ನಟನೆಯಿಂದ ದೂರ ಉಳಿತಾರ ಮೇಘನರಾಜ್…?
ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಪುತ್ರಿ ಮೇಘನರಾಜ್ ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಮೇಘಾನರಾಜ್ 2009 ರಲ್ಲಿ ಮಲಯಾಳಂನ “ಬೆಂಡುಅಪ್ಪರಾವ್” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ತೆಲುಗು, ಮಲಯಾಳಂ ,ಕನ್ನಡ ಸೇರಿದಂತೆ 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದವರು. 2019 ರಲ್ಲಿ “ಇರುವುದೆಲ್ಲವ ಬಿಟ್ಟು” ಚಿತ್ರದ ನಟನೆಗಾಗಿ ಬೆಸ್ಟ್ ನಟಿ ಅವಾರ್ಡ್ ಕೂಡ ಪಡೆದಿದ್ದಾರೆ.
ಮಲಯಾಳಂ ಅತೀ ಹೆಚ್ವು ಸಂಭಾವನೆ ಪಡೆಯುವ ನಟಿ ಎಂಬ ಖ್ಯಾತಿ ಪಡೆದಿದ್ದರು. ಅದರೆ ಈ ವರ್ಷದಲ್ಲಿ ಕನ್ನಡದಲ್ಲಿ ಅವರ ಅಭಿನಯದ ಸೆಲ್ಪೀ ಮಮ್ಮಿ, ಗೂಗಲ್ ಡ್ಯಾಡಿ ಹಾಗೂ ಬುದ್ದಿವಂತ ಸಿನಿಮಾ ತೆರೆ ಕಾಣಬೇಕಿತ್ತು. ಕೊರೋನಾ ಸಮಸ್ಯೆಯಿಂದ ಈ ಸಿನಿಮಾಗಳಿಗೂ ಹೊಡೆತ ಬಿತ್ತು. ಇದರ ಜೊತೆ ಪತಿ ಚಿರು ಸರ್ಜಾರನ್ನು ಕಳೆದುಕೊಂಡರು. ಇವರ ಪಾಲಿಗೆ 2020 ಕೆಟ್ಟ ವರ್ಷವಾಗಿ ಪರಿಣಮಿಸಿತು. ಇದರ ಮಧ್ಯೆ ತಂದೆಯನ್ನು ಕಳೆದುಕೊಂಡ ತಮ್ಮ ಮಗುವಿಗೆ ತಾಯಿ ಆಸರೆ ಬೇಕು ಅದಕ್ಕೆ ಯಾವುದೇ ಕೊರತೆಯಾಗಬಾರದೆಂದು.
ಚಿತ್ರರಂಗ ಮತ್ತು ತಮ್ಮ ನಟನೆಯನ್ನು ತೊರೆಯುತ್ತಾರೆಂಬ ರೂಮರ್ ಗಳು ಕೇಳಿ ಬರುತ್ತಿತ್ತು. ಈ ವಿಷಯದ ಬಗ್ಗೆ ಮೇಘನರಾಜ್ ರವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದರೂ, ಇದರ ಬಗ್ಗೆ ಮಾತನಾಡಿರುವ ಮೇಘನರಾಜ್ ತಂದೆ ಸುಂದರ್ ರಾಜ್ “ಮಗಳು ನಟನೆ ಮುಂದುವರೆಸುತ್ತಾಳೋ ಇಲ್ವಾ ಗೊತ್ತಿಲ್ಲ. ಅದು ಅವಳ ನಿರ್ಧಾರಕ್ಕೆ ಬಿಟ್ಟಿದ್ದು. ನನ್ನ ಪ್ರಕಾರ ಅವಳು ನಟನೆಯನ್ನು ಮುಂದುವರೆಸಬೇಕು. ಕಲೆಗೆ ಯಾವುತ್ತು ಸಾವಿಲ್ಲ” ಎಂದಿದ್ದಾರೆ. ಮುಂದೆ ಮೇಘನರಾಜ್ ರವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನೋಡಬೇಕಷ್ಟೆ. ಮೇಘನರಾಜ್ ಅಭಿಮಾನಿಗಳು ಮೇಘನರಾಜ್ ರವನ್ನು ತೆರೆ ಮೇಲೆ ನೋಡಲು ಕಾಯುತ್ತಿರುವುದಂತೂ ನಿಜ.