ವೀರ ಬೇಟೆಗಾರ” ಭಾನುವಾರ (೦೮.೧೧.2020) ¸ 6.30ಕ್ಕೆ ನಿಮ್ಮ ಉದಯ ಟಿವಿಯಲ್ಲಿ

Published on

558 Views

ವೀರ ಬೇಟೆಗಾರ ಎಂಬುದು 2009 ರ ಭಾರತೀಯ ಆಕ್ಷನ್ ಚಿತ್ರವಾಗಿದ್ದು, ಬಿ. ಬಾಬುಸಿವನ್ ನಿರ್ದೇಶಿಸಿದ ಮತ್ತು ಎವಿಎಂ ಪ್ರೊಡಕ್ಷನ್ಸ್ ನಿರ್ಮಿಸಿದೆ. ಈ ಚಿತ್ರದಲ್ಲಿ ವಿಜಯ್ ಮತ್ತು ಅನುಷ್ಕಾ ನಟಿಸಿದರೆ, ಶ್ರೀಹರಿ, ಸಲೀಮ್ ಘೌಸ್, ರವಿಶಂಕರ್ ಮತ್ತು ಸಯಾಜಿ ಶಿಂಧೆ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಎವಿಎಂ ಪ್ರೊಡಕ್ಷನ್ಸ್‌ನ ವಿಜಯ್ ಅವರ ಮೊದಲ ಚಿತ್ರ ಇದು.
ಅಪರಾಧದ ಮುಖ್ಯಸ್ಥನ ಪಿತೂರಿಯಿಂದಾಗಿ ಆಟೋ ರಿಕ್ಷಾ ಚಾಲಕನ ಜೀವನದಲ್ಲಿ ಅನಿರೀಕ್ಷಿತ ಘಟನೆಗಳ ಕಥೆ ಈ ಚಿತ್ರ ಕಥೆ.
ರವಿ ಯುವನಾಯಕ. ಅವರು ತಮ್ಮ ರೋಲ್ ಮಾಡೆಲ್, ಎನ್‌ಕೌಂಟರ್ ಸ್ಪೆಷಲಿಸ್ಟ್ ಡಿಸಿಪಿ ದೇವರಾಜ್ ಐಪಿಎಸ್ ಅವರಂತೆ ಪೊಲೀಸ್ ಆಗಬೇಕೆಂಬ ಆಸೆ ಹೊಂದಿರುತ್ತಾರೆ. ತನ್ನ ಹನ್ನೆರಡನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ, ಚೆನ್ನೈನ ಕಾಲೇಜಿಗೆ ಸೇರುತ್ತಾರೆ‌ ಮತ್ತು ಆಟೋ ರಿಕ್ಷಾ ಓಡಿಸುತ್ತ ಜೀವನವನ್ನು ನಡೆಸುತ್ತಿರುತ್ತಾನೆ. ಇಂತಹ‌ ಸಮಯದಲ್ಲಿ ಅವನು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಸುಶೀಲಾಳನ್ನು ಭೇಟಿಯಾಗುತ್ತಾನೆ ಅಲ್ಲಿಂದ ಅವಳನ್ನು ಪ್ರೀತಿಸಲು ಶುರುಮಾಡುತ್ತಾನೆ ಮೊದಲಿಗೆ ರವಿಯ ಪ್ರೀತಿಯನ್ನು ಸುಶೀಲಾ ತಿರಸ್ಕರಿಸಿದರೂ, ಅಜ್ಜಿಯ ಸಹಾಯದಿಂದ ರವಿ ಸುಶೀಲಾಳ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಾನೆ. ಇಲ್ಲಿಂದ ಮುಂದೆ ಚಲನಚಿತ್ರವು ಅನಿರೀಕ್ಷಿತ ತಿರುವುಗಳೊಂದಿಗೆ ಮುಂದುವರಿಯುತ್ತದೆ ..

ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂವಿ “ವೀರ ಬೇಟೆಗಾರ ” ಇದೇ ಭಾನುವಾರ (08.11.2020) ಸಂಜೆ 6.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com