ಅಬ್ಬಾ! ಶ್ರೀನಗರ ಕಿಟ್ಟಿಯಯವರನ್ನು ಇಂತಹ ಲುಕ್‌ನಲ್ಲಿ ನೀವು ಈವರೆಗೆ ನೋಡಿರಲಿಕ್ಕಿಲ್ಲ!

Published on

752 Views

ಕನ್ನಡದ ಇತ್ತೀಚಿನ ಚಿತ್ರಗಳು ಫಸ್ಟ್ ಲುಕ್, ಪೋಸ್ಟರ್, ಟೀಸರ್‌ಗಳಿಂದಲೇ ಹವಾ ಎಬ್ಬಿಸುತ್ತಿವೆ.

ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗವನ್ನು ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದ ಕೆಜಿಎಫ್ ಚಾಪ್ಟರ್-2 ರ ಅಧೀರ ಫಸ್ಟ್ ಲುಕ್‌ನಲ್ಲಿ ಬಾಲಿವುಡ್ ಖ್ಯಾತಿಯ ಸಂಜಯ್ ದತ್ ಕಾಣಿಸಿಕೊಂಡಿದ್ದರು. ಇಂಗ್ಲಿಷ್ ನ ಖ್ಯಾತ ವಿಕ್ಹಿಂಗ್ಸ್ ಅನ್ನು ಹೋಲುವ ರಗಡ್ ಲುಕ್ ಎಂದು ಸಿನಿಪ್ರಿಯರು ಬಣ್ಣಿಸಿದ್ದರು.ಹಾಗೂ ಆ ಲುಕ್ ಬಹಳ ಪ್ರಸಿದ್ಧಿ ಪಡೆದಿತ್ತು.
ಈಗ ಅದೇ ರೀತಿಯ ರಗಡ್ ಲುಕ್‌ನಲ್ಲಿ ಕನ್ನಡದ ಕುವರ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದಾರೆ.

ಶ್ರೀನಗರ ಕಿಟ್ಟಿ ನಟನೆಯ ಮುಂದಿನ ಚಿತ್ರ ʼಗೌಳಿʼಯ ಹೊಸ ಲುಕ್ ಬಿಡುಗಡೆಗೊಂಡಿದ್ದು, ಸಂಪೂರ್ಣ ಗಡ್ಡಧಾರಿಯಾಗಿ ಕೈಯಲ್ಲಿ ಕೊಡಲಿ ಹಿಡಿದು ವಿಲನ್‌ನಂತೆ ಕುಳಿತಿರುವ ಶೈಲಿಯಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದಾರೆ.

ಇದನ್ನು ಗಮನಿಸಿದ ಸಿನಿಪ್ರಿಯರು, ʼಅಬ್ಬಾ! ಶ್ರೀನಗರ ಕಿಟ್ಟಿಯವರನ್ನು ನೋಡಲೇ ಭಯವಾಗುತ್ತಿದೆʼ ಎಂದು ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಕನ್ನಡ ಚಿತ್ರರಂಗ ಪರಭಾಷೆಗಳ ಲುಕ್‌ಗಳನ್ನು ನಕಲಿಸಿ, ಸ್ವಂತಿಕೆ ಕಳೆದುಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಗೌಳಿ ಚಿತ್ರವನ್ನು ನವ ನಿರ್ದೇಶಕ ಸೂರ ನಿರ್ದೇಶಿಸುತ್ತಿದ್ದು, ರಘು ಸಿಂಗಂ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಇನ್ನು ಶ್ರೀನಗರ ಕಿಟ್ಟಿ ಅವರ ಕೈಯಲ್ಲಿ ಧೂಳೆಬ್ಬಿಸಬಲ್ಲ ಚಿತ್ರಗಳಿದ್ದು, ಅವತಾರ ಪುರುಷ, ವೀರಂ, ಗರುಡ ಚಿತ್ರಗಳು ನಿರ್ಮಾಣ ಹಂತದಲ್ಲಿವೆ.

ಶ್ರೀನಗರ ಕಿಟ್ಟಿಯವರು ಖ್ಯಾತ ಪತ್ರಕರ್ತರಾದ ದಿವಂಗತ ರವಿ ಬೆಳಗೆರೆಯವರ ಅಳಿಯನಾಗಿದ್ದು, ಪತ್ನಿ ಭಾವನಾ ಬೆಳಗೆರೆಯವರೊಂದಿಗೆ ಸುಖ ದಾಂಪತ್ಯ ನಡೆಸುತ್ತಿದ್ದಾರೆ.


ಫೆಬ್ರವರಿ 2 ನೇ ತಾರೀಖಿನಂದು ಗೌಳಿ ಚಿತ್ರದ ಟೀಸರ್ ಬಿಡುಗಡೆಗೊಳ್ಳಲಿದ್ದು, ಚಿತ್ರದ ವಿಶೇಷತೆಯ ಕುತೂಹಲಕ್ಕಾಗಿ ಸಿನಿಪ್ರಿಯರು ಕಾದು ಕುಳಿತಿದ್ದಾರೆ.

ಕಿಟ್ಟಿಯವರ ಚಿತ್ರಗಳು ಆದಷ್ಟು ಬೇಗ ಬಿಡುಗಡೆಗೊಳ್ಳಲಿ ಹಾಗೂ ಅಮೋಘ ಯಶಸ್ಸನ್ನು ಕಾಣಲಿ ಎಂದು ಹಾರೈಸೋಣ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com