ಬ್ಯಾಡ್ ನ್ಯೂಸ್ ಗೆ ಗೆ ಸೆನ್ಸಾರ್ – ಯು ಎ ಸರ್ಟಿಫಿಕೇಟ್ ಪಡೆದ ಚಿತ್ರದಲ್ಲಿ ಅಂಥದ್ದೇನಿದೆ?

Published on

521 Views

ಇತ್ತೀಚೆಗಷ್ಟೇ ಎಲ್ಲೆಡೆ ಸುದ್ದಿಯಾಗಿರುವ ವಿಕ್ಕಿ ಕೌಶಲ್ ನಟನೆಯ ಬ್ಯಾಡ್ ನ್ಯೂಸ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯುಎ ಸರ್ಟಿಫಿಕೇಟ್ ನೀಡಿದೆ.

ಮೊನ್ನೆಯಷ್ಟೇ ರಿಲೀಸ್ ಆದ ಈ ಚಿತ್ರದ ಜಾನಂ ಹಾಡಿನಲ್ಲಿ, ನಾಯಕ ವಿಕ್ಕಿ ಕೌಶಲ್ ಹಾಗೂ ನಾಯಕಿ ತೃಪ್ತಿ ದಿಮ್ರಿ ಮೈಚಳಿ ಬಿಟ್ಟು ಕುಣಿದಿದ್ದು, ಪಡ್ಡೆ ಹುಡುಗರ ಮೈನವಿರೇಳಿಸಿತ್ತು.

ಚಿತ್ರದಲ್ಲಿ ಹಾಗೂ ಹಾಡುಗಳಲ್ಲಿದೆ ಎನ್ನಲಾದ ಕಿಸ್ಸಿಂಗ್ ಸೀನ್ ಗಳು ಹಾಗೂ ಇತರ ದೃಶ್ಯಗಳನ್ನು ಪರಿಶೀಲಿಸಿದ ಸೆನ್ಸಾರ್ ಮಂಡಳಿ, ಒಟ್ಟು ವಿವಿಧ ಭಾಗಗಳ 27 ಸೆಕೆಂಡ್ ಗಳ ಪ್ರಸಾರಕ್ಕೆ ಕತ್ತರಿ ಹಾಕುವಂತೆ ಹೇಳಿದೆ. ಆದರೆ ಕಿಸ್ಸಿಂಗ್ ಸೀನ್ ಗಳನ್ನು ತೆಗೆಯದೇ ಇದ್ದರೂ ಮಾರ್ಪಾಡು ಮಾಡುವಂತೆ ಸೂಚಿಸಿದೆ.

ಚಿತ್ರದಲ್ಲಿ ವಿಕ್ಕಿ ಕೌಶಲ್ ಜೊತೆಗೆ ತೃಪ್ತಿ ಧಿಮ್ರಿ, ಅಮ್ಮಿ ವಿರ್ಕ್, ಫಾತಿಮಾ ಸನಾ ಶೇಖ್, ಸಾನ್ಯಾ ಮಲ್ಹೋತ್ರಾ, ನೇಹಾ ಧೂಪಿಯಾ ಮುಂತಾದವರು ನಟಿಸಿದ್ದಾರೆ.

ಈ ಚಿತ್ರದ ತೌಬಾ ತೌಬಾ ಮತ್ತು ಜಾನಂ ಹಾಡುಗಳು ಈಗಾಗಲೇ ಬಹಳ ಟ್ರೆಂಡ್ ಕ್ರಿಯೇಟ್ ಮಾಡಿದ್ದು, ಚಿತ್ರ ಪಡ್ಡೆ ಹುಡುಗರನ್ನು ಮೆಚ್ಚಿಸುವುದಂತೂ ಸತ್ಯ.

 

Copyright ©2026 . All Rights Reserved. privacy | terms Whatsapp: 9538193653 Email: hello@flixoye.com