14 ವರ್ಷದ ಸಂಭ್ರಮದಲ್ಲಿ “ಜೀ಼ ಕನ್ನಡ” ವಾಹಿನಿ
ಜೀ಼ ಕನ್ನಡ ವಿಶ್ವಾದ್ಯಂತ ಯಶಸ್ವಿಯಾಗಿ 14 ವರ್ಷಗಳನ್ನು ಪೂರೈಸಿದೆ. “ಬಯಸಿದ ಬಾಗಿಲು ತೆಗೆಯೋಣ” ಎಂಬ ಘೋಷವಾಕ್ಯದ ಮೂಲಕ ವಿಶ್ವದಾದ್ಯಂತ ಕನ್ನಡಿಗರ ಮನೆ ಮನೆಗೆ ತಲುಪಿದ ಕುಟುಂಬದ ಸಮಗ್ರ ಮನರಂಜನೆಯ ಕನ್ನಡ ವಾಹಿನಿಯಾಗಿದೆ.
ಮಹರ್ಷಿವಾಣಿ, ಕನ್ನಡದ ಕಣ್ಮಣಿ, ಉಘೇ ಉಘೇ ಮಾದೇಶ್ವರ, ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿಯರ್ಸ್, ಸರಿಗಮಪ, ವೀಕೆಂಡ್ ವಿಥ್ ರಮೇಶ್, ಜೊತೆ ಜೊತೆಯಲಿ, ಗಟ್ಟಿಮೇಳ, ಕಮಲಿ, ಪಾರು ಇತ್ಯಾದಿ ಅಸಂಖ್ಯ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳು ಜೀ಼ ಕನ್ನಡ ವಾಹಿನಿಯನ್ನು ಕನ್ನಡಿಗರ ಮನೆ ಮನೆ ಮಾತಾಗಿಸಿವೆ. ಜೀ಼ ಕನ್ನಡ ರೂಪಿಸಿದ ಪ್ರತಿ ಕಾರ್ಯಕ್ರಮವೂ ಜನಪ್ರಿಯವಾಗಿರುವುದೇ ಅಲ್ಲದೆ ವೀಕ್ಷಕರ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಉಂಟು ಮಾಡಿರುವುದು ಹೆಗ್ಗಳಿಕೆ.
ಇದೀಗ ಕನ್ನಡದ ಕಿರುತೆರೆ ಇತಿಹಾಸದಲ್ಲಿಯೇ ಪ್ರಪ್ರಥಮ ಪ್ರಯತ್ನವಾಗಿ ದಿ.ಶಂಕರ್ ನಾಗ್ ನಿರ್ದೇಶನ ಆರ್.ಕೆ.ನಾರಾಯಣ್ ಅವರ ಕಥೆಗಳನ್ನು ಆಧರಿಸಿದ “ಮಾಲ್ಗುಡಿ ಡೇಸ್” ಧಾರಾವಾಹಿಯನ್ನು ಕನ್ನಡದಲ್ಲಿ ಮೇ 11, 2020ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರ ಮಾಡುತ್ತಿದೆ.
ಈ ಕಾರ್ಯಕ್ರಮ ಜೀ಼ ಕನ್ನಡದ 14ನೇ ವರ್ಷದ ವಾರ್ಷಿಕೋತ್ಸವಕ್ಕೆ ಜೀ಼ ಕನ್ನಡದಿಂದ ಕನ್ನಡಿಗರಿಗೆ ನೀಡಿದ ಕೊಡುಗೆಯಾಗಿದೆ. ಕನ್ನಡ ಕಿರುತೆರೆ ವೀಕ್ಷಕರು ಮಾಲ್ಗುಡಿ ಡೇಸ್ ಪ್ರಸಾರ ಕುರಿತು ಅಪಾರ ಸಂತೋಷ ವ್ಯಕ್ತಪಡಿಸಿದ್ದಾರೆ.
ಜೀ಼ ಕನ್ನಡ 14ನೇ ವರ್ಷದ ಸಂಭ್ರಮ ಕುರಿತು ಜೀ಼ ಕನ್ನಡ ಮತ್ತು ಜೀ಼ ಪಿಚ್ಚರ್ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, “ಇಂದು ಜೀ಼ ಕನ್ನಡ ಕರ್ನಾಟಕದಲ್ಲಿ ಮನರಂಜಿಸುತ್ತಾ 14 ವರ್ಷ ಪೂರ್ಣಗೊಳಿಸಿರುವುದನ್ನು ಪ್ರಕಟಿಸಲು ಬಹಳ ಸಂತೋಷವಾಗಿದೆ.
ವೀಕ್ಷಕರಿಗೆ ಬಯಸಿದ ಬಾಗಿಲು ತೆರೆಯುವ ಉದ್ದೇಶದಿಂದ ಮತ್ತು ಅವರು ತಲುಪುವುದಕ್ಕಿಂತಲೂ ಆಚೆಗಿನ ಗುರಿಗಳನ್ನು ತಲುಪುವಂತೆ ಮಾಡಿದ ಜೀ಼ ಕನ್ನಡ 13 ವರ್ಷಗಳಲ್ಲಿ ಮೊಟ್ಟಮೊದಲ ಬಾರಿಗೆ ಒಂದು ವರ್ಷದಿಂದ ಮಾರುಕಟ್ಟೆಯ ನಾಯಕನಾಗಿದೆ. ಮುಂದಿನ ವರ್ಷಗಳಲ್ಲೂ ವೀಕ್ಷಕರು ಚಾನೆಲ್ ಹಾಗೂ ಶೋಗಳಿಗೆ ಬೆಂಬಲಿಸುವುದನ್ನು ಮುಂದುವರಿಸುತ್ತಾರೆ ಎಂಬ ಭರವಸೆ ನಮ್ಮದು.
ಈ ಸಾಂಕ್ರಾಮಿಕದ ಸಂಕಷ್ಟದ ಸಮಯದಲ್ಲಿ ನಿಮ್ಮ ಮನರಂಜನೆಯ ಪಾಲುದಾರರಾಗಿ ನಾವು ಪ್ರತಿಯೊಬ್ಬರಿಗೂ ಜೀ಼ ಕನ್ನಡದೊಂದಿಗೆ ಮನೆಯಲ್ಲಿಯೇ ಇರಲು ಮತ್ತು ಸುರಕ್ಷಿತವಾಗಿರಲು ಕೋರುತ್ತೇವೆ” ಎಂದರು.
ಕನ್ನಡದ ಮನರಂಜನಾ ವಾಹಿನಿಗಳಲ್ಲಿ ಅಗ್ರಸ್ಥಾನಕ್ಕೆ ತಂದಿರುವ ವೀಕ್ಷಕರಿಗೆ ಕೃತಜ್ಞತೆ ವ್ಯಕ್ತಪಡಿಸುತ್ತಿರುವ ವಾಹಿನಿಯು ಮತ್ತಷ್ಟು ಭರಪೂರ ಮನರಂಜನೆಯ ಭರವಸೆಯನ್ನು ಜೀ಼ ನೀಡುತ್ತಿದೆ.