ತ್ರಿಕೋನ ಪ್ರೇಮ ಕಥೆ ನೆನಪು ಮರುಕಳಿಸಿದಾಗ
ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಮೂವೀಸ್ ಲಾಂಛನದಲ್ಲಿ ಶಿರಾ ಕರಾವರಹಳ್ಳಿ ಡಿ.ಎಸ್. ಕೃಷ್ಣಮೂರ್ತಿ ರಚನೆ ಮತ್ತು ನಿರ್ಮಾಣದ ನೆನಪು ಮರುಕಳಿಸಿದಾಗ ಕಾದಂಬರಿ ಆಧಾರಿತ ಚಿತ್ರಕ್ಕೆ ದೇವದಾಸ್ ನಿರ್ದೇಶನ ಮಾಡಿದ್ದಾರೆ. ಸಹ ನಿರ್ಮಾಪಕರು ನವನ್.ಆರ್, ತ್ಯಾಗರಾಜ್, ಲೋಕೇಶ್, ಕಾಂತರಾಜು, ಶ್ರೀನಿವಾಸ್. ಮೊನ್ನೆ ನಡೆದ ಲಿರಿಕಲ್ ವಿಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕರುಗಳಾದ ಜೋಸೈಮನ್, ಬಿ.ರಾಮಮೂರ್ತಿ ಮತ್ತು ಗುರುಪ್ರಸಾದ್‌ಪತ್ತಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.
ತ್ರಿಕೋನ ಪ್ರೇಮಕಥೆಯಲ್ಲಿ ಕಥಾನಾಯಕ ಹಳ್ಳಿಯಲ್ಲಿ ಇದ್ದು, ಮಾವನ ಮಗಳು ಇರುತ್ತಾಳೆ. ನಂತರ ಪ್ರಾಧ್ಯಾಪಕ ಉದ್ಯೋಗ ಹರಿಸಿ ಬೆಂಗಳೂರಿಗೆ ಬಂದಾಗ ಹುಡುಗಿಯೊಬ್ಬಳು ಇವನ ಒಳ್ಳೆ ಗುಣಗಳನ್ನು ಕಂಡು ಪ್ರೀತಿ ಮಾಡುತ್ತಾಳೆ. ಕೊನೆಗೆ ಇವನು ಯಾರಿಗೆ ಸಿಗುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಬೆಂಗಳೂರು, ಮಂಡ್ಯಾ, ಕೆ.ಎಂ.ದೊಡ್ಡಿ, ಬಿಡದಿ, ಭೈರಮಂಗಲ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.
ನಾಯಕನಾಗಿ ಬುಲೆಟ್‌ವಿನೋದ್, ಹಳ್ಳಿ ಹುಡುಗಿಯಾಗಿ ಸೌಂದರ್ಯಗೌಡ, ರಾಜಕೀಯ ವ್ಯಕ್ತಿಯ ಮಗಳಾಗಿ ಸೋನಿಶೆಟ್ಟಿ, ಖಳನಾಗಿ ಅಭಿ ಇವರೊಂದಿಗೆ ಸನ್ನಿತುಮಕೂರು, ಶೋಭರಾಜ್, ಕಿಲ್ಲರ್‌ವೆಂಕಟೇಶ್, ಮೀಸೆ ಆಂಜನಪ್ಪ, ಚಿಕ್ಕ ಹೆಜ್ಜಾಜಿ ಮಹದೇವ್, ಮೈಸೂರು ಮಂಜುಳ, ನರಸಿಂಹಯ್ಯ, ಅಶೋಕ್.ಎಂ.ಕಾಳೆ ಮುಂತಾದವರು ನಟಿಸಿದ್ದಾರೆ. ಐದು ಹಾಡುಗಳಿಗೆ ಅಲೆನ್ ಕ್ಲಾರೆನ್ಸ್ ಕ್ರಾಸ್ತ ಸಂಗೀತ ಸಂಯೋಜಿಸಿದ್ದಾರೆ. ಸಂಕಲನ ಪವನ್, ಛಾಯಾಗ್ರಹಣ ರಮೇಶ್‌ಕೊಯಿರಾ, ಸಾಹಸ ಗಣೇಶ್ ಅವರದಾಗಿದೆ. ಚಿತ್ರವು ಸದ್ಯದಲ್ಲೆ ಬಿಡುಗಡೆಯಾಗುವ ಸಾಧ್ಯತೆ ಇದೆ.