ವೀಕೆಂಡ್ ಚಿತ್ರದ ರಿಲೀಸ್ ಡೇಟ್ ಫಿಕ್ಸ್, ಮೇ 24ಕ್ಕೆ ಆಗುತ್ತೆ ರಿಲೀಸ್..!

Published on

595 Views

ಹೊಸಬರ ಹೊಸ ಕನಸು ವೀಕೆಂಡ್ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದ್ದು ಚಿತ್ರತಂಡ ಸಖತ್ ಥ್ರಿಲ್ ಆಗಿದೆ. ಹೌದು, ಇದೇ ತಿಂಗಳು ಅಂದ್ರೆ ಮೇ 24ರಂದು ವೀಕೆಂಡ್ ಸಿನಿಮಾ ರಿಲೀಸ್ ಆಗ್ತಿದೆ. ಲವ್, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್, ಕಾಮಿಡಿ, ತಾತ-ಮೊಮ್ಮಗನ ವಿಶಿಷ್ಟ ಕೆಮಿಸ್ಟ್ರಿಯೊಂದಿಗೆ ಅತ್ಯಂತ ಪ್ರಸ್ತುತ ಸಮಸ್ಯೆ ಹಾಗೂ ಲೈಫ್ಸ್ಟೈಲ್ ಕಥೆಯೊಂದಿಗೆ ಈ ಚಿತ್ರ ಒಳಗೊಂಡಿದೆ. ನಿರ್ದೇಶಕ ಶೃಂಗೇರಿ ಸುರೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರೋ ಈ ಚಿತ್ರವನ್ನು ಮಂಜುನಾಥ್.ಡಿ ಮೆ.ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಇನ್ನು ಕವಲುದಾರಿ, ನಟಸಾರ್ವಭೌಮ ಮುಂತಾದ ಚಿತ್ರಗಳನ್ನು ವಿತರಣೆ ಮಾಡಿದ ಧೀರಜ್ ಎಂಟರ್ಪ್ರೈಸಸ್ ವೀಕೆಂಡ್ ಚಿತ್ರವನ್ನು ಡಿಸ್ಟ್ರಿಬ್ಯೂಟ್ ಮಾಡ್ತಿರೋದು, ಚಿತ್ರತಂಡಕ್ಕೆ ಆನೆಬಲ ತಂದುಕೊಟ್ಟಿದೆ.

ಈಗಾಗಲೇ ವಿಭಿನ್ನ ಹಾಡುಗಳ ಮೂಲಕ ಗಮನ ಸೆಳೆದಿರೋ ವೀಕೆಂಡ್ ಚಿತ್ರದಲ್ಲಿ, ಅನಂತ್ ನಾಗ್ ವಿಭಿನ್ನ ಮತ್ತು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಹೊಸ ಪ್ರತಿಭೆಗಳಾದ ಮಿಲಿಂದ್, ಸಂಜನಾ ಬುರ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ನಾಗಭೂಷಣ್, ಗೋಪಿನಾಥ್ ಭಟ್ ಮುಂತಾದ ಪ್ರತಿಭಾವಂತರ ದೊಡ್ಡ ತಂಡವೇ ಈ ಚಿತ್ರದಲ್ಲಿ ನಟಿಸಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com