡಿಸಿದೆ.
ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್ ಒಳ್ಳೊಳ್ಳೆಯ ಸಿನಿಮಾಗಳನ್ನು ನೀಡಿದ್ದಾರೆ. KGF ಚಿತ್ರದ ಮೂಲಕ ಪ್ಯಾನ್ ಇಂಡಿಯ ಚಿತ್ರ ನಿರ್ಮಾಪಕನಾಗಿ ಭಾರತೀಯ ಚಿತ್ರರಂಗದಲ್ಲಿ ಒಳ್ಳೆಯ ಹೆಸರುಗಳಿಸಿದ್ದಾರೆ.
‘ಶುಗರ್ ಫ್ಯಾಕ್ಟರಿ’ ಗೆ ಗ್ಲಾಮರ್ ಗೊಂಬೆ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಸೇರ್ಪಡೆ
ಈ ಚಿತ್ರದ ಎರಡನೇ ಹಾಡು ‘ ನೀನಾದೆ ನಾ ‘ ಇದೇ ಡಿಸೆಂಬರ್ 25ರಂದು ಹೊಂಬಾಳೆ ಫಿಲಂಸ್ ಯುಟ್ಯೂಬ್ ಚಾನೆಲ್ ನಲ್ಲಿ 12: ೦5ಕ್ಕೆ ಬಿಡುಗಡೆಯಾಗಲಿದೆ.
ಕನ್ನಡದಲ್ಲಿ ಗೌಸ್ ಪೀರ್ ಅವರು ಸಾಹಿತ್ಯ ಬರೆದಿದ್ದಾರೆ ಹಾಗೆ ರಮಜೋಗಯ್ಯ ಶಾಸ್ತ್ರಿಯವರು ತೆಲುಗಿನಲ್ಲಿ ಬರೆದಿದ್ದಾರೆ. ಹಿನ್ನೆಲೆ ಸಂಗೀತ S. ತಮನ್ ಅವರು ನಿರ್ವಹಿಸಿದ್ದಾರೆ.
ಶ್ರೇಯಾ ಘೋಷಾಲ್ ಹಾಗೂ ಅರ್ಮಾನ್ ಮಲಿಕ್ ಈ ಹಾಡನ್ನು ಹಾಡಿದ್ದಾರೆ.
ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಪುನೀತ್ ರಾಜಕುಮಾರ್ ಗೆ ಎರಡನೇ ಚಿತ್ರ ಇದಾಗಿದೆ.
ಈಗಾಗಲೇ ಸಂತೋಷ್ ಆನಂದ್ ರಾಮ್ ರವರು ಮಿ. ಅಂಡ್ ಮಿಸ್ಸಸ್ ರಾಮಾಚಾರಿ ಹಾಗೂ ರಾಜಕುಮಾರ ದಂತ ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಯಶಸ್ವಿ ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದಾರೆ ಈಗ ಯುವರತ್ನ ಚಿತ್ರವನ್ನು ನೋಡಲು ಪ್ರೇಕ್ಷಕರು ಕೂಡ ಕಾತುರರಾಗಿದ್ದಾರೆ.