ತರುಣ್ ಸುಧೀರ್ ಜೊತೆ ಹಸೆಮಣೆ ಏರಲಿದ್ದಾರೆಯೇ ರಾಬರ್ಟ್ ಬೆಡಗಿ ಸೋನಲ್!? – ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು
ನಟ ಹಾಗೂ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮಾಂಥೆರೋ ಮದೆವಯಾಗಲಿದ್ದಾರೆ ಎಂಬ ಸುದ್ದಿ ಇತ್ತಿಚೆಗೆ ಕೇಳಿಬರುತ್ತೆದೆ. ತುರುಣ್ ಸುಧೀರ್ ನಿರ್ದೇಶನ ಮಾಡಿದ್ದ ʼರಾಬರ್ಟ್ʼ ಚಿತ್ರದಲ್ಲಿ ದರ್ಶನ್ ಅಭಿನಯಿಸಿದ್ದು, ವಿನೋದ್ ಪ್ರಭಾಕರ್ ಪ್ರಯಸಿಯಾಗಿ ಸೋನಲ್ ಮಾಂಥೇರೋ ರವರು ಕಾಣಿಸಿಕೊಂಡಿದ್ದರು. ರಾಬರ್ಟ್ ಚಿತ್ರದಲ್ಲಿ ವಿಶೇಷ ಪತ್ರದಲ್ಲಿ ಕಾಣಿಸಿಕೊಂಡಿದ್ದ ಸೋನಲ್ ರವರಿಗೆ ಹಾಗೂ ನಿರ್ದೇಶನ ಮಾಡಿದ್ದ ತರುಣ್ ಸುಧೀರ್ ರವರು ಜೊತೆಗೆ ಸಪ್ತಪದಿ ತುಳಿಯಲ್ಲಿದ್ದಾರೆ ಎಂಬ ವಿಷಯ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿದೆ.
ತುರುಣ್ ಸುಧೀರ್ ರವರು ಸ್ಯಾಂಡಲ್ ವುಡ್ ನಟ ಮತ್ತು ಯಶಸ್ವಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ ಹಾಗೂ ಇಷ್ಟು ದಿನಗಳ ಕಾಲ ಸಿಂಗಲ್ ಆಗಿದ್ದ ತರುಣ್ ಇಂದು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಯಾವುದೇ ರಿಯಾಲಿಟಿ ಶೋನಲ್ಲಿ ತರುಣ್ ಸುಧೀರ್ ಕಾಣಿಸಿಕೊಂಡರೂ, ಮದುವೆ ಯಾವಾಗ ಎಂಬ ಪ್ರಶ್ನೆಯೇ ಹೆಚ್ಚಾಗಿ ಕೇಳಿಬರುತ್ತಿತ್ತು. ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ ಎಂದು ಆಪ್ತರು ಸಂತೋಷದಲ್ಲಿದ್ದಾರೆ.
ಸೋನಲ್ ಮಾಂಥೇರೋ ರವರು ತುಳು ಸಿನಿಮಾಗಳ ಮೂಲಕ ತಮ್ಮ ಚಿತ್ರ ಜೀವನವನ್ನು ಪ್ರಾರಂಭಿಸಿದ್ದು, ನಂತರ ಕರಾವಳಿ ಸುಂದರಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ಸೋನಲ್ ರವರು ಕನ್ನಡ ಹಾಗೂ ತುಳು ಚಿತ್ರತಂಡದಲ್ಲಿ ಯಶಸ್ವಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪಂಚತಂತ್ರ, ಬನಾರಸ್ ಹಾಗೂ ರಾಬರ್ಟ್ ನಂತರ ಹಿಟ್ ಚಿತ್ರಗಳಲ್ಲಿ ಯಶಸ್ವಿಯಾಗಿ ಕಾಣಿಸಿಕೊಂಡಿದ್ದಾರೆ.
ತರುಣ್ ಸುಧೀರ್ ಮತ್ತು ಸೋನಲ್ ಮಾಂಥೇರೋ ಇಬ್ಬರು ನಟ ದರ್ಶನ್ ರವರು ಆಪ್ತರು ಹಾಗೂ ಇವರಿಬ್ಬರು ಕೂಡ ಜೊತೆಯಲ್ಲಿ ಕೆಲಸ ಮಾಡಿದ್ದರಿಂದ, ಜೋಡಿಗಳು ಹತ್ತಿರವಾಗಿ ಈಗ ದಾಪಂತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿಯೂ ಹರಿಡಾಡುತ್ತಿದೆ. ಆದರೆ, ತರುಣ್ ಮತ್ತು ಸೋನಲ್ ರವರು ಈ ಸುದ್ದಿಯನ್ನು ಇನ್ನೂ ಅಧಿಕೃತವಾಗಿ ಹಂಚಿಕೊಂಡಿಲ್ಲ ಹಾಗೂ ಅಭಿಮಾನಿಗಳು ಈ ಸುದ್ದಿ ನಿಜವಾಗಲಿ ಎಂದು ಕಾಯುತ್ತಿದ್ದಾರೆ.
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ https://flixoye.com ನ್ನು ಫಾಲೋ ಮಾಡಿ.