Tharun Sonal Marriage: ಸಪ್ತಪದಿ ತುಳಿಯಲಿರುವ ತರುಣ್ – ಸೋನಲ್, ನಟಿ ನಿರ್ದೇಶಕ ಜೋಡಿಗೆ ಹಲವಾರು ಗಣ್ಯರ ಆಶೀರ್ವಾದ
Tharun Sonal Marriage: ಹಲವಾರು ಸಮಯಗಳಿಂದ ಮದುವೆಯಾಗುತ್ತಾರೆ ಎನ್ನುವ ವದಂತಿ ಸುಳ್ಳು ಎನ್ನುತ್ತಲೇ ಬಂದಿದ್ದ ಜೋಡಿ, ಇತ್ತೀಚೆಗಷ್ಟೇ ತಮ್ಮ ಮದುವೆಯ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದರು. ಹಾಗೂ ಆಗಸ್ಟ್ 11 ರಂದು ಮದುವೆಯಾಗುವುದಾಗಿಯೂ ತಿಳಿಸಿದ್ದರು.
ಇದೀಗ, ನಿನ್ನೆ ನಡೆದ ಅದ್ದೂರಿ ಸೆಟಪ್‌ನಲ್ಲಿ ತರುಣ್ ಸೋನಲ್ ಮದುವೆಯ ರಿಸೆಪ್ಷನ್ ಅದ್ದೂರಿಯಾಗಿ ನಡೆದಿದೆ.
ಮದುವೆ ಅನೌನ್ಸ್ ಆದಾಗಿನಿಂದ ತರುಣ್ – ಸೋನಲ್ ಹಿಂದೆ ಬಿದ್ದಿರುವ ಮೀಡಿಯಾ, ಅವರ ಅರಸಿನ ಶಾಸ್ತ್ರ, ರಿಸೆಪ್ಷನ್ ಎಲ್ಲವನ್ನೂ ಚಿತ್ರೀಕರಿಸಿದೆ. ರಿಸೆಪ್ಷನ್ ಗೆ ಬಂದ ಹಲವು ಗಣ್ಯರ ಫೋಟೊ, ವಿಡಿಯೋಗಳನ್ನು ಸೆರೆಹಿಡಿದಿದ್ದು ಅವೆಲ್ಲವೂ ವೈರಲ್ ಆಗುತ್ತಿದೆ.
ನಮ್ಮ ಅರಿಶಿಣ ಶಾಸ್ತ್ರ ಪ್ರೀತಿ ಮತ್ತು ಸಂಪ್ರದಾಯದ ಸಂಭ್ರಮವಾಗಿತ್ತು. ಹಳದಿಯ ಆಚರಣೆ ಹೊಳೆಯುವಂತೆ ಮಾಡಿದ ಪ್ರತಿಯೊಬ್ಬರಿಗೂ ನಮ್ಮ ಧನ್ಯವಾದಗಳು 💛
Yesterday’s haldi ceremony was a vibrant celebration of love and tradition. A heartfelt thank you to everyone who made it magical — the stunning decor, the… pic.twitter.com/G1U63J54eZ
— Tharun Sudhir (@TharunSudhir) August 10, 2024
ಮಾಜಿ ಸಿಎಂ ಯಡಿಯೂರಪ್ಪ, ಡಿಸಿಎಂ ಡಿಕೆಶಿ ಸೇರಿದಂತೆ ಹಲವು ರಾಜಕಾರಣಿಗಳು, ಜಗ್ಗೇಶ್, ರಿಷಭ್ ಶೆಟ್ಟಿ, ದುನಿಯಾ ವಿಜಯ್, ಡಾಲಿ ಧನಂಜಯ, ಹರ್ಷಿಕಾ ಪೂಣಚ್ಚ, ಸುಮಲತಾ – ಅಭಿಷೇಕ್ ಅಂಬರೀಶ್, ಮಾಲಾಶ್ರೀ, ನಿಶ್ವಿಕಾ ನಾಯ್ಡು, ಪ್ರೇಮ್, ಸೃಜನ್ ಲೋಕೇಶ್, ರಾಗಿಣಿ ಮುಂತಾದ ಹಲವಾರು ಚಿತ್ರತಾರೆಗಳ ದಂಡೇ ಆಗಮಿಸಿತ್ತು.
ನಟ, ನಿರ್ದೇಶಕರಾದ ಶ್ರೀ ತರುಣ್ ಸುಧೀರ್ ಅವರ ವಿವಾಹ ಆರತಕ್ಷತೆಯಲ್ಲಿ ಇಂದು ಪಾಲ್ಗೊಂಡು, ನವ ಜೋಡಿಗೆ ಶುಭ ಹಾರೈಸಿದೆ. pic.twitter.com/gMJlV2Kw1x
— DK Shivakumar (@DKShivakumar) August 10, 2024
ಸಿಲ್ವರ್ ಬಣ್ಣದ ಲೆಹೆಂಗಾ ತೊಟ್ಟು ಮದುಮಗಳು ಸೋನಲ್ ಮಿಂಚಿದರೆ, ಕಪ್ಪು ಮತ್ತು ಸಿಲ್ವರ್ ಬಣ್ಣದ ಕೋಟ್‌ನಲ್ಲಿ ಮದುಮಗ ತರುಣ್ ಸುಧೀರ್ ಕಂಗೊಳಿಸುತ್ತಿದ್ದರು.
Tharun Sonal Marriage: ಮದುವೆಯ ಮುಂಚಿನ ದಿನ ಅರಸಿನ ಶಾಸ್ತ್ರ , ರಿಸೆಪ್ಷನ್
ಮದುವೆಯ ಮುಂಚಿನ ದಿನ ಅದ್ದೂರಿಯಾಗಿ ಇಬ್ಬರ ಅರಶಿನ ಶಾಸ್ತ್ರ ಹಾಗೂ ರಿಸೆಪ್ಷನ್ ಸಂಭ್ರಮ ನಡೆದಿದ್ದು, ಅಸಂಖ್ಯಾತ ಚಿತ್ರತಾರೆಗಳ ದಂಡೇ ಆಗಮಿಸಿತ್ತು.
ದರ್ಶನ್ ಅವರ ಕಾಟೇರ ಚಿತ್ರದ ಡೈರೆಕ್ಷನ್ ಮಾಡಿದ್ದ ತರುಣ್ ಸುಧೀರ್, ಅದರಲ್ಲಿ ನಾಯಕಿಯಾಗಿ ನಟಿಸಿದ್ದ ಸೋನಲ್ ಜೊತೆ ಲವ್ ನಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಆದರೆ ನಟ ದರ್ಶನ್ ಇದೀಗ ಜೈಲಿನಲ್ಲಿದ್ದು, ಅವರ ಉಪಸ್ಥಿತಿ ಇರಬೇಕಿತ್ತು ಎಂದು ಹಲವು ಫ್ಯಾನ್ಸ್ ಆಡಿಕೊಳ್ಳುತ್ತಿದ್ದಾರೆ.
ಇಂದು ಹಿಂದೂ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ತರುಣ್ ಸುಧೀರ್ ಸೋನಲ್ ಮೊಂತೆರೋ ಅವರ ಕೈಹಿಡಿಯಲಿದ್ದು, ತನ್ನ ಜನ್ಮದಿನದಂದೇ ಸೋನಲ್ ಸಪ್ತಪದಿ ತುಳಿಯುತ್ತಿರುವುದು ವಿಶೇಷ.
ಮದುವೆಯ ಬಗ್ಗೆ ಹಲವು ಸಮಯಗಳಿಂದ ಸುದ್ದಿಯನ್ನು ಗುಪ್ತವಾಗಿಯೇ ಇಟ್ಟಿದ್ದ ಜೋಡಿ ಹಾಗೂ ಕುಟುಂಬ, ಇದೀಗ ಕೈಹಿಡಿಯಲು ಸಿದ್ಧವಾಗಿದೆ. ರಿಸೆಪ್ಷನ್ ಸಮಯದಲ್ಲಿ ತರುಣ್ ಅವರ ತಾಯಿ ಮಗನ ಬಗ್ಗೆ ಮಾತನಾಡುತ್ತಾ ಭಾವುಕರಾದರು.
ಅಷ್ಟೇ ಅಲ್ಲದೇ, ಸೊಸೆ ಸೋನಲ್ ಗೆ ದೃಷ್ಟಿ ಆಗಿದೆ ಎಂದು ಸೀರೆ ಸೆರಗಿನಿಂದ ತರುಣ್ ತಾಯಿ ದೃಷ್ಟಿ ತೆಗೆದ ದೃಶ್ಯ ಎಲ್ಲರನ್ನೂ ಮೂಕರಾಗಿಸಿತ್ತು.
ಇಂದು ಮದುವೆಗೆ ಕೂಡ ಹಲವಾರು ಗಣ್ಯರ ಆಗಮನವಾಗಲಿದೆ ಎನ್ನಲಾಗಿದ್ದು, ನಿರ್ದೇಶಕ – ನಟಿ ಜೋಡಿ ಜೀವನದ ಸಿನಿಮಾಕ್ಕೆ ಮದುವೆಯ ಮುಹೂರ್ತದ ಮೂಲಕ ಸೂಪರ್ ಹಿಟ್ ದಾಂಪತ್ಯ ಕಾಣಲಿ ಎನ್ನುವುದೇ ಎಲ್ಲರ ಹಾರೈಕೆ.