Su from So Review – ಕನ್ನಡದ ಬೆಸ್ಟ್ ಕಾಮಿಡಿ ಮೂವಿ ವಿಮರ್ಶೆ

Published on

1934 Views
Advertisement

Su from So – ಕನ್ನಡದ ಬೆಸ್ಟ್ ಕಾಮಿಡಿ ಮೂವಿ ಲಿಸ್ಟ್ ಗೆ ಸೇರಲಿರುವ ಈ ವರ್ಷದ ಸಿನಿಮಾ.

Su fro So Review  ಕನ್ನಡದ ಬೆಸ್ಟ್ ಕಾಮಿಡಿ ಮೂವಿ . ಕಥೆಯ ಕೇಂದ್ರದಲ್ಲಿರುವುದು ಮಂಗಳೂರಿನ ಸಮೀಕ್ಷಿತ “ಮಡಯಾರ್” / “ಮಾರ್ಲೂರಾ” ಗ್ರಾಮ: ಅಲ್ಲಿ ಅಶೋಕ (ಜಿಪಿ ತುಮಿನಾಡ್‌ ರಂಗಭೂಷಣಕ್ಕೆ ಹಾಗೂ ಪಾತ್ರಕ್ಕೆ ಅರ್ಹ) ಎಂಬ ವ್ಯಕ್ತಿಯ ಮೇಲೆ ಸುಲೋಚನ ಎಂಬ ಆತ್ಮ ಹೊಕ್ಕಿರುತ್ತದೆ ಎನ್ನುವ ಹಾಸ್ಯಮಯ ಕಥೆ.

ಕನ್ನಡದ ಬೆಸ್ಟ್ ಕಾಮಿಡಿ ಮೂವಿ ಲಿಸ್ಟ್ ಗೆ ಸೇರಲಿರುವ ಈ ವರ್ಷದ ಸಿನಿಮಾ. ಊರಿನಲ್ಲಿ ಮೇಸ್ತ್ರಿಯಾಗಿರುವ ರವಿಯಣ್ಣ (ಶನಿಲ್ ಗೌತಮ್) ಎಲ್ಲರಿಗೂ ಅಚ್ಚುಮೆಚ್ಚು.  ರವಿಯಣ್ಣ ಮದುವೆಯಾಗದ, ಇನ್ನು ಹುಡುಗಿಯನ್ನು ಹುಡುಕುತ್ತಿರುವ  ಸ್ವಲ್ಪ ಮೂವತೈದರ ಆಸುಪಾಸಿನ ವ್ಯಕ್ತಿ ಎಂದರು ತಪ್ಪಾಗಲಾರದು. ಊರಿನಲ್ಲಿ ಮದುವೆ, ತಿಥಿ ಯಾವುದೇ ಸಮಾರಂಭ, ಇಲ್ಲ ಯಾವುದೇ ಸಮಸ್ಯೆಗಳಿಗೆ ರವಿಯಣ್ಣನಿಂದ ಸಲಹೆ , ಸೂಚನೆ ಅತ್ಯಗತ್ಯ. ಊರಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುವುದು ರವಿಯಣ್ಣ ನಲ್ಲೇ, ತೋರಿಕೆಗೆ ಈತ ಧೈರ್ಯಶಾಲಿ . ಎಲ್ಲಾ ಸಂದರ್ಭದಲ್ಲಿ ಜೊತೆಯಲ್ಲಿರೋ ಸತೀಶನಿಗೆ (ದೀಪಕ್ ರೈ ಪಾಣಾಜೆ) ಹಾಗೂ ಚಂದ್ರ ನಿಗೆ (ಪ್ರಕಾಶ್ ತುಮಿನಾಡು) ಯಾವಾಗಲೂ ರವಿಯಣ್ಣನೇ ಮೊದಲ ಆದ್ಯತೆ. ಹೀಗಾಗಿ ರವಿಯಣ್ಣನಿಗೆ ಕೆಲವು ಸಂದರ್ಭಗಳು ಅನುಕೂಲ ಎನಿಸ್ಸಿದ್ದರು , ಕೆಲವೊಮ್ಮೆ ಅನನುಕೂಲನು ಕೂಡ ಹೌದು.

Advertisement

ಪೈಂಟರ್ ಕೆಲಸ ಮಾಡುತ್ತಿರುವ  ಅಶೋಕ( J P thuminad) ನಿಗೆ ಊರಿನ ಹುಡುಗಿಯೊಬ್ಬಳ ಮೇಲೆ ಪ್ರೀತಿ. ರವಿಯಣ್ಣನಿಗೆ ಸಿಗುತ್ತಿರುವ ಮೊದಲ ಆದ್ಯತೆ ಅಶೋಕನಿಗೆ ಹೊಟ್ಟೆ ಕಿಚ್ಚು. ಅಶೋಕನ ಮೇಲಿರುವ ಆತ್ಮ ರವಿಯಣ್ಣನಿಗೆ ದೊಡ್ಡ ಸಮಸ್ಯೆ. ಪರಿಹಾರಕ್ಕಾಗಿ ಕರುಣಾಕರ (ರಾಜ್ ಬಿ ಶೆಟ್ಟಿ) ಗುರೂಜಿಯ ಆಗಮನ. ಸುಲೋಚನಾ ನ ಮಗಳು ಭಾನು (ಸಂಧ್ಯಾ ಅರೆಕೆರೆ)  ಹಾಗೂ ಅಶೋಕನ (ಸುಲೋಚನ) ನಡುವೆ ನಡೆಯುವ ಮಾತುಕತೆ.  ಕೊನೆಯದಾಗಿ ಭಾನುವಿನ ಸಮಸ್ಯೆಯ ಪರಿಹಾರಕ್ಕೆ ಅವಳ ತಾಯಿಯ ಆತ್ಮದ ಹೋರಾಟ ಎನ್ನುವುದು ಜನಸಾಮಾನ್ಯರ ಅಭಿಪ್ರಾಯ.

Su From So

Advertisement

 

Su from So Review – Danks Anthem

ಕರಾವಳಿ ಭಾಗದವರ ಸಾವಿನ ಮನೆಯಲ್ಲಿ ನಡೆಯುವ ತಮಾಷೆ,  ಪಿತೃ ಗಳಿಗೆ ಊಟ ಹಾಕಿ ಇಡುವ ಸಂಪ್ರದಾಯ, ಮದುವೆ ಸಮಾರಂಭಕ್ಕೆ ಹೋಗುವ ತರಾತುರಿ, ಮುಖ್ಯವಾಗಿ ರಿಸೆಪ್ಶನ್ ಅಲ್ಲಿ ಮಾಡೋ ಮೋಜು ಮಸ್ತಿ, ತರಕಾರಿ ಊಟಕ್ಕಿಂತ , ಮೀನು ಕೋಳಿ ಊಟಕ್ಕೆ ಏನೇ ಕೆಲಸ ಇದ್ದರು ಬಿಟ್ಟು ಹಾಜರಿರುತ್ತಾರೆ ಎನ್ನುವುದು ತುಂಬ ಸ್ವಾಭಾವಿಕವಾಗಿ ಮೂಡಿ ಬಂದಿದೆ.

Advertisement

ಮದುವೆ ಸಮಾರಂಭ ಗಳಲ್ಲಿ ಅಕ್ಕನ ಗಂಡನ ಡ್ರಾಮಾ. ಯಾವುದೋ ಒಂದು ಹಳೆ ಭೂತದ ಕಥೆ ಹೇಳ್ಬೇಕಾದ್ರೆ ಒಬ್ಬ ವ್ಯಕ್ತಿಗೆ ಮೈ ಮೇಲೆ ಭೂತ ಬಂದಾಗ ಆ ವ್ಯಕ್ತಿ ಮಾಡೋ ಶಬ್ದ. ಇದೆಲ್ಲ ತಿಳಿದವರಿಗೆ ಅಥವಾ ನೋಡಿಕೊಂಡು ಬೆಳೆದವರಿಗೆ ಈ ಚಿಕ್ಕ ಚಿಕ್ಕ ವಿಚಾರಗಳಲ್ಲಿ ನೈಜತೆಯನ್ನು ನೆನೆದು ಹೊಟ್ಟೆ ತುಂಬ ನಗು ಬರುವುದು ಖಂಡಿತ. ಒಟ್ಟಾರೆಯಾಗಿ ಹಳ್ಳಿಯ ಜನರ ಸಂಪ್ರದಾಯವನ್ನು ತೋರಿಸುವ ಪ್ರಯತ್ನ ತುಂಬಾ ಚೆನ್ನಾಗಿತ್ತು.

ಪಿತೃ ಗಳಿಗೆ ಊಟವಿಟ್ಟಾಗ, ಮನೆಯೊಳಗೆ ಹೋಗಬಾರದು , ಹೋದರೆ ಆ ಆತ್ಮ ನೋಡಿದ ವ್ಯಕ್ತಿಯ ಮೈ ಮೇಲೆ ಬರುವುದು ಎನ್ನುವುದು ವಾಡಿಕೆ. ಆದರೆ ಅಶೋಕ ತನ್ನ ಹುಡುಗಿಯ ಫೋನ್ ಕಾಲ್ ರಿಸೀವ್ ಮಾಡುವ ಉದ್ದೇಶ ದಿಂದ ಮನೆಯೊಳಗೆ ಹೋಗುವುದು ಒಂದು ಮುಖ್ಯವಾದ ಸನ್ನಿವೇಶ. ಆದರೆ  ಮುಂದೊಂದು ದಿನ ಅಶೋಕ ಯಾರೋ ಸ್ನಾನಮಾಡುವಾಗ ಇಣುಕಿ ನೋಡಿ ಸಿಕ್ಕಿಹಾಕಿಕೊಳ್ಳುವ ಸಂದರ್ಭದಲ್ಲಿ, ಈ ಜನರ ನಂಬಿಕೆಯ ಆತ್ಮವನ್ನು ಪರಿಹಾರವಾಗಿ ಉಪಯೋಗೋಸಿಕೊಳ್ಳುತ್ತಾನೆ. ಇದರಿಂದ ಹೊರಬರಲು ಮಾಡಿದ ನಾಟಕ, ಜನರ ಬಾಯಲ್ಲೇ ಹುಟ್ಟಿದ ಸುಲೋಚನನ ಆತ್ಮ. ಮುಂದೆ ಬರುವ ಸೋಮೇಶ್ವರದ ಸುಲೋಚನ, ಅವಳ ಮಗಳು ಭಾನುವಿನ ಸಮಸ್ಯೆಗೆ ಪರಿಹಾರವಾಗಿ ಬದಲಾಗುವುದು. ಅಶೋಕನ ಸಮಸ್ಯೆಗೆ ಪರಿಹಾರ ವಾಗಿ ಹುಟ್ಟಿದ ಸೋಮೇಶ್ವರದ ಸುಲೋಚನ, ಭಾನುವಿನ ಸಮಸ್ಯೆಗೆ ಪರಿಹಾರ ವಾಗುತ್ತಾಳೆ. ಈ ಭಾನುವು ರವಿಯಣ್ಣನು ಮದುವೆ ಆಗಲು ನೋಡಲು ಹೋದ ಮೊದಲ ಹುಡುಗಿ ಎನ್ನುವುದು ಕಾಲ್ಪನಿಕ ಕಥೆಗೆ ಇನ್ನು ಬಣ್ಣ ಹಚ್ಚುತ್ತದೆ.  ಕೊನೆಯದಾಗಿ ಇದೆಲ್ಲ ನೈಜ ಪ್ರಕರಣ ಕರಾವಳಿಯ ಜನರಿಗೆ ಈ ಚಿತ್ರ ಒಂಥರ ಫುಲ್ ಚಿಕನ್ ಅಥವಾ ಫಿಶ್ ಊಟ ಮಾಡಿದ ಅನುಭವ ಎಣಿಸಿದ್ದರೂ ತಪ್ಪಾಗಲಾರದು.

Advertisement

ಅಶೋಕನ ಲವ್ ಸ್ಟೋರಿ, ಸ್ನಾನ ಮಾಡುವಾಗ ಇಣುಕಿ ನೋಡಿದವನ ನಿಖರ ಹುಡುಕಾಟ, ಇವೆರೆಡು ವಿಚಾರಗಳು ಚಿತ್ರದಲ್ಲಿ ಸೇರಿದ್ದರೆ, ಪ್ರೇಕ್ಷಕರ ಮನರಂಜನೆಗೆ ಮತ್ತಷ್ಟು ರೋಮಾಂಚಕ ಕಾರಣವಾಗಿರುತ್ತಿತ್ತು.

Su From So ಟ್ರೈಲರ್ – ಹಾಸ್ಯಮಯ ಸಿನಿಮೀಯ ಪ್ರಯಾಣ click here to watch trailer 

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com