Yellow Gang : ಟೀಸರ್ ಮೂಲಕ ಸೌಂಡ್‌ ಮಾಡುತ್ತಿದೆ ‘ಯೆಲ್ಲೋ ಗ್ಯಾಂಗ್’

Published on

475 Views

Yellow Gang : ಟೀಸರ್ ಮೂಲಕ ಸೌಂಡ್‌ ಮಾಡುತ್ತಿದೆ ‘ಯೆಲ್ಲೋ ಗ್ಯಾಂಗ್’. ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿದ ರವೀಂದ್ರ ಪರಮೇಶ್ವರಪ್ಪ ಮೊದಲಬಾರಿಗೆ ತಮ್ಮ ನಿರ್ದೇಶನದಲ್ಲಿ ‘ಯೆಲ್ಲೊ ಗ್ಯಾಂಗ್’ ಕಟ್ಟಿಕೊಂಡಿದ್ದಾರೆ. ‘ಯೆಲ್ಲೋ ಗ್ಯಾಂಗ್’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಯ ಹಂತದಲ್ಲಿದೆ. ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಯೋಗರಾಜ್ ಭಟ್ “ಈ ಮೊದಲೇ ನಾನು ಟೀಸರ್ ನೋಡಿದ್ದೆ. ಟೀಸರ್ ನೋಡಿದಾಗ ನನಗನಿಸಿದು ರವೀಂದ್ರ ಒಳಗೊಬ್ಬ ಒಳ್ಳೆ ನಿರ್ದೇಶಕನಿದ್ದಾನೆಂದು ಅವನು ಮಾಡಿದ ಕೆಲಸ ನೋಡಿದಾಗ ತಿಳಿಯುತ್ತದೆ. ಚಿತ್ರದ ಟೈಟಲ್ ಚೆನ್ನಾಗಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕು” ಎಂದು ಹೇಳಿ ತಮ್ಮ ಶಿಷ್ಯ ಮತ್ತು ಚಿತ್ರತಂಡಕ್ಕೆ ಶುಭಹಾರೈಸಿದರು.

Yellow Gang
ಚಿತ್ರದಲ್ಲಿ 16 ಮುಖ್ಯ ಪಾತ್ರಗಳಿದ್ದು, ಎಲ್ಲ ಪಾತ್ರಗಳಿಗೂ ಮಹತ್ವ ಇರುತ್ತದೆ. ಇಲ್ಲಿ ಹೀರೋ ಹೀರೋಯಿನ್ ಅಂತ ಎಲ್ಲೂ ತೋರಿಸಿಲ್ಲ. ಡ್ರಗ್ ಡೀಲ್ ಮೇಲೆ ಕಥೆ ಸಾಗುತ್ತದೆ ಎಂದರು ನಿರ್ದೇಶಕ ರವೀಂದ್ರ. ಚಿತ್ರಕ್ಕೆ ಸುಜ್ಞಾನ್ ಛಾಯಾಗ್ರಹಣವಿದ್ದು,
ಜಿ.ಎಂ.ಆರ್ ಕುಮಾರ್ , ಮನೋಜ್ ಪಿ, ಡಿ ಎಸ್ ಪ್ರವೀಣ್,ಜೆ.ಎನ್.ವಿ ಎಂಟರ್ ಟೆನರ್ಸ್ ಸಹ ನಿರ್ಮಾಪಕರಾಗಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಲೋಕೇಶ್ ಹಿತ್ತಲಕೊಪ್ಪ ಸಾಥ್ ನೀಡಿದ್ದಾರೆ. ಈ ಚಿತ್ರ ಪ್ರಮುಖ ತಾರಾಗಣದಲ್ಲಿ ಅರ್ಚನಾ ಕೊಟ್ಟಗೆ, ನಾಟ್ಯ ರಂಗ, ಪ್ರದೀಪ್ ಪೂಜಾರಿ, ವಿಠ್ಠಲ ರಂಗಾಯಣ, ಅರುಣ್ ಕುಮಾರ್, ಸಂಚಾರಿ ಮಧು, ಮಲ್ಲಿಕಾರ್ಜುನ ದೇವರಮನೆ, ಬಲ ರಾಜ್ ವಾಡಿ ಮುಂತಾದವರಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com