ಗೋವಾದ ಸಮುದ್ರದ ಮಧ್ಯ ಮಗನ ಹುಟ್ಟುಹಬ್ಬ ಆಚರಿಸಿದ ಯಶ್…!!

Published on

360 Views

ನಟ ಯಶ್ – ನಟಿ ರಾಧಿಕಾ ಪಂಡಿತ್ ಪುತ್ರ ಯಥರ್ವನ ಮೊದಲ ವರ್ಷದ ಹುಟ್ಟುಹಬ್ಬ ಅಕ್ಟೋಬರ್ 30ರಂದು ಗೋವಾದ ಸಮುದ್ರದ ಮಧ್ಯೆದಲ್ಲಿ ಅದ್ದೂರಿಯಾಗಿ ನಡೆಯಿತು. ಈ ಸಂಭ್ರಮದ ಸಮಾರಂಭದಲ್ಲಿ ಯಶ್ ಕುಟುಂಬ‌, ಪೋಷಕರು, ಗೆಳೆಯರು ಭಾಗಿಯಾಗಿದ್ದರು.

ಮಗನ ಹುಟ್ಟುಹಬ್ಬ ಆಚರಣೆಯ ಆ‌ ಕ್ಷಣದ ವಿಡಿಯೋ ವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ‌ ರಾಧಿಕಾ ಪಂಡಿತ್‌, “ಕೇಕ್ ನ ರುಚಿ ನಿನಗೆ ಗೊತ್ತಾಗದೇ ಇರಬಹುದು, ಈ ದಿನದ ವಿಶೇಷತೆಯೂ ನಿನಗೆ ತಿಳಿಯದೇ ಇರಬಹುದು. ಅದರೆ ಪೋಷಕರಾಗಿ ನಮಗೆ ಜೀವನ ಪರ್ಯಂತ ನೆನಪಿನಲ್ಲಿ ಉಳಿಯುವ ‌ದಿನ’ ಎಂದು ಭಾವುಕ ಸಾಲುಗಳನ್ನು ಬರೆದಿದ್ದಾರೆ. ರಾಧಿಕಾರವರು ಹಂಚಿಕೊಂಡಿರುವ ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ಮೆಚ್ವುಗೆಯನ್ನು ಪಡೆಯಿತು. ಕೆಜಿಎಫ್ 2 ಸಿನಿಮಾದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದ ಯಶ್ ತನ್ನ ಮಗನ ಹುಟ್ಟುಹಬ್ಬಕ್ಕೆ ಬಿಡುವು ಮಾಡಿಕೊಂಡು ಮಗನ ಹುಟ್ಟುಹಬ್ಬವನ್ನು ಫ್ಯಾಮಿಲಿಯ ಜೊತೆಗೆ ಆಚರಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com