ಭರವಸೆಯ “ಯಲ್ಲೋ ಬೋರ್ಡ್ಗೆ” ಪೈಲ್ವಾನ್ ಕಿಚ್ಚ ಸಾಥ್… ಅಂಡ್ ಸನ್ ಶೈನ್ ವಿಶ್..

Published on

352 Views

ಯಲ್ಲೋ ಬೋರ್ಡ್… ಸ್ಯಾಂಡಲ್ ವುಡ್ ಅಂಗಳದಲ್ಲಿ ತಯಾರಾಗಿರೋ ಮತ್ತೊಂದು ಕ್ರಿಯೇಟೀವ್ ಟೀಮ್, ಭರವಸೆಯ ಚಿತ್ರ…. ಟೈಗರ್ ಪ್ರದೀಪ್ ನಾಯಕನಟನಾಗಿ ಕಾಣಿಸಿಕೊಂಡಿರೋ ಚಿತ್ರ..ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ ಕಿಚ್ಚ ಸುದೀಪ್, ತಮ್ಮ ನೆಚ್ಚಿನ ಹುಡ್ಗ ಪ್ರದೀಪ್ ಬರ್ತ್ಡೇ ಪ್ರಯುಕ್ತ, ಅವ್ರ ಟ್ವೀಟರ್ ಮೂಲಕ ಬರ್ತ್ಡೇ ವಿಶ್ ಜೊತೆಗೆ ಯಲ್ಲೋ ಬೋರ್ಡ್ ಚಿತ್ರದ ಪೋಸ್ಟರ್ನ ಲಾಂಚ್ ಮಾಡಿದ್ದಾರೆ.. ಫಸ್ಟ್ ರಾಂಕ್ ರಾಜು ಸಿನಿಮಾಗೆ ಅಸೋಸಿಯೇಟ್ ಆಗಿದ್ದ ತ್ರಿಲೋಕ್ ಲೋಕ್ ರೆಡ್ಡಿ ಈ ಚಿತ್ರಕ್ಕೆ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ.. ವಿಂಟೇಜ್ ಫಿಲಂಸ್ ಬ್ಯಾನರ್ ನಡಿಯಲ್ಲಿ ಗೌತಮ್ ನಿರ್ಮಾಣ, ಪ್ರವೀಣ್ ಶಂಭು ಛಾಯಾಗ್ರಹಣ, ಗಿರಿಮಹೇಶ್ ಸಂಕಲನವಿರೋ ಸಿನಿಮಾ. ಅಂದ್ಹಾಗೆ ಪೋಸ್ಟರ್ ನಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನಿಟ್ಟಿರೋ ಚಿತ್ರತಂಡ, ನಿರೀಕ್ಷೆ ಹುಟ್ಟಿಸಿದೆ.. ಈ ಚಿತ್ರವನ್ನ ಸದ್ಯದಲ್ಲೇ ಪ್ರೇಕ್ಷಕರೆದುರಿಗೆ ತರೋ ಸನ್ನಾಹದಲ್ಲಿದೆ ಚಿತ್ರತಂಡ..

Copyright ©2026 . All Rights Reserved. privacy | terms Whatsapp: 9538193653 Email: hello@flixoye.com