ಪ್ರಭಾಸ್ ಭೇಟಿಯ ಬಗ್ಗೆ ಸ್ಪಷ್ಟನೆ ಕೊಟ್ಟ ಯಶ್..!!

Published on

345 Views

ಪ್ರಭಾಸ್ ಭೇಟಿಯ ಬಗ್ಗೆ ಸ್ಪಷ್ಟನೆ ಕೊಟ್ಟ ಯಶ್..!!
ಮುಂಬೈನಲ್ಲಿ ಮೊನ್ನೆ ರಾಕಿಂಗ್ ಸ್ಟಾರ್ ಯಶ್ ಪ್ರಭಾಸ್ ರನ್ನು ಭೇಟಿಯಾಗಿದ್ದೆ ದೊಡ್ಡ ಸುದ್ದಿಯಾಗಿತ್ತು.ಕೆಲವರಲ್ಲಿ ಕೆಲವೊಂದು ಊಹಾಪೋಹಗಳು ಹುಟ್ಟಿಕೊಂಡಿತ್ತು. ಅದ್ರೆ ಪ್ರಭಾಸ್ ಭೇಟಿ ಬಗ್ಗೆ ಯಶ್ ಸ್ಪಷ್ಟನೆ ನೀಡಿದ್ದಾರೆ.

ನಿನ್ನೇ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ನಿ ರಾಧಿಕಾ ಪಂಡಿತ್, ಮಗಳ ಜೊತೆ ಯಶ್ ಹಾಜರಾಗಿದ್ದರು. ಈ‌ ಸಂದರ್ಭದಲ್ಲಿ ಪ್ರಭಾಸ್ ಭೇಟಿಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಯಶ್ ಸ್ಪಷ್ಟನೆ ಕೊಟ್ಟಿದ್ದಾರೆ. ‘ನಾನು ಮುಂಬೈಗೆ ಹೋಗಿದ್ದಾಗ ಅವರು ಮುಂಬೈಯಲ್ಲಿ ಇದ್ದಾರೆ ಅಂತ ಗೊತ್ತಾಯ್ತು, ಹೀಗಾಗಿ ಅವರನ್ನು ಭೇಟಿ ಮಾಡಿ ಒಂದೆರಡು ಗಂಟೆ ಜತೆಯಾಗಿ ಮಾತನಾಡಿಕೊಂಡು, ಊಟ ಮಾಡಿ ಬಂದ್ವಿ ಅಷ್ಟೇ. ಇದೊಂದು ಸಾಮಾನ್ಯ ಭೇಟಿಯಷ್ಟೇ’ ಎಂದು ಹೇಳಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com