ದರ್ಶನ್ ಅವರನ್ನು ಸುಮಲತಾ ಬಾಸ್ ಎಂದು ಕರೆದದ್ದೂ ಏಕೆ

Published on

296 Views

ಕಳೆದ ನಾಲ್ಕೈದು ದಿನಗಳಿಂದ ‘ಬಾಸ್’ ಪದದ ವಿಚಾರವಾಗಿ ಅಭಿಮಾನಿಗಳು ಕಿತ್ತಾಡುತ್ತಿದ್ದಾರೆ ಎಂಬ ವಿಷಯ ಎಲ್ಲರಿಗೂ ತಿಳಿದೇ ಇದೆ. ಈ ವಿಚಾರವಾಗಿ ಚಿರಂಜೀವಿ ಸರ್ಜಾ ಸಹ ಮಧ್ಯೆ ಬಂದು ಅಭಿಮಾನಿಗಳನ್ನು ಸಂತೈಸಿದ್ದರು. ದರ್ಶನ್ ಅಭಿಮಾನಿಗಳು ಸಾಕಷ್ಟು ವರ್ಷಗಳಿಂದ ದರ್ಶನ್ ಅವರನ್ನು ಬಾಸ್ ಹಾಗೂ ಡಿಬಾಸ್ ಎಂದು ಕರೆಯುತ್ತಾ ಬರುತ್ತಿದ್ದಾರೆ. ಆದ್ದರಿಂದ ಆ ಬಿರುದನ್ನು ಎಂದಿಗೂ ಬಿಟ್ಟುಕೊಡಲು ತಯಾರಿಲ್ಲ ಎಂದು ಅಭಿಮಾನಿಗಳು ಪಣತೊಟ್ಟಿದ್ದಾರೆ. ಇವೆಲ್ಲಾ ವಿವಾದಗಳ ಮಧ್ಯೆ ನಟಿ ಸುಮಲತಾ ಅಂಬರೀಶ್ ದರ್ಶನ್ ಅವರನ್ನು ಬಾಸ್ ಎಂದು ಬಾಯ್ತುಂಬ ಕರೆದಿದ್ದಾರೆ.

ಅಷ್ಟಕ್ಕೂ ದರ್ಶನ್ ಅವರನ್ನು ಸುಮಲತಾ ಬಾಸ್ ಎಂದು ಕರೆದದ್ದೂ ಏಕೆ ಅನ್ನುವುದು ಸ್ಪೆಷಲ್. ನಟ ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲಿ 1800ಕ್ಕೂ ಹೆಚ್ಚು ವಿವಿಧ ಜಾತಿಯ ಹಾಗೂ ಅಪರೂಪ ತಳಿಯ ಸಸ್ಯಗಳನ್ನ ನೆಡೆಸಲು ನಿರ್ಧಾರ ಮಾಡಿದ್ದಾರೆ ಈ ವಿಚಾರ ತಿಳಿದ ಸುಮಲತಾ ಅದಕ್ಕೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದು, ಅದೇ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಸುಮಲತಾ ಅಂಬರೀಶ್ “ಇದೊಂದು ಉತ್ತಮ ಉದಾಹರಣೆ ದರ್ಶನ್ ಸಾವಿರಾರು ಅಭಿಮಾನಿಗಳಿಗೆ ಬಾಸ್ ಆಗಲು” ಎಂದಿದ್ದಾರೆ. ಟ್ವೀಟ್ ನೋಡಿರುವ ಅಭಿಮಾನಿಗಳು ತಮ್ಮ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com