ರಶ್ಮಿಕಾ ಅಲ್ಲ, ಅಲ್ಲಿ ಯಾರೇ ಇದ್ರೂ ಕಿಸ್ ಮಾಡ್ತೀನಿ : ವಿಜಯ್ ದೇವರಕೊಂಡ

Published on

383 Views

ದಕ್ಷಿಣ ಭಾರತದ ಇಮ್ರಾನ್ ಹಸ್ಮಿ ಎಂದೇ ಖ್ಯಾತಿ ಪಡೆದಿರುವ ನಟ ವಿಜಯ್ ದೇವರಕೊಂಡ ತಮ್ಮ ಚಿತ್ರಗಳಲ್ಲಿ ಕಿಸ್​​ ಸೀನ್​​​ಗಳ ಬಗ್ಗೆ ಮಾತಾಡಿದ್ದಾರೆ. ಅದರಲ್ಲೂ ಕನ್ನಡತಿ ರಶ್ಮಿಕಾ ಮಂದಣ್ಣ ಜತೆಗಿನ ಲಿಪ್ ​ ​​​​​-ಲಾಕ್​​ಗಳ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯ್,
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ‘ಒಂದು ಸಿನಿಮಾದಲ್ಲಿ ಅಂತಹ ಸೀನ್​​ಗಳ ಅಗತ್ಯವಿದ್ದರೆ ಕೇವಲ ರಶ್ಮಿಕಾ ಮಾತ್ರವಲ್ಲ, ಆ ಜಾಗದಲ್ಲಿ ಯಾರೇ ಇದ್ದರೂ ನಾನು ಕಿಸ್ ಮಾಡುತ್ತೇನೆ. ಒಂದು ವೇಳೆ ಅಲ್ಲಿ ಖಾಲಿ ಚೇರ್​ ಇದ್ದರೂ ಕೂಡ ಅದೇ ರೀತಿ ರೊಮ್ಯಾನ್ಸ್ ಮಾಡ್ತೇನೆ. ಒಬ್ಬ ನಟನಾಗಿ ಈ ರೀತಿ ನಾನು ಮಾಡಲೇಬೇಕು. ಆದರೆ, ಪ್ರೇಕ್ಷಕರಿಗೆ ಅದು ನಿಜ ಎಂದು ನಂಬುವಂತೆ ನಾವು ತೋರಿಸಬೇಕು. ಅದು ಎಮೋಷನಲ್​ ಅಥವಾ ರೊಮ್ಯಾನ್ಸ್​ ಸೀನ್​ ಆಗಿರಬಹುದು, ಜನರು ಪರದೆಯ ಮೇಲೆ ನೋಡುತ್ತಿರುವುದು ನಿಜವೆಂದು ನಂಬುವಂತೆ ಒಬ್ಬ ನಟ ಮಾಡಬೇಕು ಎಂದಿದ್ದಾರೆ.

ಇನ್ನು ಸೆಂಟಿಮೆಂಟ್​, ಪ್ರಚಾರ ಗಿಟ್ಟಿಸಿಕೊಳ್ಳಲು ಲಿಪ್​-ಲಾಕ್ ದೃಶ್ಯ ಸೇರಿಸಲಾಗುತ್ತದೆ ಎಂಬುವುದು ಮೂರ್ಖತನದ ಮಾತು. ಮುತ್ತಿಕ್ಕುವ ದೃಶ್ಯಗಳಿರುವ ಸಿನಿಮಾಗಳೆಲ್ಲವು ಹಿಟ್ ಆಗುತ್ತವೆ ಎಂದು ನಂಬುವುದು ಕೂಡ ಮುಠ್ಠಾಳತನ ಎಂದಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com