‘ಜೀವ್ನಾನೇ ನಾಟ್ಕ ಸಾಮಿ’ ಸಿನಿಮಾದ “ಕದ್ದು ಮುಚ್ಚಿ…” ಹಾಡು ಬಿಡುಗಡೆ ಮಾಡಿದ ವಿಜಯ್ ರಾಘವೇಂದ್ರ…

Published on

616 Views

ರಂಗಭೂಮಿ ಹಿನ್ನೆಲೆಯಿಂದ ‌ಬಂದಿರುವ ರಾಜು ಭಂಡಾರಿ ರಾಜಾವರ್ತರವರ ನಿರ್ದೇಶನದ ‘ಜೀವ್ನಾನೇ ನಾಟ್ಕ ಸಾಮಿ’ ಸಿನಿಮಾದ ಎರಡನೇ ಹಾಡನ್ನು ವಿಜಯ್ ರಾಘವೇಂದ್ರ ಬಿಡುಗಡೆ ಮಾಡಿದ್ದು, ಇಂದು (ಅಕ್ಟೋಬರ್‌30) ರಂದು ಆನಂದ್ ಆಡಿಯೋ ಯ್ಯೂಟ್ಯೂಬ್ ಚಾನಲ್‌ನಲ್ಲಿ ಲಭ್ಯವಾಗಲಿದೆ. ಅತಿಶಯ ಜೈನ್ ರಾಗ ಸಂಯೋಜನೆ ಮಾಡಿರುವ, ನಿರ್ದೇಶಕ ರಾಜು ಭಂಡಾರಿ ರಾಜಾವರ್ತರವರೇ ಸಾಹಿತ್ಯ ರಚಿಸಿರುವ “ಕದ್ದು ಮುಚ್ಚಿ ನೋಡಬೇಡ….. ಕನಸೇ ನನ್ನ ಕಾಡಬೇಡ…..” ಎನ್ನುವ ಹಾಡನ್ನು ಈ ಚಿತ್ರದಲ್ಲಿ ಅಭಿನಯಿಸಿರುವ ಗಾಯಕ,ನಟ ಶ್ರೀ ಹರ್ಷ ಹಾಡಿದ್ದಾರೆ.

‘ಜೀವ್ನಾನೇ ನಾಟ್ಕ ಸಾಮಿ’ ಚಿತ್ರದ ಮೊದಲ ಹಾಡನ್ನು ಈ‌ ಹಿಂದೆ ಡಾಲಿ ಖ್ಯಾತಿಯ ಧನಂಜಯ್ ರಿಲೀಸ್ ಮಾಡಿದ್ದರು. “ಮೂರು ದಿನದ ಮಾರ್ಕೆಟ್….” ಎಂಬ ಹಾಡನ್ನು ನವೀನ್ ಸಜ್ಜು ಹಾಡಿದ್ದರು. 

ನಟ ಕಿರಣ್ ರಾಜ್ ಮತ್ತು ಶ್ರೀಹರ್ಷ (ಜೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿ) ಪವಿತ್ರ ಕೋಟ್ಯಾನ್ ಮತ್ತು ಅನಿಕ ರಮ್ಯ ಸೇರಿದಂತೆ ಹಲವರು ಪ್ರಮುಖ ತಾರಾಗಣದಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಉಮೇಶ್ ಆರ್‌ಬಿ ಅವರ ಸಂಕಲನವಿದ್ದು, “ಯಥಾ ದೃಷ್ಟಿ ತಥಾ ಸೃಷ್ಟಿ” ಎಂಬ ಭಗವದ್ಗೀತೆಯ ಸೂಕ್ತಿಯ ಹಿನ್ನೆಲೆಯಲ್ಲಿ ಮೂಡಿಬಂದ ಚಿತ್ರದ ಕಥಾವಸ್ತುವಿನಲ್ಲಿ ಮನರಂಜನೆಯ ಜೊತೆಗೆ ಸಾಮಾಜಿಕ ಕಳಕಳಿ ಸಂದೇಶವಿದೆ. ಆರ್ಯ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ, ಶ್ರೀಮತಿ ಲಲಿತಾ ರಾಜಶೇಖರ್ ಶಿರಹಟ್ಟಿ ನಿರ್ಮಿಸಿರುವ ‘ಜೀವ್ನಾನೇ ನಾಟ್ಕ ಸಾಮಿ’ ಈ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com