ಗ್ರಾಹಕರ ಮನಗೆದ್ದ ವನಸ್ಥಾ ಆಹಾರ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ

Published on

515 Views

ಕಲಬೆರಕೆ ಹಾಗೂ ರಾಸಾಯನಿಕ ಮುಕ್ತ, ಕೃತಕ ಬಣ್ಣ, ಸಂರಕ್ಷಕಗಳನ್ನು ಬಳಸದೆ; ಗ್ರಾಹಕರ ಆರೋಗ್ಯದ ಏಕನಿಷ್ಠ ಕಾಳಜಿಯೊಂದಿಗೆ ನೈಸರ್ಗಿಕವಾಗಿ ಆಹಾರ ಪದಾರ್ಥಗಳು ಹಾಗೂ ಮಸಾಲೆಗಳನ್ನು ಉತ್ಪಾದಿಸುವ ಉದ್ದೇಶದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಕರಾವಳಿ ಸೊಗಡಿನ ಸಂಸ್ಥೆಯೇ ವನಸ್ಥಾ ಆಗ್ರೋ ಫುಡ್ ಪ್ರೈ.ಲಿ..ಈ ಸಂಸ್ಥೆಯು 19.12.2020 ರ ಶನಿವಾರ ಮಧ್ಯಾಹ್ನ ಗಂಟೆ 12.00 ಕ್ಕೆ ಬೆಂಗಳೂರು ಮಹಾನಗರದ ರಾಜಭವನ ರಸ್ತೆ, ವಸಂತನಗರದಲ್ಲಿರುವ “ದ ಕ್ಯಾಪಿಟಲ್” ಹೋಟೇಲಿನಲ್ಲಿ ಆಹಾರೋತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಮಾರಂಭವನ್ನು ಏರ್ಪಡಿಸಿತ್ತು.

ನಾಡಿನಾದ್ಯಂತ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ವನಸ್ಥಾ ಉತ್ಪನ್ನಗಳನ್ನು ಒದಗಿಸುವ ದೃಷ್ಟಿಯಿಂದ ಆಹಾರ – ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಇರುವ ಬಿಗ್_ಬಾಸ್ ಸೀಝನ್-7ರ ವಿಜೇತ ಹಾಗೂ ಉದಯೋನ್ಮುಖ ಚಲನಚಿತ್ರ ನಟ ಶ್ರೀಯುತ ಶೈನ್ ಶೆಟ್ಟಿ ಅವರನ್ನು ‘’ವನಸ್ಥಾ’’ ಉತ್ಪನ್ನಗಳ ರಾಯಭಾರಿಯಾಗಿ ನಿಯೋಜಿಸಲಾಗಿದೆ. ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ನಟ ಶೈನ್‌ ಶೆಟ್ಟಿಯವರು,ನಂತರ ಅಧಿಕೃತವಾಗಿ ಆಹಾರೋತ್ಪನ್ನಗಳನ್ನು ಬಿಡುಗಡೆ ಮಾಡಿದರು..ಅಲ್ಲದೆ ರಾಯಭಾರಿಯಾ ಸಂಸ್ಥೆಯೊಂದಿಗಿನ ಒಪ್ಪಂದಕ್ಕೆ ಇಂದು ಸಹಿ ಹಾಕಿದ್ದಾರೆ. ಈ ಕಾರ್ಯಕ್ರಮದಲ್ಲಿ ಶ್ರೀಯುತ ಶೈನ್ ಶೆಟ್ಟಿಯವರೊಂದಿಗೆ ಕಿರುತೆರೆ ನಟಿಯರಾದ ಭೂಮಿ ಶೆಟ್ಟಿ ಮತ್ತು ಚಂದನ ಅವರೂ ಭಾಗವಹಿಸಿದ್ದಾರೆ.

ಅವಧೂತ ಶ್ರೀ ಶ್ರೀ ವಿನಯ ಗುರೂಜಿಯವರು ಈ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿದ್ದು, “ಫಾಸ್ಟ್‌ ಫುಡ್‌ ಲೈಪ್‌ ನಲ್ಲಿ ಮರೆಯಾಗುತ್ತಿರುವ ಪಾರಂಪರಿಕ ರುಚಿಯನ್ನು ಮತ್ತೆ ಜನರ ಮುಂದೆ ತರುವ ವನಸ್ಥಾ ಸಂಸ್ಥೆಯ ಪ್ರಯತ್ನ ಮೆಚ್ಚುವಂಥದ್ದು. ಸಂಸ್ಥೆಯು ರಾಸಾಯನಿಕ ಮುಕ್ತವಾದಂತಹ ಅನೇಕ ಬಗೆ ಆಹಾರೋತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವುದರಿಂದ ಸಮಾಜದ ಆರೋಗ್ಯದ ದೃಷ್ಟಿಯಿಂದ ಉತ್ತಮ ಕೆಲಸವಾಗಿದೆ” ಎಂದು ಮೆಚ್ಚುಗೆಯ ಮಅಉಗಳನ್ನಾಡಿದ್ದಾರೆ. ಇನ್ನು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ|| ಬೇಳೂರು ರಾಘವೇಂದ್ರ ಶೆಟ್ಟಿ (ಅಧ್ಯಕ್ಷರು, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ) ಅವರು ಭಾಗವಹಿಸಿದ್ದಾರೆ.

ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸಂಸ್ಥಾಪಕ ಶ್ರೀಯುತ ನಟರಾಜ್ ಕಲ್ಯಾಣಿ ಮತ್ತು ನಿರ್ದೇಶಕರಾದ ಶ್ರೀಯುತ ರಾಮ್_ಪ್ರದೀಪ್ ಆಚಾರ್, ಆರ್ಥಿಕ ಸಲಹೆಗಾರರಾದ ಶ್ರೀಯುತ ಆನಂದ ಪಿ. ಎಸ್., ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕರಾದ ಶ್ರೀಯುತ ವಿಶ್ವಜ್ಞಾಚಾರ್, ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀಯುತ ಧನಂಜಯ್ ನೆಲ್ಯಾಡಿ ಹಾಗೂ ವಿತರಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com