ಕಿಚ್ಚನಿಗೆ ಫಿಟ್ನೆಸ್ ಸವಾಲು ಹಾಕಿದ ವಿನಯ್ ಕುಮಾರ್!

Published on

309 Views

ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಆರಂಭಿಸಿರುವ ‘ಹಮ್ ಫಿಟ್ ಹೈ ತೋ ಇಂಡಿಯಾ ಫಿಟ್ ’ ಅಭಿಯಾನಕ್ಕೆ ಬಾಲಿವುಡ್ ಮಂದಿ , ಕ್ರಿಕೆಟಿಗರೂ ಕೂಡ ಒಳ್ಳೆ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಈಗ ದಾವಣಗೆರೆ ಎಕ್ಸ್’ಪ್ರೆಸ್’ ಖ್ಯಾತಿಯ ಕರ್ನಾಟಕ ರಣಜಿ ತಂಡದ ನಾಯಕ ವಿನಯ್ ಕುಮಾರ್ ಫಿಟ್ನೆಸ್ ಸವಾಲು ಸ್ವೀಕರಿಸಿದ್ದು, ಬಳಿಕ ಮಾಜಿ-ಹಾಲಿ ಕ್ರಿಕೆಟಿಗರಿಗೆ ಹಾಗೂ ಸ್ಯಾಂಡಲ್’ವುಡ್ ತಾರೆ ಕಿಚ್ಚ ಸುದೀಪ್’ಗೆ ಫಿಟ್ನೆಸ್ ಚ್ಯಾಲೆಂಜ್ ಕೊಟ್ಟಿದ್ದಾರೆ

ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಕೊಟ್ಟಿರೋ ಚ್ಯಾಲೆಂಜ್ ನನ್ನು ಸ್ವೀಕರಿಸಿರುವ ವಿನಯ್ ಕುಮಾರ್ ಜಿಮ್’ನಲ್ಲಿ ಕಸರತ್ತು ನಡೆಸಿ ತಾವು ಫಿಟ್ ಆಗಿರುವುದಾಗಿ ತೋರಿಸಿಕೊಟ್ಟಿದ್ದಾರೆ. ಇದಾದ ಬಳಿಕ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ವಿರೇಂದ್ರ ಸೆಹ್ವಾಗ್, ಈ ಬಾರಿ ಚೆನ್ನೈ ಸೂಪರ್’ಕಿಂಗ್ಸ್ ತಂಡ ಪ್ರತಿನಿಧಿಸಿದ್ದ ಹರ್ಭಜನ್ ಸಿಂಗ್, ಕರ್ನಾಟಕ ತಂಡದ ಸಹ ಆಟಗಾರರಾದ ಮನೀಶ್ ಪಾಂಡೆ, ಕರುಣ್ ನಾಯರ್, ಮಯಾಂಕ್ ಅಗರ್’ವಾಲ್ ಮತ್ತು ವಿನಯ್ ಕುಮಾರ್ ನೆಚ್ಚಿನ ಹೀರೋ ಕಿಚ್ಚ ಸುದೀಪ್’ಗೆ ಫಿಟ್ನೆಸ್ ಸವಾಲು ನೀಡಿದ್ದಾರೆ. ಇನ್ನು ಕಿಚ್ಚ ಸುದೀಪ್ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗರು ಈ ಸವಾಲನ್ನು ಸ್ವೀಕರಿಸುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com