ಉದಯ ಟಿವಿಯಲ್ಲಿ ಯುಗಾದಿ ಸಂಭ್ರಮ ಮೊಟ್ಟಮೊದಲ ಬಾರಿಗೆ ಪೊಗರು ಏಪ್ರಿಲ್ 13 ಮಂಗಳವಾರ ಸಂಜೆ 6.30ಕ್ಕೆ
ಉದಯ ಟಿವಿಯಲ್ಲಿ ಯುಗಾದಿ ಸಂಭ್ರಮ ಮೊಟ್ಟಮೊದಲ ಬಾರಿಗೆ ಪೊಗರು ಏಪ್ರಿಲ್ 13 ಮಂಗಳವಾರ ಸಂಜೆ 6.30ಕ್ಕೆ
ಪೊಗರು:
ಈತ್ತೀಚಿಗಷ್ಟೇ ಬಿಡುಗಡೆಯಾದ “ಪೊಗರು” ಚಲನಚಿತ್ರವನ್ನು ನಂದ ಕಿಶೋರ್ ಬರೆದು ನಿರ್ದೇಶಿಸಿದ್ದಾರೆ ಮತ್ತು ಬಿ.ಕೆ.ಗಂಗಾಧರ್ ರ‍್ಮಿಸಿದ್ದಾರೆ. ಇದನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ ನಂತರ ತಮಿಳು ಭಾಷೆಯಲ್ಲಿಯೂ ಡಬ್ ಮಾಡಲಾಗಿದೆ.
ಈ ಚಿತ್ರದಲ್ಲಿ ಧ್ರುವ ರ‍್ಜಾ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಜೋಡಿಯಾಗಿ ನಟಿಸಿದ್ದಾರೆ, ಚಿಕ್ಕಣ್ಣ, ಪಿ.ರವಿಶಂಕರ್, ಪವಿತ್ರ ಲೋಕೇಶ್, ಮತ್ತು ರಾಘವೇಂದ್ರ ರಾಜ್ಕುಮಾರ್ ಪೋಷಕ ಪಾತ್ರಗಳಲ್ಲಿದ್ದಾರೆ ಮತ್ತು ಸಂಪತ್ ರಾಜ್, ಧನಂಜಯ್, ಕೈ ಗ್ರೀನ್, ರ‍್ಗನ್ ಆಸ್ಟೆ ಮತ್ತು ರ‍್ಮ ಅವರ ನಟನೆ ಈ ಚಿತ್ರಕ್ಕೆ ಮೆರಗು ತಂದಿದೆ.
ಚಂದನ್ ಶೆಟ್ಟಿ ಮತ್ತು ಗುಮ್ಮಿನೇನಿ ವಿಜಯ್ ಧ್ವನಿಪಥವನ್ನು ರಚಿಸಿದರೆ, ವಿ.ಹರಿಕೃಷ್ಣ ಹಿನ್ನೆಲೆ ಸ್ಕೋರ್ ಸಂಯೋಜಿಸಿದ್ದಾರೆ. ಛಾಯಾಗ್ರಣವನ್ನು ವಿಜಯ್ ಮಿಲ್ಟನ್ ಮತ್ತು ಸಂಕಲವನ್ನು ಮಹೇಶ್ ಎಸ್ ರ‍್ವಹಿಸುತ್ತಾರೆ.
ಯುಗಾದಿ ಹಬ್ಬದ ಪ್ರಯುಕ್ತ ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ “ಪೊಗರು” ಮಂಗಳವಾರ (13.04.2021)ಸಂಜೆ 6.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ಯುಗಾದಿ ಸಂಭ್ರಮ:
ಉದಯ ಟಿವಿಯಲ್ಲಿ ಯುಗಾದಿ ಸಂಭ್ರಮ. ಉದಯ ಟಿವಿ ತನ್ನ ಸಮಸ್ತ ವೀಕ್ಷಕ ಬಳಗಕ್ಕೆ ಯುಗಾದಿ ಉಡುಗೊರೆ ಹೊತ್ತು ರ‍್ತಿದೆ. ಏಪ್ರಿಲ್ 12 ರಿಂದ 17ರವರೆಗೆ ಯುಗಾದಿ ಹಬ್ಬದ ಪ್ರಯುಕ್ತ ಮನರಂಜನೆಯ ಮಹಾಪೂರ ಹರಿಸುತ್ತಿದೆ ನಿಮ್ಮ ಉದಯ ಟಿವಿ. ಸಂಜೆ 6 ಗಂಟೆಯಿಂದ ರಾತ್ರಿ 10.30ರವರೆಗೆ ವೈವಿಧ್ಯಮಯ ಧಾರಾವಾಹಿಗಳ ಹೂರಣದ ಜೊತೆ ಹಬ್ಬದ ರಸದೌತಣ ಸಿದ್ಧವಾಗ್ತಿದೆ.
ಯಾರಿವಳು ಧಾರಾವಾಹಿಯ ಶ್ರೇಷ್ಠಾ ತಾಯಿ ಸ್ಥಾನ ತುಂಬಲಿರೋ ಮಾಯಾ, ಗೌರಿಪುರದ ಗಯ್ಯಾಳಿಗಳ ಬೇವಿನಂತ ನೋವನ್ನ ಮರೆಸಿ ಬೆಲ್ಲದ ಸವಿ ನೀಡೋ ಗುಲಾಬಿ, ಕಸ್ತೂರಿ ನಿವಾಸದಲ್ಲಿ ಮೂಡಿರೊ ಒಡಕು ಅನ್ನೋ ಕಹಿ ಬೇರಿಗೆ ಪ್ರೀತಿಯ ಸಿಹಿನೀರಿರೆಯೋ ಖುಷಿ, ಶ್ರೀಮಂತಿಕೆಯ ನೆರಳಲ್ಲಿ ಮಾಯವಾಗಿರೊ ಸಂತೋಷದ ಸಿರಿಯನ್ನ ಹರಿಸೊ ನೇತ್ರಾವತಿ, ನೊಂದಿರೊ ಸುಂದರಿ ಬಾಳಲ್ಲಿ ಭರವಸೆಯ ಸಿಹಿ ತರಲಿದೆ ಯುಗಾದಿ.
ನಾಯಕನ ಬಾಳಿಗೆ ಅಮ್ಮನ ಪ್ರೀತಿ ಪಾಯಸ ಬಡಿಸೊ ನಯನ, ತಾಯಿ ಮಮತೆಯ ಹೂರಣ ಆಗಲಿದೆ ಸೇವಂತಿ ಬದುಕಿಗೆ ತೋರಣ. ಇವೆಲ್ಲದರ ಜೊತೆ ಯುಗಾದಿ ಹಬ್ಬಕ್ಕೆ ಇನ್ನಷ್ಟು ಮೆರುಗು ತುಂಬಲು ಮಹಾಸಂಗಮದಲ್ಲಿ ಒಂದಾಗಲಿದೆ ಕಾವ್ಯಾಂಜಲಿ ಮನಸಾರೆ ಧಾರಾವಾಹಿಗಳು. ಮಹಾಸಂಗಮ ಹಾಗೂ ಯುಗಾದಿ ಹಬ್ಬದ ಸಡಗರಕ್ಕೆ ಮತ್ತಷ್ಟು ರಂಗು ತುಂಬಲಿದೆ ಮನಸಾರೆ ನಾಯಕಿ ಪ್ರ‍್ಥನಾ ಮದುವೆ ದಿಬ್ಬಣ.
ಇಷ್ಟ ಪಟ್ಟ ಹುಡುಗ ಯುವರಾಜನ ಜೊತೆ ಅಪ್ಪನ ಆರ‍್ವಾದ ಪಡೆದು ಮನಸಾರೆ ಸಪ್ತಪದಿ ತುಳಿಯಲಿದ್ದಾಳೆ ಪ್ರ‍್ಥನಾ. ಮದುವೆಗೆ ಸಾಕ್ಷಿಯಾಗಲಿದ್ದಾರೆ ಕಾವ್ಯಾಂಜಲಿಯ ಅರಸ್ ಕುಟುಂಬ. ಇದೇನಿದು ಪ್ರ‍್ಥನಾನ ಮಗಳು ಅಂತನೇ ಒಪ್ಪದ ಅವಳ ತಂದೆ ಆನಂದ್ ಧಾರೆ ಎರೆಯುತ್ತಿದ್ದಾನೆ ಅಂತ ಆಶ್ರ‍್ಯ ಆಗ್ತಿದ್ಯಾ? ನಿಜಕ್ಕೂ ಈ ಮದುವೆ ನಡೆಯುತ್ತಾ ಅನ್ನೋ ಅನುಮಾನವಿದ್ಯಾ? ಹೌದು ಅಂತಿದೆ ಮನಸಾರೆ ತಂಡ. ಈ ರೋಚಕ ಟ್ವಿಸ್ಟ್ ಹೇಗೆ ಅಂತ ತಿಳ್ಕೊಳ್ಳೋಕೆ ನೀವು ಕಾವ್ಯಾಂಜಲಿ ಮನಸಾರೆ ಮಹಾಸಂಗಮಕ್ಕೆ ಕಾಯಲೇಬೇಕು. ಏಪ್ರಿಲ್ 14 ರಿಂದ 17ರವರೆಗು ಕಾವ್ಯಾಂಜಲಿ ಮನಸಾರೆ ಮಹಾಸಂಗಮ ರಾತ್ರಿ 8.30ರಿಂದ 9.30ರ ವರೆಗೆ ಪ್ರಸಾರವಾಗಲಿದ್ದು, ಉದಯ ಟಿವಿ ಹಾಗೂ ಧಾರಾವಾಹಿ ತಂಡಗಳು ಭರದಿಂದ ಚಿತ್ರೀಕರಣ ನಡೆಸಿದೆ.