ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕ
Actor Ramesh Aravind’s Daughter Niharika Tied a Knot with Akshay ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕ
ನಟ ರಮೇಶ್ ಅರವಿಂದ್ ಅವರ ಮನೆಯಲ್ಲಿ ಇಂದು ಮದುವೆ ಸಂಭ್ರಮ. ರಮೇಶ್ ಅವರ ಪುತ್ರಿ ನಿಹಾರಿಕ ಸಾಫ್ಟ್‌ವೇರ್ ಉದ್ಯೋಗಿ ಅಕ್ಷಯ್ ಎಂಬವರ ಜೊತೆ ಸಪ್ತಪದಿ ತುಳಿದಿದ್ದಾರೆ.
ನಗರದ ಬನ್ನೇರುಘಟ್ಟ ರಸ್ತೆಯಲ್ಲಿ ಖಾಸಗಿ ರೆಸಾರ್ಟ್ ನಲ್ಲಿ ಬೆಳಿಗ್ಗೆ 11ರಿಂದ 11.30ರ ಶುಭ ಸಮಾರಂಭದಲ್ಲಿ ಮದುವೆ ಕಾರ್ಯಕ್ರಮ ನೆರವೇರಿದ್ದು ನಿಹಾರಿಕಾ ಸಹೋದ್ಯೋಗಿ ಅಕ್ಷಯ್ ನನ್ನು ವರಿಸಿದ್ದಾರೆ.
ನಿಹಾರಿಕ ಹಾಗೂ ಅಕ್ಷಯ್ ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು. ಈಗ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಕೊರೊನಾ ಸಾಂಕ್ರಾಮಿಕದ ಕಾರಣ ಎರಡು ಕುಟಂಬಗಳ ಸದಸ್ಯರ ಸಮ್ಮುಖದಲ್ಲಿ ಕೋವಿಡ್ 19 ನಿಯಮಾನುಸಾರ ಸರಳವಾಗಿ ನಿಹಾರಿಕ ಹಾಗೂ ಅಕ್ಷಯ್ ಅವರ ವಿವಾಹ ನೇರವೇರಿದೆ
ಜನವರಿ ಎರಡನೇ ವಾರದಲ್ಲಿ ಆರತಕ್ಷತೆ ಆಯೋಜಿಸಲಾಗಿದ್ದು, ಅಂದು ಚಿತ್ರರಂಗ ಸೇರಿದಂತೆ ಎಲ್ಲಾ ಕ್ಷೇತ್ರಗಳ ಗಣ್ಯರನ್ನು ರಮೇಶ್ ಆಹ್ವಾನಿಸಿದ್ದಾರೆ.