ಯಶ್ ರಾಯಲ್ ಲುಕ್ ಪೋಟೋದ ಹಿಂದಿನ ಸೀಕ್ರೇಟ್ ಏನು..?
ಬ್ಲೇಜರ್ ಹಾಕಿಕೊಂಡ ಗಡ್ಡಧಾರಿ ಯಶ್ ರಾಯಲ್ ಲುಕ್ ನಲ್ಲಿರುವ ಪೋಟೋವೊಂದು ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಈ ಫೋಟೋ ಕೆಜಿಎಫ್-2 ಸ್ಟಿಲ್ ಎಂದುಕೊಂಡವರಿಗೆ , ಈ ಫೋಟೋದ ಅಸಲಿ ರಹಸ್ಯ ಇದೀಗ ರಿವೀಲ್ ಆಗಿದೆ. ಮೈಸೂರಿನಲ್ಲಿ ಕೆಜಿಎಫ್ – 2 ಶೂಟಿಂಗ್ ನಡೆಯುತ್ತಿದ್ದು, ಚಿತ್ರತಂಡ ಮೈಸೂರಿನಲ್ಲಿ ಬೀಡು ಬಿಟ್ಟಿದ್ದು ಕೆಜಿಎಫ್ 2 ಚಿತ್ರೀಕರಣ ದಲ್ಲಿ ಯಶ್ ಬ್ಯುಸಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ಯಶ್ ಬ್ರೌನ್ ಬ್ಲೇಜರ್ ಹಾಕಿಕೊಂಡಿರುವ ಫೋಟೋವೊಂದು ಭಾರೀ ವೈರಲ್ ಆಗಿತ್ತು. ಈ ಫೋಟೋದಲ್ಲಿ ಯಶ್ ಉದ್ದ ಕೂದಲು ಮತ್ತು ಗಡ್ಡ ಬಿಟ್ಟಿದ್ದು, ಕೈನಲ್ಲಿ ದಂಡವೊಂದನ್ನು ಹಿಡಿದು, ಆಸೀನರಾಗಿರುವ 90ರ ದಶಕದ ರಾಯಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋವನ್ನು ಎಲ್ಲರೂ ಇದು ಕೆಜಿಎಫ್ ಚಿತ್ರದ ಸ್ಟಿಲ್ ಎಂದುಕೊಂಡಿದ್ದುಂಟು. ಆದರೆ ಆ ಪೋಟೋ ಕೆಜಿಎಫ್ ಚಿತ್ರದ್ದಲ್ಲ. ಯಶ್ ಈ ಲುಕ್ನಲ್ಲಿ ಕಾಣಿಸಿಕೊಂಡಿದ್ದು ಖಾಸಗಿ ಕಂಪನಿಯೊಂದರ ಜಾಹೀರಾತಿಗಾಗಿ. ಆ ಜಾಹೀರಾತಿನ ಮೇಕಿಂಗ್ ವಿಡಿಯೋ ಈಗ ರಿವೀಲ್ ಆಗಿದ್ದು ಯಶ್ 3-4 ಕಾಸ್ಟ್ಯೂಮ್ನಲ್ಲಿ ಫೋಟೋಶೂಟ್ ಮಾಡಿಸಿರುವ ಪೋಟೋಗಳನ್ನು ನೋಡಬಹುದು.