ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಯಶ್-ದರ್ಶನ್-ಸುದೀಪ್

Published on

310 Views

ಅಂಬೇಡ್ಕರ್ ಭವನದಲ್ಲಿ ಅಂಬರೀಶ್ ಅವರಿಗೆ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ . ಕಳೆದ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸಿರುವ ಕನ್ನಡದ ಹಿರಿಯ ನಟ ಅಂಬರೀಶ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಫಿಲ್ಮ್ ಚೇಂಬರ್ ಉದ್ದೇಶಿಸಿದೆ

ಕಳೆದ ಶನಿವಾರ ಅಂದ್ರೆ ನವೆಂಬರ್ 24ರಂದು ನಟ ರೆಬಲ್ ಸ್ಟಾರ್ ಅಂಬರೀಶ್ ನಿಧನರಾದರು. ಹಿರಿಯ ನಟನ್ನನ್ನು ಕಳೆದುಕೊಂಡು ಚಿತ್ರರಂಗಕ್ಕೆ ಈಗ ನಾಯಕರಿಲ್ಲದ ಪರಿಸ್ಥಿತಿ ಎದುರಾಗಿದೆ. ಅಂಬಿ ಸ್ಥಾನವನ್ನು ಯಾರು ತುಂಬಲಿದ್ದಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಇನ್ನು ಈ ಸಂದರ್ಭದಲ್ಲಿ ಇದೇ ನವೆಂಬರ್ 30 ಕ್ಕೆ ಕನ್ನಡ ಚಿತ್ರರಂಗ ಒಂದಾಗಲಿದೆ . ಹೌದು , ಅಂಬೇಡ್ಕರ್ ಭವನದಲ್ಲಿ ಅಂಬರೀಶ್ ಅವರಿಗೆ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ . ಕಳೆದ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸಿರುವ ಕನ್ನಡದ ಹಿರಿಯ ನಟ ಅಂಬರೀಶ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಫಿಲ್ಮ್ ಚೇಂಬರ್ ಉದ್ದೇಶಿಸಿದೆ .

ಈ ವಿಶೇಷ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಡಾ . ಜಿ . ಪರಮೇಶ್ವರ್ ಭಾಗವಹಿಸಲಿದ್ದಾರೆ . ಅಲ್ಲದೆ ಅಂದು ಯಾವುದೇ ಸಿನಿಮಾ ಶೂಟಿಂಗ್ ನಡೆಯುವುದಿಲ್ಲ . ಹೀಗಾಗಿ ಕನ್ನಡ ಚಿತ್ರರಂಗದ ಎಲ್ಲಾ ನಟ – ನಟಿಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ . ಈ ವೇದಿಕೆಯಲ್ಲಿ ನಟ ದರ್ಶನ್ , ಸುದೀಪ್ ಹಾಗೂ ಯಶ್ ಸೇರಿದಂತೆ ಶಿವಣ್ಣ , ಅಪ್ಪು , ಉಪ್ಪಿ ಎಲ್ಲರು ಒಟ್ಟಿಗೆ ಸೇರಲಿದ್ದಾರೆ

Copyright ©2026 . All Rights Reserved. privacy | terms Whatsapp: 9538193653 Email: hello@flixoye.com