ನಾವಿಬ್ಬರು ಬೆಸ್ಟ್ ಫ್ರೆಂಡ್ಸ್
ಶೃತಿ ಮತ್ತು ರಶ್ಮಿ ಗೆಳತಿಯರು ಪ್ರೀತಿಗೋಸ್ಕರ ಮನಸ್ತಾಪ ಮಾಡಿಕೊಂಡಿದ್ದಾರೆ. ಒಬ್ಬಾಕೆ ಮಚ್ಚಿನಿಂದ ಆಕ್ರಮಣ ಮಾಡಿ ಕೊಲೆ ಆರೋಪದ ಮೇಲೆ ಜೈಲಿನಲ್ಲಿ ಬಂದಿಯಾಗಿದ್ದಾರೆ. ಇದು ನಡೆದಿದ್ದು 2012, ಹಾಸನದಲ್ಲಿ. ಇದನ್ನೆ ಆಧರಿಸಿದ ‘ಬೆಸ್ಟ್ ಫ್ರೆಂಡ್ಸ್’ ಸಿನಿಮಾವೊಂದು ಸೆನ್ಸಾರ್‍ನಿಂದ ಯುಎ ಪ್ರಮಾಣಪಡೆದುಕೊಂಡು ಜನರಿಗೆ ತೋರಿಸಲು ಸಜ್ಜಾಗಿದೆ. ನಿರ್ದೇಶಕ ಟೇ.ಶೀ.ವೆಂಕಟೇಶ್ ಇದರ ಬಗ್ಗೆ ಸಂಶೋಧನೆ ನಡೆಸಿ ಸಂಬಂದಪಟ್ಟವರು, ವಕೀಲರನ್ನು ಭೇಟಿ ಮಾಡಿ ಹಲವು ವಿಷಯಗಳನ್ನು ಕಲೆಹಾಕಿ ಕತ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಶೇಕಡ 50 ರಷ್ಟು ನೈಜ ಘಟನೆ ಇರಲಿದ್ದು, ಉಳಿದವು ಕಾಲ್ಪನಿಕವಾಗಿದೆಯಂತೆ. ಘರ್ಷಣೆ ನಡುವೆ ಕಾನೂನು ಮತ್ತು ಮಾನವ ಹಕ್ಕುಗಳು, ಇದು ತೀರ್ಪು ನೀಡಲಾಗದ ಪ್ರೇಮಕತೆ ಅಂತ ಪೋಸ್ಟರ್‍ನಲ್ಲಿ ಹೇಳಿಕೊಂಡಿದ್ದಾರೆ. ನಿರ್ದೇಶಕರು ಹೇಳುವಂತೆ ಭಾವನೆಗಳು ತುಂಬಿದ ಪ್ರೇಮಕತೆಯಲ್ಲಿ ಸಾಮಾಜಿಕ ಕಳಕಳಿಯನ್ನು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಹೆಣ್ಣು ಮತ್ತು ಹೆಣ್ಣು ಸಲಿಂಗ ಕಾಮಿಗಳಾಗಿ ಪ್ರೇಮ ವಿಚಾರ ಸಂಬಂದದಲ್ಲಿ ಒಬ್ಬಳೆ ಉಳಿಯಬೇಕೆಂದು ಅಪರಾಧ ಮಾಡುವುದು. ಸರಿಯಲ್ಲವೆಂದು ಸಂದೇಶದ ಮೂಲಕ ಹೇಳಲಾಗಿದೆಯಂತೆ.
ಸಲಿಂಗಕಾಮ ಮಾಡುವುದು ಕಾನೂನುಬಾಹಿರವೆಂದು ದೇಶದ 72 ಪ್ರದೇಶಗಳಲ್ಲಿ ಹೇಳಿದೆ. ಸರ್ವೋಚ್ಚ ನ್ಯಾಯಲಯವು ಸೆಕ್ಷನ್ 377 ಐಪಿಸಿ ಪ್ರಕಾರ ಇಂತಹ ಅಪರಾಧಿಗಳಿಗೆ ಜೀವಾವಧಿ ಶಿಕ್ಷಿ ವಿದಿಸಿರುತ್ತದೆ. ಸಲಿಂಗಕಾಮಿಗಳು, ಲೈಂಗಿಕ ಕಾರ್ಯಕರ್ತರನ್ನು ಸಮಾಜವು ಒಂದು ರೀತಿಯಲ್ಲಿ ನೋಡುತ್ತದೆ. ಪ್ರೇಮಕತೆಯಾಗಿ ಉಳಿಯಬೇಕು, ಕಾಮಕತೆಯಾಗಿ ಉಳಿಬಾರದು. ಈ ವರ್ಗದ ಜನರನ್ನು ದೋಷಿಸದೆ, ಸಾಮಾಜಿಕ ನ್ಯಾಯ ನೀಡಬೇಕು ಎಂಬುದರ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾಗಿದೆ. ಚಿತ್ರದಲ್ಲಿ ನಟರು ಇರದೆ ಹೊಸ ನಟಿಮಣಿಯರು ಅಭಿನಯಿಸಿರುವುದು ವಿಶೇಷವಾಗಿದೆ. ಮುಖ್ಯ ಪಾತ್ರದಲ್ಲಿ ಮೇಘನಾ ಮತ್ತು ಚಿಕ್ಕಮಗಳೂರಿನ ದ್ರಾವ್ಯಶೆಟ್ಟಿ ಇವರೊಂದಿಗೆ ಆಶಾ, ಸುಮತಿಪಾಟೀಲ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಅಖಂಡ ಕರ್ನಾಟಕ ಚಲನ ಚಿತ್ರೋದ್ಯಮ ಪರಿಷತ್ ಮುಖಾಂತರ ಲಯನ್ ಎಸ್.ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಚಿತ್ರವು ಮುಂದಿನ ತಿಂಗಳು ಬಿಡುಗಡೆದಯಾಗುವ ಸಾದ್ಯತೆ ಇದೆ.