The GOAT Movie: Trailer ಗೂ ಟ್ರೈಲರ್ ರಿಲೀಸ್ ಮಾಡಿದ ವಿಜಯ್ ನಟನೆಯ ಚಿತ್ರತಂಡ

Published on

988 Views

ತಮಿಳಿನ ಖ್ಯಾತ ನಟ ಇಳಯದಳಪತಿ ವಿಜಯ್ ಅವರ ಬಹುನಿರೀಕ್ಷಿತ ಗೋಟ್ (The Goat Movie – The Greatest Of All Time) ಚಿತ್ರತಂಡ ಟ್ರೈಲರ್ ಗೂ ಟ್ರೈಲರ್ ಬಿಡುಗಡೆ ಮಾಡಿ ಕ್ರೇಜ್ ಹೆಚ್ಚಿಸಿದೆ!

The Goat Movie Actor Vijay

ಹೌದು. ಹಲವು ಖ್ಯಾತ ನಟರನ್ನೇ ಹೊಂದಿರುವ ವಿಜಯ್ ಅವರ ಈ ಚಿತ್ರದ ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್ ಗೂ ಟ್ರೈಲರ್ ರೆಡಿ ಮಾಡಿ, ಬಿಡುಗಡೆಗೊಳಿಸಿರುವ ಚಿತ್ರತಂಡ, ಟ್ವಿಟ್ಟರ್ ನಲ್ಲಿ ಬಹುದೊಡ್ಡ ಟ್ರೆಂಡ್ ಅನ್ನೇ ಸೃಷ್ಟಿಸಿದೆ.

ಎಜಿಎಸ್ ಎಂಟರ್ ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸೈನ್ಸ್ ಫಿಕ್ಷನ್ ಆಧಾರಿತ ಚಿತ್ರಕ್ಕೆ ವೆಂಕಟ್ ಪ್ರಭು ಆಕ್ಷನ್ ಕಟ್ ಹೇಳಿದ್ದಾರೆ.

ಇದನ್ನೂ ಓದಿ: Daali Pictures: ವಿದ್ಯಾಪತಿ ಮೂಲಕ ಕರಾಟೆ ಕಿಂಗ್ ಆದ ನಾಗಭೂಷಣ, ಪ್ರೊಮೋ ಬಗ್ಗೆ ಸಿಕ್ತು ಬಿಗ್ ಅಪ್ ಡೇಟ್

The GOAT Movie: ಚಿತ್ರದಲ್ಲಿದೆ ದಿಗ್ಗಜರ ದಂಡು

ಬರೋಬ್ಬರಿ 300 ಕೋಟಿ ಬಜೆಟ್ ನೊಂದಿಗೆ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ವಿಜಯ್ ಅವರೊಂದಿಗೆ ಮೀನಾಕ್ಷಿ ಚೌಧರಿ, ಮಾಳವಿಕಾ ಶರ್ಮಾ, ಪ್ರಶಾಂತ್, ರಾಘವ್ ಲಾರೆಕ್ಸ್, ಪ್ರಭುದೇವ ಮುಂತಾದ ದಿಗ್ಗಜ ನಟರ ದಂಡೇ ಇದೆ.

ವಿಶೇಷ ಎಂದರೆ, ಈ ಚಿತ್ರದಲ್ಲಿ ಕನ್ನಡದ ಬಾದಷಾ ಕಿಚ್ಚ ಸುದೀಪ ಅವರು ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯ್ ನಟನೆಯ ಈ ಬಹುನಿರೀಕ್ಷಿತ ಚಿತ್ರದ ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಟ್ರೈಲರ್ ನೋಡಲು ನಿಮ್ಮ ಕಾತರಕ್ಕೆ ತಂಡ ಇನ್ನಷ್ಟು ಕಿಚ್ಚು ಹಚ್ಚಿರುವುದಂತೂ ಖಂಡಿತ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com