ಸಾಂಸ್ಕ್ರತಿಕ ನಾಡಿನಲ್ಲಿ ವೆನಿಲ್ಲಾ ಫ್ಲೆವರ್
ಚಿತ್ರರಂಗದ ಕಾರ್ಯಕ್ರಮಗಳು ಸಿನಿಕಾನ್ ಸಿಟಿಯಲ್ಲಿ ನಡೆಯುವುದು ಸಹಜ. ಅಪರೂಪಕ್ಕೆ ಎನ್ನುವಂತೆ ‘ವೆನಿಲ್ಲಾ’ ಚಿತ್ರದ ಧ್ವನಿಸಾಂದ್ರಿಕೆಯು ಮೈಸೂರಿನಲ್ಲಿ ಲೋಕಾರ್ಪಣೆಗೊಂಡಿತು. ದರ್ಶನ್‍ಗೆ ಮೈಸೂರು ಪ್ರಿಯವಾಗಿದ್ದರಿಂದ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ನಿರ್ದೇಶಕ ಜಯತೀರ್ಥ ಮಾತನಾಡಲು ಶುರು ಮಾಡಿದಾಗ ಜೈಕಾರ ಕೇಳಿಬಂತು. ಇದಕ್ಕೆ ಅವರು ಇದನ್ನು ಕರೆಸಿಕೊಳ್ಳಲು ಅವರಿಗೆ ಮಾತ್ರ ಸಾಧ್ಯ, ನೀವುಗಳು ಏನಿದ್ದರೂ ಪ್ರೀತಿ ಕೊಡಿ. ಬ್ಯೂಟಿಫುಲ್ ಮನಸುಗಳು ಆಡಿಯೋ ಸಿಡಿಯನ್ನು ದರ್ಶನ್ ಅವರು ಬಿಡುಗಡೆ ಮಾಡಿದ್ದು ಹಿಟ್ ಆಗಿತ್ತು. ಇದು ಸಹ ಅದೇ ಸಾಲಿಗೆ ಸೇರುವುದೆಂಬ ನಂಬಿಕೆ ಇದೆ. ಅವಿನಾಶ್ ಅವರು ಮಂಡ್ಯ ರಮೇಶ್ ಶಾಲೆಯಲ್ಲಿ ತರಭೇತಿ ಪಡೆದುಕೊಂಡು ಚೆನ್ನಾಗಿ ನಟಿಸಿದ್ದಾರೆ. ಮಗನ ಆಸೆಗೆ ಅಪ್ಪ ನಿರ್ಮಾಣ ಮಾಡಿರುವುದು ಸಂತಸದ ವಿಷಯ. ಮರ್ಡರ್ ಮಿಸ್ಟ್ರೀ ಕತೆಯಾಗಿದೆ. ಐದು ಹಾಡುಗಳಲ್ಲಿ ಜಯಂತ್‍ಕಾಯ್ಕಣಿ, ಪತ್ರಕರ್ತ ಮದನ್‍ಬೆಳ್ಳಿಸಾಲು ಉಳಿದಂತೆ ಮೂರು ಹಾಡುಗಳಿಗೆ ಸ್ಪರ್ಧೆಯಲ್ಲಿ ವಿಜೇತರಾದವರ ಸಾಹಿತ್ಯವನ್ನು ಬಳಸಲಾಗಿದೆ ಎಂದರು.
ಮಂಡ್ಯ ರಮೇಶ್ ರಂಗಸಂತ ಇದ್ದಂತೆ. ಅವರ ಗರಡಿಯಿಂದ ಪಳಗಿದವರಿಗೆ ಭವಿಷ್ಯ ಇದೆ. ಭಾರತೀಯ ಚಿತ್ರರಂಗದಲ್ಲಿ ನಾಯಕ, ಅದರಲ್ಲೂ ಸಂಪೂರ್ಣ ಖಳನಾಯಕನಾಗಿ ಅಭಿನಯಿಸಿದ್ದು ಇಬ್ಬರು ಅಂತ ಹೇಳಬಹುದು. ಡಾ.ರಾಜ್‍ಕುಮಾರ್ ಅವರ ಭಕ್ತಪ್ರಹ್ಲಾದ, ದರ್ಶನ್ ನಟಿಸಿರುವ ಕುರುಕ್ಷೇತ್ರ. ಅವರ ಸಂಸ್ಥೆಯಿಂದ ಜೊತೆ ಜೊತೆಯಲಿ ನಾಯಕನಾಗಿ ಅಭಿನಯಿಸಲು ಕರೆ ಬಂದಿತ್ತು. ಆಗ ಸಿಲ್ಲಿ ಲಲ್ಲಿ ಧಾರವಾಹಿಯ ನಿರ್ಮಾಪಕರು ಅವಕಾಶ ನೀಡಿದೆ ಇದ್ದ ಕಾರಣ ತಪ್ಪಿಹೋಯಿತು. ಈಗಲೂ ಪಶ್ಚತ್ತಾಪವಾಗುತ್ತಿದೆ ಎಂದು ಹೇಳಿದ್ದು ಇನ್ಸೆಪೆಕ್ಟರ್ ಪಾತ್ರ ಮಾಡಿರುವ ರವಿಶಂಕರ್‍ಗೌಡ.
ನಿರ್ದೇಶಕರು ಪ್ರಾರಂಭದಲ್ಲಿ ಎರಡು ಸಾಕು ಅಂತ ಐದು ಹಾಡುಗಳಿಗೆ ಕೆಲಸ ಕೊಡುತ್ತಾರೆ ಎನ್ನುವುದು ಬಿ.ಜೆ.ಭರತ್ ಮಾತು. ಈ ತಂಡದಲ್ಲಿ ನಾನು ನಟಿಸದೆ ಇದ್ದರೂ, ಸಂಪೂರ್ಣ ರಂಗಭೂಮಿ ತಂಡದವರು ಸಿದ್ದಪಡಿಸಿದ ಚಿತ್ರವಾಗಿದ್ದರಿಂದ ಇಂದು ಭಾಗಿಯಾಗಿರುವುದು ಖುಷಿ ನೀಡಿದೆ. ನೀನಾಸಂ ತಂಡದಲ್ಲಿ ಪಳಗಿದ ದರ್ಶನ್ ಇಂದು ಎತ್ತರಕ್ಕೆ ಹೋಗಿದ್ದಾರೆ. ಆದರೂ ಅದೇ ನಯ ವಿನಯ ಕಾಣುತ್ತದೆ. ಹಾಲು ವ್ಯಾಪಾರ, ಲೈಟ್‍ಮ್ಯಾನ್ ಹೀಗೆ ಸಾಮಾನ್ಯ ಹುಡುಗನಾಗಿ ಇಂದು ಅಸಾಮಾನ್ಯರಾಗಿ ಬೆಳೆದಿದ್ದ್ದರೂ ಮನಸ್ಸು ಮಗು ತರಹ. ಅದು ಅವನ ದೊಡ್ಡ ಗುಣ. ತಾನು ಬೆಳೆದಂತೆ ಇತರರು ಬೆಳಯಬೇಕು ಎಂದು ಬಯಸುವ ಕೆಲವೇ ನಾಯಕರುಗಳಲ್ಲಿ ಇವರು ಸೇರಿಕೊಂಡಿದ್ದಾರೆ. ತಂಡಕ್ಕೆ ಶುಭವಾಗಲಿ ಎನ್ನುತ್ತಾರೆ ಮಂಡ್ಯರಮೇಶ್.
ಅಪ್ಪನ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ ಇರುವದರಿಂದಲೇ ನಾಯಕನಾಗಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದೇನೆ. ನಿರ್ದೇಶಕರ ಹಿಂದಿನ ಸಿನಿಮಾ ನೋಡಿರಲಿಲ್ಲ. ಅವರೊಂದಿಗೆ ಐದು ನಿಮಿಷ ಚರ್ಚೆ ಮಾಡಿದಾಗ ಇವರೇ ಸೂಕ್ತ ಅಂತ ನಿರ್ಧರಿಸಲಾಯಿತು. ದರ್ಶನ್ ಸರ್ ಗುಣಗಳಲ್ಲಿ ಶೇಕಡ 5 ರಷ್ಟು ಕಲಿತುಕೊಳ್ಳುತ್ತೇನೆ ಎಂದು ‘ಆವರಿಸು’ ಗೀತೆಯ ಸಾಲನ್ನು ಹಾಡಿದರು ಅವಿನಾಶ್. ತುಮಕೂರಿನ ಸ್ವಾತಿ ಮಾತನಾಡಿ ನಿರ್ದೇಶಕರ ಹಿಂದಿನ ಚಿತ್ರದಲ್ಲಿ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದೆ. ಇದರಲ್ಲಿ ನಾಯಕಿ ಮಾಡಿದ್ದಕ್ಕೆ ಥ್ಯಾಂಕ್ಸ್ ಎಂದರು.
ನಾನು ಮೊದಲು ಬಣ್ಣ ಹಚ್ಚುವಂತೆ ಮಾಡಿದ್ದು ಮಂಡ್ಯಾ ರಮೇಶ್. ಅವರಿಂದ ಸಾಕಷ್ಟು ಕಲಿತಿರುವೆ. ಪ್ರಾರಂಭದಲ್ಲಿ ಎಲಕ್ಟ್ರಿಕ್ ಕೆಲಸ ಮಾಡುವಾಗ ನನ್ನೊಂದಿಗೆ ಕಿರಣ್‍ಹಂಪಾಪುರ ಇದ್ದರು. ಈ ಚಿತ್ರಕ್ಕೆ ಅವರು ಛಾಯಗ್ರಾಹಕರಾಗಿ ಇರುವುದು ಸಂತೋಷ ಆಗಿದೆ. ಡ್ಯಾನ್ಸ್, ಫೈಟ್ ಬರುವುದು ಕೇವಲ ಅರ್ಧ ಗಂಟೆ. ಉಳಿದ ಎರಡು ಗಂಟೆ ಅಭಿನಯ. ಮೊದಲು ಅದನ್ನು ಕಲಿಯಬೇಕು. 50 ಚಿತ್ರಗಳಲ್ಲಿ ನಟಿಸಿದ್ದರೂ 51ನೇ ಚಿತ್ರಕ್ಕೆ ನಾನು ಹೊಸಬ. ಆ ತರಹ ಅಂದುಕೊಂಡು ಶುರು ಮಾಡುತ್ತೇನೆಂದು ಎಂದು ದರ್ಶನ್ ಅವರು ಹೇಳುವಾಗ ಜೈಕಾರ, ಶಿಳ್ಳೆಗಳು ಕೇಳಿಬಂತು. ನಿರ್ಮಾಪಕ ಜಯರಾಂ ಮಾತನಾಡಲಿಲ್ಲ. ಚಿತ್ರವು ಮಾರ್ಚ್‍ನಲ್ಲಿ ತೆರೆಗೆ ಬರುವ ಸಾದ್ಯತೆ ಇದೆ.