ಮೆಚ್ಚುಗೆ ಪಡೆದ ಯುವ ರಣಧೀರ ಕಂಠೀರವ

Published on

424 Views

ಡಾ.ರಾಜ್ ಕುಮಾರ್ ರವರ ಮೊಮ್ಮಗ ಯುವರಾಜ್ ಕುಮಾರ್ ಭರ್ಜರಿ ‌ಎಂಟ್ರಿ ಕೊಟ್ಟಿರುವ ರಣಧೀರ‌ ಕಂಠೀರವ ಸಿನಿಮಾದ‌ ಟ್ರೈಲರ್ ಕನ್ನಡ ರಾಜ್ಯೋತ್ಸವ ದಿನದಂದು ಪಿ ಆರ್ ಕೆ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿತ್ತು. ಟ್ರೈಲರ್ ನಲ್ಲಿ ಯುವ ರಾಜ್ ಕುಮಾರ್ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅವರ ಡೈಲಾಗ್ ಡೆಲಿವರಿ, ಬಾಡಿ ಲಾಂಗ್ವೇಜ್, ಆಕ್ಷನ್ ಅದ್ಧೂರಿಯಾಗಿ ಮೂಡಿ‌ಬಂದಿದೆ. ಚಿತ್ರದ ನಿರ್ದೇಶಕರು ‌ಈ ಸಿನಿಮಾದ ಟ್ರೈಲರ್ ವಿಡಿಯೋವನ್ನು ತೆಲುಗಿನ ಹೆಸರಾಂತ ನಿರ್ದೇಶಕರಾದ ವಿ ವಿ ವಿನಾಯಕ್, ಸುಕುಮಾರ್ ಹಾಗೂ ಮೆಹೆರ್ ರಮೇಶ್ ರವರಿಗೆ ತೋರಿಸಲಾಯಿತು. ವಿಡಿಯೋ ನೋಡಿ ಮೇಕಿಂಗ್ ಮತ್ತು ಯುವ ರಾಜ್ ಕುಮಾರ್ ರ ಆ್ಯಕ್ಷನ್ ಮೆಚ್ಚಿಕೊಂಡಿದ್ದಾರೆ.

ವಿಡಿಯೋವನ್ನು ನೋಡಿದ ಕನ್ನಡದ ಸ್ಟಾರ್ ನಟರಾದ ಉಪೇಂದ್ರ, ಕೆ‌ಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ‌ ಹಿರಿಯ‌ ನಿರ್ದೇಶಕ ಭಗವಾನ್ ರವರು ಕೂಡ ಆ್ಯಕ್ಷನ್, ಡೈಲಾಗ್ ಡೆಲಿವರಿ, ಮೇಕಿಂಗ್ ಬಗ್ಗೆ ಖುಷಿ‌ ವ್ಯಕ್ತ ಪಡಿಸಿದ್ದಾರೆ. ಇದೊಂದು ಐತಿಹಾಸಿಕ ಚಿತ್ರವಾಗಿದ್ದು, ಈ ಹಿಂದೆ ಪ್ರಶಾಂತ್ ನೀಲ್ ರವರ ಜೊತೆ ಕೆಜಿಎಫ್ 1 ರಲ್ಲಿ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ ಪುನೀತ್ ರುದ್ರನಾಗ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರವಿ‌ಬಸ್ರೂರ್ ರವರ ಸಂಗೀತವಿದ್ದು. ಸಂಕೇತ್ ಮೈಸೂರುರವರ ಛಾಯಾಗ್ರಹಣ ಚಿತ್ರಕ್ಕಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com