ಯುವರತ್ನ ನ ‘ಪವರ್ ಆಫ್ ಯೂತ್’ ಹಾಡಿನ ಪ್ರೋಮೊ ರಿಲೀಸ್
ಸಂತೋಷ್ ಆನಂದ್ ರಾಮ್ ನಿರ್ದೇಶನದ ಪುನೀತ್ ರಾಜ್ ಕುಮಾರ್ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಯುವರತ್ನ’ ಚಿತ್ರದ ಪ್ರೋಮೊ ನವೆಂಬರ್ 27ರಂದು ಬಿಡುಗಡೆಗೊಂಡಿದೆ. ಗಿಟಾರ್ ಹಿಡಿದುಕೊಂಡು ಎಂಟ್ರಿ ಕೊಡುವ ಪುನೀತ್, ನೃತ್ಯದ ಜೊತೆಗೆ ‘ಹೆಸರು ಮಾಡು ಹಸಿರಾಗೋ ಹಾಗ, ಉಸಿರು ಹೋದರು ಹೆಸರಿರುವ ಹಾಗೆ, ಆ ಚರಿತ್ರೆಗೆ ನೀನೇ ಮುನ್ನುಡಿ, ನೂರು ಸಾರಿ ಕೂಗು, ಪವರ್ ಆಫ್ ಯೂತ್ ಎಂದು ಹಾಡಿದ್ದಾರೆ. ಹಾಡಿನ ಫುಲ್ ವಿಡಿಯೋ ಡಿಸೆಂಬರ್ 2 ಕ್ಕೆ ಬಿಡುಗಡೆ ಆಗಲಿದೆ. ಪುನೀತ್ ಜೊತೆಗೆ ಈ ಹಾಡಿನಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡಾ ಡ್ಯಾನ್ಸ್ ಮಾಡಿದ್ದಾರೆ.