ಶುಕ್ರವಾರ ತೆರೆಗೆ `ವರ್ತಮಾನ’ | Varthamana

Published on

488 Views

ಅಲ್ಟಿಮೆಟ್ ಮೂವೀಸ್ ಲಾಂಛನದಲ್ಲಿ ಮನು ಬಿಲ್ಲೆಮನೆ ಹಾಗೂ ಹೇಮಾವತಿ ಟಿ ಸಿಗ ಅವರು ನಿರ್ಮಿಸಿರುವ `ವರ್ತಮಾನ` ಚಿತ್ರ ಈ ವಾರ ರಾಜ್ಯಾದ್ಯಂತ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಉಮೇಶ್ ಅಂಶಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರ ವಿಶೇಷ ಕಥೆಯನ್ನೊಳಗೊಂಡಿದೆ. ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ. ಚಿತ್ರದ ಅವಧಿ ಕೇವಲ ಒಂದು ಗಂಟೆ ಐವತ್ತು ನಿಮಿಷಗಳು ಎನ್ನುತ್ತಾರೆ ನಿರ್ದೇಶಕರು.
ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ಸಂಜನಾ ಪ್ರಕಾಶ್, ವಾಣಿಶ್ರೀ, ಸ್ವಪ್ನರಾಜ್, ದೀಪಕ್ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ಗೋವಿಂದರಾಜು ಛಾಯಾಗ್ರಹಣ, ಸರವಣ ಸಂಗೀತ ನಿರ್ದೇಶನ ಹಾಗೂ ವಿಶ್ವನಾಥ್ ಅವರ ಸಂಕಲನವಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com