ವಿಜಯ್ ಸೇತುಪತಿ ಅವರು ಸುಕುಮಾರನ್ ನಿರ್ದೇಶನದ ಪುಷ್ಪಾ ಚಿತ್ರದಿಂದ ಏಕೆ ಹೊರಗುಳಿದಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ
ವಿಜಯ್ ಸೇತುಪತಿ ಅಲ್ಲು ಅರ್ಜುನ್ ಅವರ ಮುಂಬರುವ ಚಿತ್ರ ಪುಷ್ಪಾ ಚಿತ್ರದಿಂದ ಹೊರಗುಳಿಯುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಸೌಂಡ್ ಮಾಡುತಿತ್ತು . ಈ ಸುದ್ದಿ ಆನ್‌ಲೈನ್‌ನಲ್ಲಿ ಬೆಳಕಿಗೆ ಬಂದ ನಂತರ, ಅವರು ಯಾಕೆ ಹೊರನಡೆದರು ಎಂದು ಅಭಿಮಾನಿಗಳು ಚಿಂತಿಸುತಿದ್ದಾರೆ . ಈಗ, ಇತ್ತೀಚಿನ ವರದಿಯಲ್ಲಿ, ವಿಜಯ್ ಸೇತುಪತಿ ಬೇರೆ ಚಿತ್ರಗಳಲ್ಲಿ ಬ್ಯುಸಿ ಇರುವುದರಿಂದ ದಿನಾಂಕಗಳ ಕೊರತೆಯಿಂದಾಗಿ , ಹೊರಗುಳಿದಿದ್ದಾರೆ ಎಂದು ಹೇಳಲಾಗಿದೆ.

Allu Arjun PUSHPA Movie First Look ULTRA HD Posters WallPapers | Rashmika Mandanna
ಅವರು ನಿರ್ದೇಶಕ ಸುಕುಮಾರನ್ ಅವರನ್ನು ಖುದ್ದಾಗಿ ಭೇಟಿಯಾಗಿ ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದರು. ಚಿತ್ರದಲ್ಲಿನ ನಟರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.
ಕನ್ನಡ ನಟ ಡಾಲಿ ಧನಂಜಯ ಅವರು ಚಿತ್ರದ ಪಾತ್ರವರ್ಗದ ಇತ್ತೀಚಿನ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ . ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಅಲ್ಲು ಅರ್ಜುನ್ ಅವರ ಫಸ್ಟ್ ಲುಕ್ ಅನ್ನು ಅವರ ಜನ್ಮದಿನದಂದು ತಯಾರಕರು ಬಿಡುಗಡೆ ಮಾಡಿದ್ದಾರೆ
ಚಿತ್ರ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಕನ್ನಡ ಎಂಬ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪುಷ್ಪಾ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಅವರ ಸಂಗೀತವಿದೆ. ಓಹ್ ಮೈ ಕಡವುಲೆಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು, ತಲಪತಿ ವಿಜಯ್ ಅವರ ಮಾಸ್ಟರ್‌ನಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ .
ಟಾಲಿವುಡ್ ಚಿತ್ರ ಉಪ್ಪೇನಾದಲ್ಲಿ ವಿಜಯ್ ಸೇತುಪತಿ ಮುಖ್ಯ ಎದುರಾಳಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಕಾಲಿವುಡ್ ಚಿತ್ರಗಳಿಗೆ ಸಂಬಂಧಪಟ್ಟಂತೆ, ಅವರು ಲಾಬಾಮ್, ಕಾತು ವಾಕುಲಾ ರೆಂಡು ಕಡಲ್ ಮತ್ತು ಮುತ್ತಯ್ಯ ಮುರಳೀಧರನ್ ಅವರ ಜೀವನಚರಿತ್ರೆ ಯಾಧಾರಿತ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ . ಇತ್ತೀಚೆಗೆ, ಅವರ ತುಘಲಕ್ ದರ್ಬಾರ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿ ಭಾರಿ ಗಮನ ಸೆಳೆಯಿತು.