ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಸಂಕ್ರಾಂತಿ ಪೋಸ್ಟರ್ ಬಿಡುಗಡೆ

Published on

936 Views
Advertisement

ಜಮಾಲಿಗುಡ್ದದಲ್ಲಿ ನಡೆದ ನೈಜ ಕಥೆಯನ್ನಾಧರಿಸಿದೆ ಎನ್ನಲಾದ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಚಿತ್ರತಂಡ ಕುತೂಹಲಕಾರಿ ಪೋಸ್ಟರ್ ಗಳನ್ನು ಬಿಡುಗಡೆಗೊಳಿಸಿದೆ.

*ಡಾಲಿ ಧನಂಜಯ ಪವರ್*

Advertisement

ನಟನಾ ಆಲ್ ರೌಂಡರ್ ಧನಂಜಯ್ ನಟಿಸಿರುವ ಕಥಾಪ್ರಧಾನ ಚಿತ್ರ’ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ .

Advertisement

ಸಲಗ, ರತ್ನನ್ ಪರ್ಪಂಚ ಯಶಸ್ಸಿನ ನಂತರ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ಧನಂಜಯ್ ಅವರ ಬಡವ ರಾಸ್ಕಲ್ ಚಿತ್ರ ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, 2022 ರಲ್ಲಿ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ ನಟನಾ ವಿಶಾರದ ಧನಂಜಯ್.

*ಸ್ಪಷ್ಟ ಕನ್ನಡದ ಚೆಲುವೆ ಅದಿತಿ ಪ್ರಭುದೇವ ವಿಭಿನ್ನ ಪಾತ್ರ*

Advertisement

ಚಿತ್ರದಲ್ಲಿ ನಾಯಕಿಯಾಗಿ ಅಪ್ಪಟ ಕನ್ನಡದ ಚೆಲುವೆ ಅದಿತಿ ಪ್ರಭುದೇವ ನಟಿಸಲಿದ್ದು, ಮೊನ್ನೆ ತಾನೇ ಅವರ ಜನ್ಮದಿನದಂದು ಚಿತ್ರತಂಡ ಅವರ ಜನ್ಮದಿನಕ್ಕೆ ಶುಭಾಶಯ ಕೋರಿದ ಸಂದರ್ಭ ಬಿಡುಗಡೆಗೊಂಡಿದ್ದ ಪೋಸ್ಟರ್ ಈ ಚಿತ್ರದ ಕುರಿತು ಎಲ್ಲರ ಕಣ್ಣರಳಿಸಿದ್ದಂತೂ ಸುಳ್ಳಲ್ಲ.

*ಟೈಟಲ್ ಟ್ರೆಂಡಿಂಗ್!*

Advertisement

ಈ ಚಿತ್ರದ ಟೈಟಲ್ಲೇ ಬಹಳ ವಿಶೇಷವಾಗಿದೆ. ಜಮಾಲಿಗುಡ್ಡ ಎನ್ನುವ ಒಂದು ಗುಡ್ಡಗಾಡು ಪ್ರದೇಶದ ಸುತ್ತ ಹೆಣೆದಿರಬಹುದು ಎಂದು ಮೇಲ್ನೋಟಕ್ಕೆ ಕಂಡರೂ, ನಿರ್ದೇಶಕರು ಹೇಳುವಂತೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಲವ್ ಸ್ಟೋರಿಯಾಗಿದೆ.

ಚಿತ್ರಕ್ಕೆ ಕನ್ನಡಕ್ಕಾಗಿ ಒಂದನ್ನು ಒತ್ತಿ ನಿರ್ದೇಶಕ ಕುಶಾಲ್ ಆಕ್ಷನ್ ಕಟ್ ಹೇಳಿದ್ದರೆ, ಶ್ರೀ ಹರಿ ಚಿತ್ರವನ್ನು ನಿರ್ಮಿಸಿದ್ದಾರೆ.

*ಇಲ್ಲಿ ತಾರಾಗಣವೂ ವಿಶೇಷ!*

ತಾರಾಗಣದಲ್ಲಿ ನಟಿ ಭಾವನಾ ರಾಮಣ್ಣ, ಭಾಸ್ಕರ್, ಪ್ರಕಾಶ್ ಬೆಳವಾಡಿ, ಯಶ್ ಶೆಟ್ಟಿ, ಪ್ರಕಾಶ್ ಶೆಣೈ, ಕಾನ್ ಸ್ಟೇಬಲ್ ಸರೋಜ, ನಂದ, ಪ್ರೇರಣಾ, ಸತ್ಯ ಮುಂತಾದವರು ನಟಿಸುತ್ತಿದ್ದಾರೆ.

ಫಸ್ಟ್ ಲುಕ್ ನಲ್ಲಿ ಹಾಗೂ ಸಂಕ್ರಾಂತಿಯಂದು ಬಿಡುಗಡೆಯಾದ ಪೋಸ್ಟರ್ ನಲ್ಲಿ ನಾಯಕ ನಟನಾದ ಧನಂಜಯ್ ಒಂದು ಪುಟ್ಟ ಹೆಣ್ಣುಮಗುವನ್ನು ಕೂರಿಸಿಕೊಂಡು ನಲಿಯುತ್ತಿರುವುದು ಕಾಣಿಸುತ್ತದೆ. ಆದರೆ ನಾಯಕಿ ಅದಿತಿ ಪ್ರಭುದೇವರ ಅವರ ಪಾತ್ರದ ಪೋಸ್ಟರ್ ಈ ಪೋಸ್ಟರ್ ಗೆ ತದ್ವಿರುದ್ಧ ಭಾವದಲ್ಲಿರುವುದು, ಸಿನಿಪ್ರಿಯರಲ್ಲಿ ಕಥೆಯ ಕುರಿತು ಕುತೂಹಲ ಕೆರಳುವಂತೆ ಮಾಡಿದೆ.

ಚಿತ್ರಕ್ಕೆ ಅರ್ಜುನ್ ಜನ್ಯಾ ಸೂಪರ್ ಹಿಟ್ ಸಂಗೀತ ಸಂಯೋಜನೆಯಿದ್ದು, ಮಾಸ್ತಿ ಸಂಭಾಷಣೆ ಬರೆದಿದ್ದಾರೆ.

ಧನಂಜಯ್ ಅವರಿಗಾಗಿಯೇ ಕಥೆ ರಚಿಸಿದ್ದ ಚಿತ್ರತಂಡ, ಅವರ ಬಿಡುವಿಗೂ ಕಾದು ಈಗ ಚಿತ್ರೀಕರಣ ಪೂರ್ಣಗೊಳಿಸುವ ಹಂತದಲ್ಲಿದೆ. ಅದಲ್ಲದೆ ನಟಿ ಭಾವನಾ ಅವರೂ ಬಹಳ ಸಮಯಗಳ ನಂತರ ಬಣ್ಣ ಹಚ್ಚಿದ್ದು, ಅವರ ಹೊಸ ಪಯಣಕ್ಕೆ ಈ ಚಿತ್ರ ಹೊಸ ದಿಶೆ ನೀಡಲಿದೆಯೇ ಎಂದು ಕಾದು ನೋಡಬೇಕಿದೆ.

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com