ವಿದ್ಯಾ ಬಾಲನ್ ಅಭಿನಯದ ‘ಶಕುಂತಲಾ ದೇವಿ’ ಮೋಷನ್ ಪೋಸ್ಟರ್, ಟ್ರೇಲರ್ ಬಿಡುಗಡೆಯ ದಿನಾಂಕ

Published on

349 Views

ಬಾಲಿವುಡ್‌ನ ಪ್ರತಿಭೆ ವಿದ್ಯಾ ಬಾಲನ್ ತಮ್ಮ ಮುಂದಿನ ಚಿತ್ರ ‘ಶಕುಂತಲಾ ದೇವಿ’ ಜೀವನಚರಿತ್ರೆಯಲ್ಲಿ ಕಾಣಿಸಿಕೊಳ್ಳಲಿದ್ದು,ಈ ಚಿತ್ರ ಮಾನವ ಕ್ಯಾಲ್ಕುಲೇಟರ್ ಎಂದು ಕರೆಯಲ್ಪಡುವ ಗಣಿತ ಮಾಂತ್ರಿಕ ಶಕುಂತಲಾ ದೇವಿ ಅವರನ್ನು ಆಧರಿಸಿದ ಚಿತ್ರವಾಗಿದೆ . ಇದು ಜುಲೈ 31, 2020 ರಂದು ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವೀಡಿಯೊ ಅಲ್ಲಿ ಬಿಡುಗಡೆಯಾಗುತ್ತಿದೆ.

ಮಾನಸಿಕ ಗಣಿತದಲ್ಲಿ ಶಕುಂತಲಾ ದೇವಿಯ ಸಾಮರ್ಥ್ಯ ಮತ್ತು ಪರಾಕ್ರಮ ಇವರನ್ನು 1982 ರ ದಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಆವೃತ್ತಿಯಲ್ಲಿ ಸ್ಥಾನ ಗಳಿಸಿದೆ .ಚಿತ್ರದ ಟ್ರೈಲರ್ ಜುಲೈ 15, 2020 ರಂದು ಬಿಡುಗಡೆಯಾಗಲಿದೆ.

‘ಶಕುಂತಲಾ ದೇವಿ’ ಜೀವನಚರಿತ್ರೆಯಲ್ಲಿ ಸನ್ಯಾ ಮಲ್ಹೋತ್ರಾ, ಶಕುಂತಲಾ ದೇವಿ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ .

ಅಲ್ಲದೆ, ಜಿಶು ಸೇನ್‌ಗುಪ್ತಾ ಮತ್ತು ಅಮಿತ್ ಸಾಧ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಚಿತ್ರಕಥೆಯನ್ನು ಅನು ಮೆನನ್ ಮತ್ತು ನಯನಿಕಾ ಮಹತಾನಿ ಬರೆದರೆ, ಸಂಭಾಷಣೆಗಳನ್ನು ಇಶಿತಾ ಮೊಯಿತ್ರಾ ಬರೆದಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com