ಮೇಘಾ ಶೆಟ್ಟಿ ‘ಟ್ರಿಬಲ್ ರೈಡಿಂಗ್’ ಮೂಲಕ ಬೆಳ್ಳಿ ತೆರೆಗೆ ಪ್ರವೇಶ
ಮೇಘಾ ಶೆಟ್ಟಿ ನಿರ್ದೇಶಕ ಮಹೇಶ್ ಗೌಡರ ಟ್ರಿಬಲ್ ರೈಡಿಂಗ್ ನೊಂದಿಗೆ ಕಿರುತೆರೆಯಿಂದ ಹಿರಿತೆರೆಗೆ ಪ್ರವೇಶ ಪಡೆಯಲಿದ್ದಾರೆ. “ಟ್ರಿಬಲ್ ರೈಡಿಂಗ್” ಇದರಲ್ಲಿ ಮೇಘಾ ಶೆಟ್ಟಿ ಅವರು ಗಣೇಶ್ ಎದುರು ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಅನಿರುದ್ಧ ಅವರೊಂದಿಗೆ ‘ಜೊತೆ ಜೊತೆಯಲಿ’ ಸೀರಿಯಲ್ ನಲ್ಲಿ 20 ವರ್ಷದ ಕಾಲೇಜು ವಿದ್ಯಾರ್ಥಿನಿಯಾಗಿ ಅನು ಪಾತ್ರದಲ್ಲಿ ಮೇಘಾ ನಟಿಸಿದ್ದು ” ಕಿರುತೆರೆಯಲ್ಲಿ ಅನು ಪಾತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್‌ನೊಂದಿಗೆ ತನ್ನ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಲು ಉತ್ಸುಕಳಾಗಿದ್ದ ಮೇಘಾ ತನ್ನ ಮೊದಲ ಸಂದರ್ಶನದಲ್ಲಿ, “ನನ್ನ ನಟನೆ ಮತ್ತು ಟಿವಿ ಧಾರಾವಾಹಿಯ ಭಾಗವಾಗುವುದು ಅನಿರೀಕ್ಷಿತವಾಗಿತ್ತು.
ಈಗ ನನಗೆ ಬರುತ್ತಿರುವ ಚಿತ್ರವೂ ಅಷ್ಟೇ ಆಶ್ಚರ್ಯಕರವಾಗಿದೆ” ಎಂದು ಮೇಘಾ ಹೇಳುತ್ತಾರೆ. ಎಂಬಿಎ ಪದವೀಧರರಾದ ಮೇಘಾ ರಂಗಭೂಮಿ ಕಲಾವಿದರ ಕುಟುಂಬದಿಂದ ಬಂದವರು. ಆಕೆಯ ತಂದೆ ಮತ್ತು ಅಜ್ಜಿ ರಂಗಭೂಮಿ ನಟರು. ಝಿ ಟಿವಿ ಕನ್ನಡದ ಮುಖ್ಯಸ್ಥ ರಾಘವೇಂದ್ರ ಹುಣಸೂರ್ ಅವರ ಪ್ರತಿಭೆಯನ್ನು ಗುರುತಿಸಿದರೂ, ಅವರು ತಮ್ಮ ನಟನಾ ವೃತ್ತಿಜೀವನದ ನಿರ್ಧಾರ ತೆಗೆದುಕೊಳ್ಳುವ ವಿಷಯದಲ್ಲಿನ ಕ್ರೆಡಿಟ್ ತಮ್ಮ ಸಹೋದರಿ ಕುಸುಮಾವತಿಯವರಿಗೆ ಸಲ್ಲುತ್ತದೆ ಎಂದಿದ್ದಾರೆ.
ನಡೆದಾಡುವ ಸಂಗೀತ ವಿಶ್ವವಿದ್ಯಾಲಯದ ಮುಂದೆ ಕುಳಿತು…
“ನನ್ನ ಸಹೋದರಿ ನನ್ನ ಯೋಜನೆಗಳನ್ನು ನೋಡಿಕೊಳ್ಳುತ್ತಾಳೆ. ಮತ್ತು ಕನ್ನಡ ಚಲನಚಿತ್ರೋದ್ಯಮದಲ್ಲಿ ನನ್ನ ಮೊದಲ ಸಿನಿಮಾ ‘ಟ್ರಿಬಲ್ ರೈಡಿಂಗ್’ ಉತ್ತಮ ಚಿತ್ರ ಎಂದು ಹೇಳಿದ ಮೇಲೆ ನಾನು ಒಪ್ಪಿಕೊಂಡೆ” ಎಂದು ಮೇಘಾ ಹೇಳುತ್ತಾರೆ. ಈಗ ತನ್ನ ಧಾರಾವಾಹಿ ಮತ್ತು ಚಿತ್ರದ ನಡುವೆ ಶೂಟಿಂಗ್ ವೇಳಾಪಟ್ಟಿಯನ್ನು ಹೊಂದಾಣಿಕೆ ಮಾಡಲು ಸಿದ್ದಳಾಗಿರುವ ಮೇಘಾರವರು ಫ್ಯಾಮಿಲಿ, ಕಾಮಿಡಿ ಎಂಟರ್‌ಟೈನರ್‌ನಲ್ಲಿ ಗಣೇಶ್ ಅವರೊಂದಿಗೆ ಒಡನಾಟ ಹೊಂದಿದ್ದ ಗೋಲ್ಡನ್ ಸ್ಟಾರ್ ಬಗ್ಗೆ ಅವರ ಮೊದಲ ಮಾತುಗಳು ಅವರ ನಟನಾ ಕೌಶಲ್ಯ ಮತ್ತು ಅವರ ಚಿತ್ರಗಳಲ್ಲಿನ ಸುಮಧುರ ಹಾಡುಗಳ ಬಗ್ಗೆ…. ಗಣೇಶ್ ರವರ ಎಲ್ಲಾ ಚಲನಚಿತ್ರಗಳನ್ನು ತಾನು ನೋಡಿದ್ದೇನೆ ಮತ್ತು ಎಲ್ಲಾ ಚಲನಚಿತ್ರಗಳನ್ನು ಮೆಚ್ಚಿರುವುದರಿಂದ ಅವುಗಳಲ್ಲಿ ಒಂದು ಹೆಚ್ಚು ಮೆಚ್ಚಿನದು ಎಂಬ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಮೇಘಾ ಹೇಳುತ್ತಾರೆ.
ಸಾಯಿ ಕಾರ್ತಿಕ್ ರವರ ಸಂಗೀತ ಸಂಯೋಜನೆ, ಜೈ ಆನಂದ್ ಅವರ ಸಿನಿಮಾಟೋಗ್ರಫಿ, ಸಾಧು ಕೋಕಿಲ, ರಂಗಾಯಣ ರಘು, ರವಿಶಂಕರ್ ಗೌಡ, ಕುರಿ ಪ್ರತಾಪ್ ಮತ್ತು ಹಿರಿಯ ನಟರಾದ ಉಮೇಶ್ ಮತ್ತು ಡಿಂಗ್ರಿ ನಾಗರಾಜ್, “ಟ್ರಿಬಲ್ ರೈಡಿಂಗ್” ಚಲನಚಿತ್ರದ ಪ್ರಮುಖ ಪಾತ್ರಧಾರಿಗಳು.
“ಸಣ್ಣ ಪರದೆಯ ಮೇಲೆ ಜನತೆ ನನ್ನನ್ನು ನೋಡಿ ಮೆಚ್ಚಿದ್ದಾರೆ ಹಾಗೂ ಬೆಳ್ಳಿ ಪರದೆಯ ಮೇಲೆ ಆದಷ್ಟು ಬೇಗ ನೀನು ಕಾಣಿಸಿಕೊಳ್ಳಬೇಕೆಂದು ಹಾರೈಸುತ್ತಿದ್ದರು. ಅವರ ಒಳ್ಳೆಯ ಹಾರೈಕೆಯಿಂದಲೇ ಸಿನಿಮಾ ರಂಗಕ್ಕೆ ಪ್ರವೇಶ ಸಿಕ್ಕಿದೆ” ಎಂದು ಮೇಘಾ ಹೇಳುತ್ತಾರೆ.