ನಟ ಯುವರಾಜ್ ಕುಮಾರ್ ದಾಂಪತ್ಯದಲ್ಲಿ ಬಿರುಕು!! ದೊಡ್ಮನೆಯ ಮೊದಲ ಡಿವೋರ್ಸ್ ಕೇಸ್!!
ಟ ಹಾಗೂ ಡೊಡ್ಮನೆ ಹುಡುಗ ಯುವರಾಜ್ ಕುಮಾರ್ ಹಾಗೂ ಶ್ರೀ ದೇವಿ ದಂಪತಿಗಳ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ. ಯುವ ರಾಜ್ ಕುಮಾರ್ ದಂಪತಿಗಳು ಫ್ಯಾಮಿಲಿ ಕೋರ್ಟ್ ನಲ್ಲಿ ವಿಚ್ಚೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ವಿಚ್ಚೇದನಕ್ಕೆ ಮುಂದಾಗಿರುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಟ ಯುವರಾಜ್ ಕುಮಾರ್ ರವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದಲ್ಲದೆ ಇದರ ಜೊತೆ ದೂರನ್ನು ಕೂಡ ದಾಖಲಿಸಿದ್ದಾರೆ. ಯುವರಾಜ್ ಕುಮಾರ್ ದೂರಿನಲ್ಲಿ ಶ್ರೀ ದೇವಿಯ ಬಗ್ಗೆ ಗಂಭೀರ ಆರೋಪವನ್ನು ಮಾಡಿದ್ದಾರೆ ಹಾಗೂ ಅವರಿಂದ ಮಾನಸಿಕವಾಗಿ ತೊಂದರೆ ಆಗುತ್ತಿರುವುದು, ಕಿರುಕುಳದ ಆರೋಪ, ಅಗೌರವದ ರೀತಿಯಲ್ಲಿ ನಡೆದುಕೊಳ್ಳುತ್ತಿರುವ ಆರೋಪವನ್ನು ಮಾಡಿದ್ದಾರೆ. ಈ ವಿಷಯದ ಬಗ್ಗೆ ಕೇಸ್ ದಾಖಲಾಗುವ ಸಾಧ್ಯತೆಯಿದೆ.
ಕಳೆದ ಒಂದು ವರ್ಷದಿಂದ ಯುವರಾಜಕುಮಾರ್ ದಂಪತಿಗಳು ಅಂತರ ಕಾಯ್ದುಕೊಂಡಿದ್ದಾರೆ ಹಾಗೂ ಯುವ ಚಿತ್ರದ ರಿಲೀಸ್ ಇವೆಂಟ್ ಗಳಲ್ಲಿ ಸಮಯದಲ್ಲೂ ಶ್ರೀದೇವಿಯವರು ಕಾಣಿಸಿಕೊಂಡಿರಲಿಲ್ಲ. ಪ್ರೀತಿಸಿ ಮದುವೆಯಾದ ಯುವರಾಜ್ ಕುಮಾರ್ ಜೂನ್ 6ರಂದು ಕೌಟುಂಬಿಕ ನ್ಯಾಯಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಯುವರಾಜ್ ಕುಮಾರ್ ವಿಚ್ಛೇದನದ ಅರ್ಜಿಯಲ್ಲಿ ಮಾನಸಿಕವಾಗಿ ಹಿಂಸೆ ನೀಡುರುವುದು ಹಾಗೂ ಅಗೌರವವನ್ನು ತೋರಿರುವುದನ್ನು ಉಲ್ಲೇಖಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಯುವರಾಜ್‌ಕುಮಾರ್ ಮತ್ತು ಶ್ರೀದೇವಿ ಮೊದಲು ದೆಹಲಿಯಲ್ಲಿ ಭೇಟಿಯಾಗಿದ್ದರು, ಸ್ನೇಹಿತರಾದರು ಮತ್ತು ನಂತರ ಪ್ರೀತಿಸುತ್ತಿದ್ದರು. ಮದುವೆಯಾಗುವ ಮೊದಲು ಅವರು ಏಳು ವರ್ಷಗಳ ಕಾಲ ಪ್ರೀತಿಸುತ್ತಿದ್ದರು.ದಂಪತಿಗಳು 2019 ರಲ್ಲಿ, ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹವಾಗಿದ್ದರು. ರಾಘವೇಂದ್ರ ರಾಜ್‌ಕುಮಾರ್ ಅವರು ಶ್ರೀದೇವಿಯನ್ನು ಅವರ ತನ್ನ ಮಗಳು ಎಂದು ಅನೇಕ ಇವೆಂಟ್ ಗಳಲ್ಲಿಯೂ ಕೂಡ ಹೇಳಿಕೊಂಡಿದ್ದರು.
ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ರವರು ಅಂತರವನ್ನು ಕಾಯ್ದುಕೊಂಡಿದ್ದರು ಎಂದು ಅವರ ಹತ್ತಿರದ ಮೂಲಗಳಿಂದ ತಿಳಿದುಬಂದಿದೆ ಹಾಗೂ ಶ್ರೀದೇವಿ ರವರು ಸದ್ಯಕ್ಕೆ ಅಮೇರಿಕಾದಲ್ಲಿ ಇದ್ದಾರೆ.
ಯುವರಾಜಕುಮಾರ್ ರವರು ಶ್ರೀದೇವಿ ರವರಿಗೆ ವಿಚ್ಛೇದನದ ನೋಟಿಸ್ ಕಳುಹಿಸಿದ್ದು, ಶ್ರೀದೇವಿ ರವರಿಂದ ಇನ್ನೂ ಯಾವುದೇ ಪ್ರತಿಕ್ರಿಯೇ ಬಂದಿಲ್ಲ.
ಈ ವಿಷಯದ ಬಗ್ಗೆ ಹಾಗೂ ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ https://flixoye.com ನ್ನು ಫಾಲೋ ಮಾಡಿ