Yar Yaro Gori Mele Kannada Movie Official Trailer

Published on

340 Views

Yar Yaro Gori Mele Kannada Movie Official Trailer

ತ್ರಿಕೋನ ಪ್ರೇಮಕಥೆ, ಪಕ್ಕಾ ರಾ ಲವ್‌ ಸಬ್ಜೆಕ್ಟ್ ಚಿತ್ರ “ಯಾರ್‌ ಯಾರೋ ಗೋರಿ ಮೇಲೆ …’ ಟ್ರೈಲರ್ ಬಿಡುಗಡೆಯಾಗಿದ್ದು, ಇದೊಂದು ಪಕ್ಕಾ ಯುವಕರಿಗೆ ಸಂಬಂಧಿಸಿದ ಚಿತ್ರ. ಹಳ್ಳಿಯಿಂದ ಸಿಟಿಗೆ ಬರುವ ಹುಡುಗರಿಬ್ಬರು ಆ ಸಿಟಿಯಲ್ಲಿ ಯಾವ ರೀತಿ ಸಮಸ್ಯೆ ಎದುರಿಸುತ್ತಾರೆ. ಕೆಲ ಸಮಸ್ಯೆಯಿಂದ ಹೇಗೆ ಹೊರಬರುತ್ತಾರೆ ಎಂಬ ಅಂಶ ಚಿತ್ರದ ಹೈಲೈಟ್‌.

ಇಡೀ ಚಿತ್ರದ ಕಥೆ ಇಬ್ಬರು ನಾಯಕರ ಸುತ್ತ ನಡೆಯಲಿದೆ. ಇದೊಂದು ಸಸ್ಪೆನ್ಸ್‌, ಥ್ರಿಲ್ಲರ್‌ನಲ್ಲಿ ಸಾಗುವ ಸಿನಿಮಾ ಹಾಗೂ ಹುಟ್ಟು ಸಾವಿನ ನಡುವೆ ಸಮಯ ಎಂಬುದು ಮನುಷ್ಯನ್ನು ಹೇಗೆಲ್ಲಾ ಆಡಿಸುತ್ತದೆ ಎಂಬುದನ್ನಿಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆಯಂತೆ. ರಾಘುಚಂದ್‌ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆಯ ಜವಾಬ್ದಾರಿಯೂ ಇವರದೇ. ಚಿತ್ರಕ್ಕೆ ಅಭಿ ಮತ್ತು ರಾಜ್‌ ಇಬ್ಬರು ನಾಯಕರು. ಈ ಪೈಕಿ ರಾಜ್‌ ಅವರು ಅಭಿನಯದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರಂತೆ. ಇನ್ನು, ವರ್ಷಾ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಲೋಕಿ ಅವರು ಸಂಗೀತ ನೀಡಿದ್ದಾರೆ. ವಿನು ಮನಸು ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಪ್ರದೀಪ್‌ ಗಾಂಧಿ ಚಿತ್ರದ ಛಾಯಾಗ್ರಾಹಕರು. ಚಿತ್ರದ ಸಸ್ಪೆನ್ಸ್ ಟ್ರೈಲರ್ ವೀಕ್ಷಿಸಿ.

Yar Yaro Gori Mele Kannada Movie Official Trailer

ಒಂದು ಸಿನಿಮಾ ಎರಡು ಕಥೆ ಕಿರುಚಿತ್ರದ ಲಿಂಕ್ ಇಲ್ಲಿದೆ! ಒಂದ್ಸಲ ನೋಡ್ಬುಟ್ ಶೇರ್ ಮಾಡ್ಬಿಡಿ!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com