ನಮ್ಮಲ್ಲಿ ಚುನಾವಣಾ ವ್ಯವಸ್ಥೆಯೇ ಸರಿಯಿಲ್ಲ : ವಿಜಯ್ ದೇವರಕೊಂಡ
ಸ್ಟಾರ್ ನಟರ ಪೈಕಿ ಒಬ್ಬರಾಗಿ ಮಿಂಚುತ್ತಿರುವ ಅರ್ಜನ್ ರೆಡ್ಡಿ ಖ್ಯಾತಿಯ ದೇವರಕೊಂಡ ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ತಮ್ಮ ಪಾತ್ರದಲ್ಲಿರುವಂತೆ ಕೆಲವೊಮ್ಮೆ ನಿಜ ಜೀವನದಲ್ಲೂ ತಮ್ಮ ನೇರ ನುಡಿಯಿಂದ ಕೆಲವೊಂದು ಟೀಕೆಗಳಿಗೆ ಗುರಿಯಾಗುತ್ತಿರುತ್ತಾರೆ.
ಈಗ ಸದ್ಯಕ್ಕೆ ಪುರಿ ಜಗನ್ನಾಥ್ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಬಿಜಿಯಾಗಿರುವ ವಿಜಯ್ ನಂತರ ಸ್ಟಾರ್ ನಿರ್ದೇಶಕ ಸುಕುಮಾರ್ ಜೊತೆಗೆ ಚಿತ್ರ ಮಾಡಲಿದ್ದಾರೆ. ವಿಜಯ್ ದೇವರಕೊಂಡ ಇತ್ತೀಚಿಗೆ ಖಾಸಗಿ ಚಾನೆಲ್ ವೊಂದರಲ್ಲಿ ನೀಡಿದ ಸಂದರ್ಶನದಲ್ಲಿ ವಿಜಯ್ ಅವರಿಗೆ ರಾಜಕೀಯ ಪ್ರವೇಶದ ಕುರಿತು ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರ ನೀಡುತ್ತ, ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಬದಲು ಸರ್ವಾಧಿಕಾರಿ ಶೈಲಿಯ ಆಡಳಿತ ವ್ಯವಸ್ಥೆ ಇರಬೇಕಿತ್ತು.
ಎಲ್ಲರಿಗೂ ಮತದಾನದ ಹಕ್ಕನ್ನು ನೀಡಬಾರದು. ಮಧ್ಯಮ ವರ್ಗದ ಬುದ್ಧಿವಂತ ಜನ, ತಮ್ಮ ಹಕ್ಕನ್ನು ಮಾರಿಕೊಳ್ಳದ, ತಿಳುವಳಿಕೆ ಉಳ್ಳವರು ಮತದಾನಕ್ಕೆ ಅರ್ಹರು. ಆಡಳಿತ ವ್ಯವಸ್ಥೆ ಸರಿಯಾಗಬೇಕಾದರೆ ಇಂತಹ ಕೆಲವರಿಗೆ ಮಾತ್ರ ಮತದಾನದ ಹಕ್ಕು ನೀಡಬೇಕು ಎಂದಿದ್ದಾರೆ. ಈಗಿನ ನಮ್ಮ ಚುನಾವಣಾ ವ್ಯವಸ್ಥೆ ಸರಿಯಿಲ್ಲ ಎಂದಿದ್ದಾರೆ. ಇದರ ಜೊತೆಗೆ ನಾನು ರಾಜಕೀಯಕ್ಕೆ ಪ್ರವೇಶ ಮಾಡುವುದಿಲ್ಲವೆಂದು ಹೇಳಿದ್ದಾರೆ.