ಯೋಗರಾಜ್ ಭಟ್ಟರ “ಪದವಿಪೂರ್ವ” ಕಾಲೇಜು ಸೇರಿದ ಈ ನಟಿಮಣಿ ಯಾರು ಗೊತ್ತಾ..?

Published on

463 Views

ಫ್ಯಾಷನ್ ಲೋಕಕ್ಕೂ ಬಣ್ಣದ‌ ಲೋಕಕ್ಕೂ‌ ದೊಡ್ಡ ನಂಟಿದೆ. ರ್ಯಾಂಪ್ ಮೇಲೆ ಬೆಕ್ಕಿನ ನಡಿಗೆ ಹಾಕೋ ಚೆಂದದ ಚೆಲುವೆಯರು ಬಣ್ಣದ ಜಗತ್ತಿಗೆ ಎಂಟ್ರಿ ಕೊಡೋದು ಹೊಸತಲ್ಲ. ಈಗಾಗ್ಲೇ ಗಾಂಧಿ ನಗರದಲ್ಲಿ ಮಾಡೆಲ್ ಲೋಕದ ಅದೆಷ್ಟೋ ಬ್ಯೂಟೀಸ್ ಬದುಕು ಕಟ್ಟಿಕೊಂಡಿದ್ದಾರೆ. ಈಗ ಇದೇ ಹಾದಿಯಲ್ಲಿ ಬೋಲ್ಡ್ ಅಂಡ್ ಬ್ಯೂಟಿಯೊಬ್ಬರು ಹೆಜ್ಜೆ ಹಾಕಿದ್ದಾರೆ. ಮೊದಲ ನೋಟದಲ್ಲಿ ಆಕೆ ಚಂದನವನದ ಸ್ಟಾರ್ ನಟಿಯಾಗಿ ಮಿಂಚೋ ಭರವಸೆ ಮೂಡಿಸ್ತಿದ್ದಾರೆ. ಅವರೇ ಯಶಾ ಶಿವಕುಮಾರ್.

ಮೂಲತಃ ಸಿಲಿಕಾನ್ ಸಿಟಿಯವರೇ ಆದ ಯಶಾ ಶಿವಕುಮಾರ್, ಪ್ರತಿಷ್ಠಿತ ವಿದ್ಯಾಸಂಸ್ಥೆ ಆಶ್ವಾಸ್ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ. ಅಲ್ಲದೇ 2019ರ ಫ್ಯಾಷನ್ ಎಬಿಸಿಡಿ ಸಂಸ್ಥೆ ಆಯೋಜಿಸಿದ್ದ ಮಿಸಚ ಬೆಂಗಳೂರು-2019, ಮಿಸ್ ಕರ್ನಾಟಕ ಇಂಟರ್ ನ್ಯಾಷನಲ್ 2019 ಜೊತೆಗೆ ಮುಂಬೈನಲ್ಲಿ ನಡೆದ ಮಿಸ್ ಗ್ಲೋರಿ ಆಫ್ ಗ್ಯಾಲಕ್ಸಿ-2019ರ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಫ್ಯಾಷನ್ ಕಿರೀಟ ಮುಡಿಗೇರಿಸಿಕೊಂಡಿರೋ ಚೆಲುವೆ.

ಭರತನಾಟ್ಯ, ಕಥಕ್ ನೃತ್ಯ, ಫ್ರೀ ಸ್ಟೈಲ್, ಬಾಲಿವುಡ್,‌ಮಣಿಪುರಿ ಮತ್ತು ಜಾನಪದದಂತಹ ಇತರ‌ ನೃತ್ಯ ಪ್ರಕಾರಗಳನ್ನೂ ಅದ್ಭುತವಾಗಿ ಕರಗತ ಮಾಡಿಕೊಂಡಿರೋ ಬ್ಯೂಟಿ, ಕಳೆದ ಒಂದು ವರ್ಷದ‌ ಮಾಡೆಲಿಂಗ್ ಅನುಭವ ಇದೆ. ಇದೀಗ ಇದೇ ಯಶಾ, ಯೋಗರಾಜ್ ಮತ್ತು ರವಿ ಶಾಮನೂರು ನಿರ್ಮಿಸುತ್ತಿರೋ, ಹರಿ ಪ್ರಸಾದ್ ಜಯಣ್ಣ ನಿರ್ದೇಶಿಸ್ತಿರೋ ಪದವಿಪೂರ್ವ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾಳೆ. ಈ ಮೂಲಕ ಸ್ಯಾಂಡಲ್ ವುಡ್ ಗೆ ಯಶಾ ಪಾದಾರ್ಪಣೆ ಮಾಡ್ತಿದ್ದಾರೆ.
ಇನ್ನೂ ಈ ಚಿತ್ರಕ್ಕೆ ಪೃಥ್ವಿ ಶಾಮನೂರ್ ನಾಯಕನಾಗಿ ನಟಿಸ್ತಿದ್ದು, ಅಂಜಲಿ ಅನೀಶ್ ನಾಯಕಿಯಾಗಿ ಮಿಂಚಲಿದ್ದಾರೆ. ಇವರಿಬ್ಬರ ಮೊದಲ‌ ಸಿನಿಮಾವಿದು. ಪದವಿಪೂರ್ವ ಚಿತ್ರಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡ್ತಿದ್ರೆ, ಸಂತೋಷ್ ರೈ ಪರಾಜೆ ಕ್ಯಾಮಾರ ವರ್ಕ್ ಚಿತ್ರದಲ್ಲಿರಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com