ಪ್ರೇಕ್ಷಕರು ಮೆಚ್ಚಿದ ‘ಒಂಭತ್ತನೇ ದಿಕ್ಕು’…
ಕೊರೋನಾ ಮೂರನೇ ಅಲೆಯಿಂದಾಗಿ ಬಿಡುಗಡೆ ಆಗಬೇಕಿದ್ದ ಸಿನಿಮಾಗಳ ರಿಲೀಸ್ ಡೇಟ್ ಮುಂದಕ್ಕೆ ಹೋಗಿರುವ ಈ ಸಮಯದಲ್ಲಿ ನಿರ್ದೇಶಕ ದಯಾಳ್ ಪದ್ಮನಾಭನ್ ತಮ್ಮ ಚಿತ್ರವನ್ನು ಬಿಡುಗಡೆ ಮಾಡುವ ಧೈರ್ಯ ಮಾಡಿದ್ದಾರೆ. ತಮ್ಮ ನಿರ್ದೇಶನದ ‘ಒಂಭತ್ತನೆ ದಿಕ್ಕು’ ಚಿತ್ರವನ್ನು ಇಂದು (28/1/22) ಬಿಡುಗಡೆ ಮಾಡಿದ್ದಾರೆ.
ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಸಂಕ್ರಾಂತಿ ಪೋಸ್ಟರ್ ಬಿಡುಗಡೆ
ದಯಾಳ್ ಪದ್ಮನಾಭನ್ ನಿರ್ದೇಶನ ದ ‘ಒಂಭತ್ತನೇ ದಿಕ್ಕು’ ಇದು ಮನುಷ್ಯನು ತನ್ನ ಬದುಕಿನಲ್ಲಿ ಒಂದು ದಿಕ್ಕನ್ನು ಗುರಿಯಾಗಿಸಿಕೊಂಡು ನಡೆಯಲು ಪ್ರಾರಂಭಸುತ್ತಾನೆ. ಅದರೆ ವಿಧಿಯಾಟವೇ ಬೇರೆಯಾಗಿರುತ್ತದೆ. ಇಲ್ಲಿ ದಯಾಳ್ ಪದ್ಮನಾಭನ್ ರವರು ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಹಲವು ತಿರುವುಗಳ ಮೂಲಕ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಮಾಡಿದ್ದಾರೆ. ಒಂದು ಮಧ್ಯಮವರ್ಗದ ಜನಜೀವನ. ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಕನಸಿನಿಂದ ಬೆಂಗಳೂರು ಸಿಟಿಯಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುವ ನಾಯಕ(ಯೋಗಿ).
ಊರಿಗೆ ಪಯಾಣ ಬೆಳೆಸುವಾಗ ಬಸ್ಸಿನಲ್ಲಿ ಆಕಸ್ಮಿಕವಾಗಿ ಭೇಟಿಯಾಗುವ ನಾಯಕಿ(ಅದಿತಿ ಫ್ರಭುದೇವ್) ನಂತರ ಇವರಿಬ್ಬರಲ್ಲಿ ಪ್ರೇಮಾಂಕುರವಾಗುತ್ತದೆ. ಪ್ರೀತಿ ಮದುವೆ ವರೆಗೂ ಬಂದರೂ, ಅಲ್ಲಿ ಕೆಲವೊಂದು ಅಡೆತಡೆಗಳು ಎದುರಾಗುತ್ತವೆ. ಅದರಿಂದ ಯಾವ ರೀತಿಯಾಗಿ ಹೊರ ಬರುತ್ತಾರೆ. ಅದೆನ್ನೆಲ್ಲಾ ಯಾವ ರೀತಿಯಾಗಿ ನಿಭಾಯಿಸುತ್ತಾರೆ. ಎಂಬುದನ್ನು ದಯಾಳ್ ಪದ್ಮನಾಭನ್ ವಿಭಿನ್ನವಾಗಿ ತೋರಿಸಿದ್ದಾರೆ. ಈ ಕಥೆ ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.
ತಾರಾಗಣದಲ್ಲಿ ಅಶೋಕ್, ಸಾಯಿಕುಮಾರ್, ರಮೇಶ್ ಭಟ್, ಪ್ರಶಾಂತ್ ಸಿದ್ಧಿ, ಸಂಪತ್ ಕುಮಾರ್ ಮಹೇಶ್, ಅನಿಲ್ ಯಾದವ್ ಮುಂತಾದವರಿದ್ದಾರೆ. ಮಣಿಕಾಂತ್ ಕದ್ರಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ರಾಕೇಶ್.ಬಿ ಛಾಯಾಗ್ರಹಣ ಮಾಡಿದ್ದು, ದಯಾಳ್ ಪದ್ಮನಾಭನ್ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.