22-02-2019ರಿಂದ ತೆರೆಗೆ ಬರಲಿದೆ “ಯಾರಿಗೆ ಯಾರುಂಟು”

Published on

232 Views

ಒರಟ ಪ್ರಶಾಂತ್ ಅವರು ನಾಯಕನಾಗಿ ನಟಿಸಿರುವ ಯಾರಿಗೆ ಯಾರುಂಟು ಚಿತ್ರವು ಇದೇ ತಿಂಗಳ 22ರಿಂದ ತೆರೆಗೆ ಬರುತ್ತಿದೆ. ಪಯಣ ಖ್ಯಾತಿಯ ಕಿರಣ್‌ ಗೋವಿ ಅವರು ನಿರ್ದೇಶನ ಮಾಡಿರುವ ಈ ಚಿತ್ರದ ಮೂಲಕ ಒರಟ ಪ್ರಶಾಂತ್ ಅವರು ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈಗಾಗಲೇ ಹಾಡುಗಳು ಬಿಡುಗಡೆಯಾಗಿದ್ದು, ಎಲ್ಲಾ ಹಾಡುಗಳು ಕೇಳುಗರು ಮೆಚ್ಚಿಕೊಂಡಿದ್ದಾರೆ.

ಬಿ.ಜೆ.ಭರತ್‌ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ‌. ಕೃತಿಕಾ, ಲೇಖಾಚಂದ್ರ ಮತ್ತು ಅದಿತಿ ರಾವ್‌ ಮೂರು ಜನ ನಾಯಕಿಯರು ಇದ್ದಾರೆ. ಎಸ್.ಎಲ್.ಆರ್ ಎಂಟರ್ ಪ್ರೈಸೆಸ್ ಬ್ಯಾನರ್ ಅಡಿಯಲ್ಲಿ ಹೆಚ್‌ ಸಿ ರಘುನಾಥ್‌ ಅವರು ನಿರ್ಮಾಣ
ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com