ಜುಲೈ 12ರಿಂದ ಥಿಯೇಟರ್ ನಲ್ಲಿ “ವಿ3” ಯಾನ..!

Published on

339 Views

ಇದೇ 12ರಿಂದ ಚಂದನವದಲ್ಲಿ ಮೂರು ಮುದ್ದು ಮನಸುಗಳ ಸಂಚಲನ
3 ಹುಡುಗೀರ ಲವ್ವು ಲೈಫು ಮತ್ತು ಎಡವಟ್ಟಿನ ಯಾನ ಇದೇ 12ರಿಂದ..!!!

ಯಾನ… ಸದ್ಯ ಸ್ಯಾಂಡಲ್ ವುಡ್ ಅಂಗಳದಲ್ಲಿ ಟಾಕ್ ಕ್ರಿಯೇಟ್ ಮಾಡಿರೋ ಲೇಟೆಸ್ಟ್ ಸಿನಿಮಾ. ಹಿರಿಯ ಕಲಾವಿದರಾದ ಜೈ ಜಗದೀಶ್ ಮತ್ತು ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ದಂಪತಿಯ ಮೂವರು ಪುತ್ರಿಯರ ಚೊಚ್ಚಲ ಸಿನಿಮಾ. ಇತ್ತೀಚೆಗಷ್ಟೇ ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದ ಟ್ರೈಲರ್ ಲಾಂಚ್ ಮಾಡಿದ್ದು, ಅಲ್ಲೇ ವಿಜಯ್ ಲಕ್ಷ್ಮೀ ಸಿಂಗ್ ಮಗಳು ರಾಕಿ ಭಾಯ್ ಗೆ ಪ್ರಪೋಸ್ ಮಾಡಿದ್ದು, ಅ ಸುದ್ದಿ ಟ್ರೆಂಡ್ ಆಗಿದ್ದು ಎಲ್ಲಾರಿಗೂ ಗೊತ್ತಿರೋ ವಿಷ್ಯ.. ಈಗ ಹೊಸ ವಿಷ್ಯ ಏನಪ್ಪಾ ಅಂದ್ರೆ, ಯಾನ ಸಿನಿಮಾ ಇದೇ 12ಕ್ಕೆ ರಾಜ್ಯಾದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ.

ಯಾನ ಸಿನಿಮಾವನ್ನ ಆಕ್ಮೆ ಮೂವೀಸ್ ಇಂಟರ್ ನ್ಯಾಷಿನಲ್ ಬ್ಯಾನರ್ ಅಡಿಯಲ್ಲಿ ಹರೀಶ್ ಶೇರೆಗಾರ್ ನಿರ್ಮಿಸಿದ್ದಾರೆ. ವಿಜಯಲಕ್ಷ್ಮೀ ಸಿಂಗ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳೋದ್ರ ಜೊತೆಗೆ ಸ್ವಂತ ಮಕ್ಕಳನ್ನ ಚಿತ್ರರಂಗಕ್ಕೆ ಪರಿಚಯಿಸ್ತಿದ್ದಾರೆ. ಯಾನ ಸಿನಿಮಾ ಮೂವರು ಮುದ್ದು ಹೆಣ್ಣುಮಕ್ಕಳ ಸುತ್ತಾ ಸುತ್ತೋ ಕಥೆ. ಈಗಿನ ಹರೆಯದ ಯುವತಿಯರ ಕಥೆ. ಲವ್ವು, ಲೈಫು ಮತ್ತು ಒಂದಷ್ಟು ಎಡವಟ್ಟುಗಳ ಸಮ್ಮಿಶ್ರಣ. ಈಕಥೆಯಲ್ಲಿ ವೈನಿಧಿ. ವೈಭವಿ, ವೈಸಿರಿ ಜೈಜಗದೀಶ್ ಮತ್ತು ವಿಜಯ ಲಕ್ಷ್ಮೀ ಸಿಂಗ್ ಅವ್ರ ವಿ3 ಪುತ್ರಿಯರು ನಟಿಸಿದ್ದಾರೆ. ಇವರೊಚ್ಚಿಗೆ, ಸುಮುಖ , ಚಕ್ರವರ್ತಿ, ಅಭಿಷೇಕ್ ರಾಯಕರ್ ನಟಿಸಿದ್ದಾರೆ. ಇವರಿಗೆ ಹಿರಿಯ ನಟರಾದ ಅನಂತ್ ನಾಗ್ , ಸುಹಾಸಿನಿ, ರಾಮಕೃಷ್ಣ ಕಾಣಿಸಿಕೊಂಡಿದ್ದಾರೆ. ಹಾಸ್ಯ ನಟ ಶಿವರಾಜ್ ಕೆ.ಆರ್ ಪೇಟೆ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಮಿಂಚಿದ್ದಾರೆ. ಚಿಕ್ಕಣ್ಣ, ರಂಗಾಯಣ ರಘು, ಸಾಧು ಕೋಕಿಲಾ ಕೂಡ ಸಾಥ್ ಕೊಟ್ಟಿದ್ದಾರೆ. ಅಂದ್ಹಾಗೆ ಈ ಚಿತ್ರಕ್ಕೆ ಜೋಶ್ವಾ ಶ್ರೀಧರ್ ಸಂಗೀತ ನೀಡಿದ್ದು, ಅನೂಪ್ ಸಿಳೀನ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ.

ಯಾನ ಚಿತ್ರದ ಟ್ರೈಲರ್ ಸಖತ್ ಇಂಪ್ರೆಸೀವ್ ಆಗಿದೆ. ಎಲ್ಲಾ ಆಂಗಲ್ ನಿಂದ್ಲೂ ಪಾಸಿಟೀವ್ ಆಗಿ ಕಾಣ್ತಿದೆ. ಈ ಸಂದರ್ಭಕ್ಕೆ ತಕ್ಕಂತ ಕಥೆ ಎನ್ನಿಸ್ತಿದೆ. ಒಟ್ಟಾರೆ ಸಾಕಷ್ಟು ವಿಶೇಷ ವಿಚಾರಗಳಿಂದ ಕನ್ನಡ ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿರೋ, ಭರವಸೆ ಹೆಚ್ಚಿಸಿರೋ ಯಾನ ಸಿನಿಮಾ ಇದೇ 12ಕ್ಕೆ ಪ್ರೇಕ್ಷಕರೆದುರಿಗೆ ಬರ್ತಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com